ಸಾಲಗಳ ವಸೂಲಾತಿಗೆ ದಾಂಡಿಗರನ್ನು ಬಳಸಿಕೊಳ್ಳುವ ಘಟನೆಗಳ ಬಗ್ಗೆ ಆತಂಕಿತರಾಗಿರುವ ವಿತ್ತಸಚಿವ ಪಿ.ಚಿದಂಬರಂ ಅವರು ಅನಾಗರಿಕ ಆಚರಣೆಗಳಿಗೆ ಇಳಿಯುವ ಬ್ಯಾಂಕ್‌ಗಳ ವಿರುದ್ಧ ಉಗ್ರಕ್ರಮ ಕೈಗೊಳ್ಳುವುದಾಗಿ ಅವರು ಎಚ್ಚರಿಸಿದ್ದಾರೆ.
ರಾಜ್ಯಸಭೆಯಲ್ಲಿ ಪಾವತಿ ಮತ್ತು ಪರಿಹಾರ ಮಸೂದೆ ಕುರಿತ ಚರ್ಚೆಯಲ್ಲಿ ಮಾತನಾಡುತ್ತಿದ್ದ ಅವರು ಖಾಸಗಿ ಬ್ಯಾಂಕುಗಳು ಸಾಲದ ಬಲವಂತ ವಸೂಲಿಗೆ ಬಾಹುಬಲವನ್ನು ಬಳಸುತ್ತಿದೆಯೆಂದು ಹೇಳಿದ ಅವರು ಸಾರ್ವಜನಿಕ ವಲಯದ ಬ್ಯಾಂಕುಗಳು ಇಂತಹ ಕಠಿಣ ಕ್ರಮಗಳಿಗೆ ಇಳಿದರೆ ಅವರನ್ನು ಮಾರನೆಯ ದಿನವೇ ಕೆಲಸದಿಂದ ವಜಾ ಮಾಡುವುದಾಗಿ ಎಚ್ಚರಿಸಿದರು.
ಈ ಪಿಡುಗಿನ ನಿವಾರಣೆಗೆ ರಿಸರ್ವ್ ಬ್ಯಾಂಕ್ ಕಠಿಣ ಮಾರ್ಗದರ್ಶಕಗಳನ್ನು ಹೊರತಂದಿದೆ. ಅಗತ್ಯಬಿದ್ದರೆ ಸರ್ಕಾರವೂ ಸೂಕ್ತ ಕ್ರಮ ಕೈಗೊಳ್ಳುವುದು ಎಂದು ಹೇಳಿದರು. ಇಂತಹ ದಾಂಡಿಗರನ್ನು ಖಾಸಗಿ ಬ್ಯಾಂಕುಗಳು ನೇಮಿಸುತ್ತಿವೆ. ರಾಷ್ಟ್ರೀಕೃತ ಬ್ಯಾಂಕುಗಳು ಇಂತಹ ಆಚರಣೆಯಲ್ಲಿ ಕಂಡುಬಂದರೆ ಮಾರನೆಯ ದಿನವೇ ಮ್ಯಾನೇಜರ್ ವಜಾ ಮಾಡುವುದಾಗಿ ಎಚ್ಚರಿಸಿದ ಅವರು ನಾಗರಿಕ ಸಮಾಜದಲ್ಲಿ ಅನಾಗರಿಕ ವರ್ತನೆಗೆ ಅವಕಾಶವಿಲ್ಲ ಎಂದು ನುಡಿದರು.
|