ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಸಿಪಿಐ(ಎಂ) ಪೊಲಿಟ್ ಬ್ಯೂರೋ ಸಭೆಗೆ ಚಾಲನೆ
ಸಿಪಿಐ(ಎಂ)ನ ವರಿಷ್ಠ ಮಂಡಳಿಯ ಎರಡು ದಿನಗಳ ಪೊಲಿಟ್ ಬ್ಯೂರೋ ಸಭೆ ಸೋಮವಾರ ನವದೆಹಲಿಯಲ್ಲಿ ಆರಂಭಗೊಂಡಿರುವುದಾಗಿ ಪಕ್ಷದ ಮೂಲಗಳು ತಿಳಿಸಿವೆ.

ಇಂದು ನಡೆಯುತ್ತಿರುವ ಈ ಮಹತ್ವದ ಪೊಲಿಟ್ ಬ್ಯೂರೋ ಸಭೆಯಲ್ಲಿ ಬಾಂಗ್ಲಾದೇಶದ ವಿವಾದಿತ ಲೇಖಕಿ ತಸ್ಲೀಮಾ ನಸ್ರೀನ್ ಬರಹ ಹಾಗೂ ಆಡಳಿತರೂಢ ಪಶ್ಚಿಮಬಂಗಾಳ ಸರಕಾರ ತಸ್ಲೀಮಾ ನಸ್ರೀನ್ ಅವರನ್ನು ಮತ್ತೆ ಕೋಲ್ಕತಾಕ್ಕೆ ಮರಳಲು ಅವಕಾಶ ನೀಡಲು ತಯಾರಿದೆಯೇ ಎಂಬ ವಿಷಯದ ಕುರಿತು ಚರ್ಚೆ ನಡೆಯಲಿದೆ ಎಂದು ಸಿಪಿಐ(ಎಂ)ವಕ್ತಾರರು ತಿಳಿಸಿದ್ದಾರೆ.

ಅಲ್ಲದೇ ಈಗಾಗಲೇ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದಕ್ಕೆ ಸಂಬಂಧಿಸಿದಂತೆ ಇಂಟರ್‌‌ನ್ಯಾಶನಲ್ ಅಟೋಮಿಕ್ ಎನರ್ಜಿ ಎಜಿನ್ಸಿ(ಐಎಇಎ)ಯೊಂದಿಗೆ ಮಾತುಕತೆ ನಡೆಸಲು ಎಡಪಕ್ಷಗಳು ಗ್ರೀನ್ ಸಿಗ್ನಲ್ ನೀಡಿದ್ದು, ಸಂಸತ್‌‌ನಲ್ಲಿ ಪರಮಾಣು ಚರ್ಚೆಗೆ ಸಂಬಂಧಿಸಿದ ಚರ್ಚೆ ಮತ್ತು ಮತದಾನದ ಕುರಿತು ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುತ್ತಿದೆ.

ಹಿಂಸಾಕಾಂಡದಿಂದ ನಲುಗಿ ಹೋಗಿರುವ ಪಶ್ಚಿಮಬಂಗಾಳದ ನಂದಿಗ್ರಾಮಕ್ಕೆ ಕೇಂದ್ರ ಸಂಸದೀಯ ತಂಡ ಭೇಟಿ ನೀಡಿದ ಬಳಿಕದ ಸ್ಥಿತಿಗತಿಯ ವಿಶ್ಲೇಷಣೆ ನಡೆಯಲಿದೆ.

ಇಂದು ನಡೆಯಲಿರುವ ಸಭೆಯಲ್ಲಿ ಕೊಯಮತ್ತೂರಿನಲ್ಲಿ ಮುಂದಿನ ವರ್ಷ ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಪಕ್ಷದ ವರಿಷ್ಠ ಸಭೆಯ ಕುರಿತು ಅಂತಿಮ ರೂಪುರೇಷೆಯ ಕುರಿತು ನಿರ್ಧಾರ ಕೈಗೊಳ್ಳಲಾಗುತ್ತಿದೆ. ಪ್ರತಿ ಮೂರು ವರ್ಷಗಳಿಗೊಮ್ಮೆ ಪಕ್ಷ ಪೊಲಿಟ್ ಬ್ಯೂರೋದ ಕಾರ್ಯಕಾರಿ ಮಂಡಳಿಗೆ ನೂತನ ಸದಸ್ಯರನ್ನು ಹಾಗೂ ಕೇಂದ್ರ ಸಮಿತಿಗೆ ಆಯ್ಕೆ ಮಾಡಲಾಗುತ್ತದೆ.

ಈ ಬಗ್ಗೆ ಈಗಾಗಲೇ ನಿರ್ಧಾರ ಕೈಗೊಳ್ಳಲಾಗಿದ್ದು ಇಂದು ನಡೆಯುತ್ತಿರುವ ಸಭೆಯಲ್ಲಿ ಮುಂದಿನ ಸಭೆಯ ಮತ್ತು ಅಜೆಂಡಾದ ಕುರಿತು ಅಂತಿಮ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪಕ್ಷದ ಮೂಲಗಳು ತಿಳಿಸಿವೆ.
ಮತ್ತಷ್ಟು
ನಂದಿಗ್ರಾಮ: ತೀರ್ಪಿಗೆ ಗೌರವ ನೀಡಿ-ಗಾಂಧಿ
ಮಸಣ ಸೇರಿದ ಮದುವೆ ದಿಬ್ಬಣ
2 ವರ್ಷದಲ್ಲಿ 7000 ಯೋಧರ ರಾಜೀನಾಮೆ
ಮಹಿಳಾ ಕ್ರಿಕೆಟ್ ಆಟಗಾರ್ತಿ ಆತ್ಮಹತ್ಯೆ
ರೆಡ್ ರಿಬ್ಬನ್ ಎಕ್ಸ್‌ಪ್ರೆಸ್ ರೈಲಿಗೆ ಚಾಲನೆ
ಪಾರ್ಸೆಲ್ ಬಾಂಬ್ ಸ್ಫೋಟಿಸಿ ಬಾಲಕ ಸಾವು