ಡಿ.2000ದಲ್ಲಿ ಕೆಂಪು ಕೋಟೆ ಮೇಲೆ ದಾಳಿ ಪ್ರಕರಣದಲ್ಲಿ ಮೂವರು ವ್ಯಕ್ತಿಗಳು ಬಲಿಯಾದ ಘಟನೆಗೆ ಸಂಬಂಧಪಟ್ಟಂತೆ ಪಾಕಿಸ್ತಾನದ ಪೌರ ಲಷ್ಕರೆ ತಯ್ಬಾ ಉಗ್ರಗಾಮಿ ಮೊಹಮದ್ ಅಸ್ಫಕ್‌ಗೆ ನೀಡಿದ ಮರಣದಂಡನೆ ಶಿಕ್ಷೆಗೆ ಸುಪ್ರೀಂಕೋರ್ಟ್ ಸೋಮವಾರ ತಡೆಯಾಜ್ಞೆ ನೀಡಿದೆ.
ದೆಹಲಿ ಹೈಕೋರ್ಟ್ ವಿಚಾರಣೆ ನ್ಯಾಯಾಲಯದ ತೀರ್ಪನ್ನು ದೃಢೀಕರಿಸಿದ ವಿರುದ್ಧ ಅಸ್ಫಕ್ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಹಿನ್ನೆಲೆಯಲ್ಲಿ ಜಿ.ಪಿ. ಮಾಥುರ್ ಮತ್ತು ಸದಾಸಿವಂ ಅವರಿದ್ದ ಪೀಠವು ದೆಹಲಿ ಪೊಲೀಸರಿಗೆ ನೋಟೀಸ್ ನೀಡಿತು.
ವಿಚಾರಣೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ್ದ ಅಸ್ಫಕ್‌ನ ಭಾರತೀಯ ಪತ್ನಿ ರೆಹಮಾನಾ ಮತ್ತು ಶ್ರೀನಗರ ಮೂಲಕ ತಂದೆ-ಮಗ ದ್ವಯರಾದ ನಾಜಿರ್ ಅಹ್ಮದ್ ಮತ್ತು ಫಾರೂಕ್ ಅಹ್ಮದ್ ಅವರ ಶಿಕ್ಷೆಯನ್ನು ಹೈಕೋರ್ಟ್ ಬದಿಗಿರಿಸಿತ್ತು. 6 ಭಯೋತ್ಪಾದಕರು ಕೆಂಪುಕೋಟೆಗೆ ಮುತ್ತಿಗೆ ಹಾಕಿ ಎಡಬಿಡದೇ ಗುಂಡುಹಾರಿಸಿದ್ದರಿಂದ ಮೂವರು ವ್ಯಕ್ತಿಗಳು ಸತ್ತಿದ್ದರು.
ಕೆಂಪುಕೋಟೆಯಲ್ಲಿರುವ ಸೇನಾಸಿಬ್ಬಂದಿ ಪ್ರತಿದಾಳಿ ನಡೆಸಿದರೂ ಭಯೋತ್ಪಾದಕರು ಪರಾರಿಯಾಗುವುದರಲ್ಲಿ ಯಶಸ್ವಿಯಾಗಿದ್ದರು. ಅಸ್ಫಕ್‌ಗೆ ಮರಣದಂಡನೆಯೇ ಸೂಕ್ತ ಶಿಕ್ಷೆಯಾಗಿದ್ದು, ವಿಚಾರಣೆ ನ್ಯಾಯಾಲಯದ ತೀರ್ಪನ್ನು ಪುರಸ್ಕರಿಸುವುದಾಗಿ ಹೈಕೋರ್ಟ್ ತಿಳಿಸಿತ್ತು.
|