ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಿಕಲಾಂಗ ವ್ಯಕ್ತಿಗಳಿಗೆ ಮಾಯಾವತಿ ಕೊಡುಗೆ
PTI
ವಿಶ್ವ ವಿಕಲಾಂಗರ ದಿನವಾದ ಸೋಮವಾರ ಉತ್ತರಪ್ರದೇಶ ಮುಖ್ಯಮಂತ್ರಿ ಮಾಯಾವತಿ ರಾಜ್ಯದ ವಿಕಲಾಂಗ ವ್ಯಕ್ತಿಗಳಿಗೆ ಹಲವಾರು ಉತ್ತೇಜಕ ಕ್ರಮಗಳನ್ನು ಪ್ರಕಟಿಸಿದ್ದಾರೆ.
ಮಾಯಾವತಿ ತನ್ನ ಅಧಿಕೃತ ನಿವಾಸದಲ್ಲಿ ನಡೆದ ಸಮಾರಂಭದಲ್ಲಿ ಸರ್ಕಾರಿ ಶಾಲೆಗಳಿಗೆ ಸೇರಿದ ದೈಹಿಕ ಮತ್ತು ಮಾನಸಿಕ ಅಸ್ವಸ್ಥ ಮಕ್ಕಳಿಗೆ ಪ್ರತಿತಿಂಗಳು 500ರೂ.ನಿಂದ 850 ರೂ. ನೆರವನ್ನು ಘೋಷಿಸಿದರು.

ವಿಕಲಾಂಗ ವ್ಯಕ್ತಿಗಳ ವಿವಾಹಕ್ಕೆ ಪ್ರೋತ್ಸಾಹ ನೀಡುವ ಕ್ರಮವಾಗಿ ಮುಖ್ಯಮಂತ್ರಿ ಹೆಚ್ಚುವರಿ 2 ಕೋಟಿ ರೂ. ಮೀಸಲಿಟ್ಟಿದ್ದಾರೆ. ವಿಕಲಾಂಗರ ಕಾರ್ಯಾಗಾರಗಳು ಮತ್ತು ಶಾಲೆಗಳ ನಿರ್ವಹಣೆಗೆ ಒಂದು ಕೋಟಿ ಮಂಜೂರು ಮಾಡಿರುವುದರ ಜತೆಗೆ ನಾಲ್ಕು ಬಸ್‌ಗಳನ್ನು ವಿಕಲಾಂಗರ ಸಂಚಾರಕ್ಕೆ ಮೀಸಲಿಟ್ಟಿದ್ದಾರೆ.

ಇದಕ್ಕೆ ಮುನ್ನ, ವಿವಿಧ ಶಾಲೆಗಳ ವಿಶೇಷ ಮಕ್ಕಲು ವರ್ಣರಂಜಿತ ನೃತ್ಯ ಮತ್ತು ಸಂಗೀತ ಕಾರ್ಯಕ್ರಮ ನೀಡಿದರು. ವಿಕಲಾಂಗ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸಿದ 24 ಜನರಿಗೆ ಅವರು ಪ್ರಶಸ್ತಿಗಳನ್ನು ನೀಡಿ ಸನ್ಮಾನಿಸಿದರು.
ಮತ್ತಷ್ಟು
ಸಾಲವಸೂಲಿಗೆ ಬಾಹುಬಲದ ವಿರುದ್ಧ ಎಚ್ಚರಿಕೆ
ಅಸ್ಫಕ್‌ಗೆ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ
ಮಕ್ಕಳ ವಿರುದ್ಧ ದೌರ್ಜನ್ಯದ ವರದಿಗೆ ಕ್ರಮ
ಏಮ್ಸ್ ಮಸೂದೆ ವಿರುದ್ಧ ಸುಪ್ರೀಂಕೋರ್ಟ್ ತರಾಟೆ
ಸಾವಿನ ಸರದಾರರೊಂದಿಗೆ ಕಾಂಗ್ರೆಸ್ ನಂಟು
ಗಡಿಯಲ್ಲಿ ಮೂಲಸೌಲಭ್ಯ ಕೊರತೆ: ಆಂಟೋನಿ