ಮಕ್ಕಳ ಮೇಲೆ ದೌರ್ಜನ್ಯದ ಬಗ್ಗೆ ಪೋಷಕರಿಗೆ ಶಿಕ್ಷಣ ನೀಡಿ ಅದರ ವಿರುದ್ಧ ಜಾಗೃತಿ ಮೂಡಿಸುವ ಸಲುವಾಗಿ ಮಕ್ಕಳ ತಜ್ಞರು ದೇಶಾದ್ಯಂತ ಮಕ್ಕಳ ವಿರುದ್ಧ ದೌರ್ಜನ್ಯದ ಎಲ್ಲ ಪ್ರಕರಣಗಳನ್ನು ವೈದ್ಯರು ಮತ್ತು ಸಮಾಜ ಸೇವಕರ ಬಹು ಏಜಂಟ್ ಜಾಲದ ಮೂಲಕ ವರದಿ ಮಾಡುವುದನ್ನು ಕಡ್ಡಾಯಗೊಳಿಸುವ ವಿಧಾನವನ್ನು ರೂಪಿಸುತ್ತಿದೆ. ಕುಟುಂಬದ ವೈದ್ಯರ ಮೂಲಕ ಇಂತಹ ಮಕ್ಕಳಿಗೆ ನೆರವು ನೀಡಲು ಭಾರತೀಯ ಮಕ್ಕಳ ವೈದ್ಯರ ಅಕಾಡೆಮಿಯು ಮಕ್ಕಳ ಮೇಲಿನ ದೌರ್ಜನ್ಯದ ಲಕ್ಷಣಗಳನ್ನು ಕುರಿತ ಕೈಪಿಡಿಯನ್ನು ಪ್ರಕಟಿಸಿದೆ.
"ಬ್ರಿಟನ್ ರೀತಿಯಲ್ಲಿ ಭಾರತದಲ್ಲಿ ಇಂತಹ ಪ್ರಕರಣಗಳನ್ನು ವರದಿ ಮಾಡಲೇಬೇಕೆಂದು ಕಡ್ಡಾಯವಿಲ್ಲ. ಆದ್ದರಿಂದ ನಾವು ಇಂತಹ ಪ್ರಕರಣಗಳನ್ನು ವರದಿ ಮಾಡುವ ವಿಧಿವಿಧಾನವನ್ನು ಕಾರ್ಯರೂಪಕ್ಕೆ ತರಲು ಯತ್ನಿಸಿದ್ದೇವೆ" ಎಂದು ಲೋಕಮಾನ್ಯ ತಿಲಕ್ ಆಸ್ಪತ್ರೆಯ ಸಮಾವೇಶದಲ್ಲಿ ವೈದ್ಯರು ಹೇಳಿದರು.
ಈ ಕೈಪಿಡಿಯನ್ನು ಸಾಮಾಜಿಕ ಕಾರ್ಯಕರ್ತರಿಗೆ ಮತ್ತು ವೈದ್ಯರಿಗೆ ಶಿಕ್ಷಣ ನೀಡಲು ತರಬೇತಿಯ ಉದ್ದೇಶಕ್ಕಾಗಿ ಬಳಸಿಕೊಳ್ಳಲಾಗುವುದು ಎಂದು ಮಕ್ಕಳ ಹಕ್ಕು ಮತ್ತು ರಕ್ಷಣೆ ಕಾರ್ಯಕ್ರಮದ ರಾಷ್ಟ್ರೀಯ ಸಂಸ್ಥೆಯ ಡಾ.ಅಂಜನಾ ಥಡಾನಿ ಹೇಳಿದರು.
|