ಏಮ್ಸ್‌ನ ಮಾಜಿ ನಿರ್ದೇಶಕ ಪಿ. ವೇಣುಗೋಪಾಲ್ ಅವರ ಅರ್ಜಿ ಕುರಿತು ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ವಿವಾದಾತ್ಮಕ ಏಮ್ಸ್ ಮಸೂದೆ ಜಾರಿಗೆ ತಂದಿರುವುದರ ವಿರುದ್ಧ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಅಂತಹ ಮರ್ಯಾದಸ್ಥ ವ್ಯಕ್ತಿಯನ್ನು ಆ ರೀತಿ ಅವಮಾನ ಮಾಡಿದ್ದೇಕೆ? ಒಬ್ಬ ವ್ಯಕ್ತಿಯನ್ನು ವಜಾ ಮಾಡುವ ಸಲುವಾಗಿ ಅಂತಹ ಶಾಸನ ತರುವ ಅಗತ್ಯವೇನಿತ್ತು" ಎಂದು ಸುಪ್ರೀಂಕೋರ್ಟ್ ಪ್ರಶ್ನಿಸಿದ್ದು, ಎರಡು ವಾರಗಳಲ್ಲಿ ಉತ್ತರಿಸುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿದೆ.
ಆದಾಗ್ಯೂ, ಮಸೂದೆಯು ರಾಷ್ಟ್ರಪತಿ ಅನುಮೋದನೆ ಪಡೆದಿರುವುದರಿಂದ ಅದಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿದರು.ಏಮ್ಸ್‌ನ ನೂತನ ನಿರ್ದೇಶಕರಾಗಿ ಡಾ. ಡೋಗ್ರಾ ನೇಮಕದಲ್ಲಿ ಕೂಡ ಮಧ್ಯಪ್ರವೇಶಕ್ಕೆ ಕೋರ್ಟ್ ನಿರಾಕರಿಸಿದೆ. ಮುಂದಿನ ವಿಚಾರಣೆವರೆಗೆ ಅವರು ಹೊಸ ಮುಖ್ಯಸ್ಥರಾಗಿ ಮುಂದುವರಿಯುತ್ತಾರೆಂದು ಅವರು ನುಡಿದರು.
ವಿವಾದಾತ್ಮಕ ಏಮ್ಸ್ ಮಸೂದೆಯನ್ನು ಸಂಸತ್ತಿನಲ್ಲಿ ಕಳೆದ ವಾರ ಅಂಗೀಕರಿಸಿ ಏಮ್ಸ್ ನಿರ್ದೇಶಕರ ಅಧಿಕಾರಾವಧಿ ಮತ್ತು ವಯೋಮಿತಿಯ ಮೇಲೆ ಸರ್ಕಾರ ನಿರ್ಬಂಧ ಹೇರಿತ್ತು. ಏಮ್ಸ್ ನಿರ್ದೇಶಕರ ಹುದ್ದೆಗೆ ನಿವೃತ್ತಿ ವಯೋಮಿತಿ ನಿಗಜಿ ಮಾಡಿದ ಕೇಂದ್ರದ ನಿರ್ಧಾರದ ವಿರುದ್ಧ ವೇಣುಗೋಪಾಲ್ ಗುರುವಾರ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದರು.
|