ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಇಂದು ರಾಜ್ಯಸಭೆಯಲ್ಲಿ ಅಣುಬಂಧದ ಚರ್ಚೆ
ಪರಮಾಣು ಒಪ್ಪಂದದ ಬಗ್ಗೆ ವಾಮರಂಗದ ನವೀಕೃತ ಒತ್ತಡ ಮತ್ತು ಪ್ರಧಾನಿ ಮನಮೋಹನ ಸಿಂಗ್ ಉತ್ತರಿಸಬೇಕೆಂಬ ಪ್ರತಿಪಕ್ಷದ ಒತ್ತಾಯದ ನಡುವೆ ರಾಜ್ಯಸಭೆಯಲ್ಲಿ ಭಾರತ-ಅಮೆರಿಕ ಪರಮಾಣು ಒಪ್ಪಂದದ ಬಗ್ಗೆ ಮಾತುಕತೆ ಮಂಗಳವಾರ ನಡೆಯಲಿದೆ.

ಚರ್ಚೆಗೆ ಮುಂಚೆ, ಒಪ್ಪಂದದ ಬಗ್ಗೆ ವಾಗ್ದಾಳಿ ತೀವ್ರಗೊಳಿಸಿದ ಸಿಪಿಎಂ ಒಪ್ಪಂದದ ಕಾರ್ಯಸೂಚಿಯ ಬಹುಭಾಗವು ಭಾರತವನ್ನು ಅಮೆರಿಕದ ಅಧೀನ ಮಿತ್ರರಾಷ್ಟ್ರವಾಗಿ ಮಾಡುವುದಾಗಿದೆ ಎಂದು ಆರೋಪಿಸಿದೆ. ಸಮಾಜವಾದಿ ಪಕ್ಷ ಮತ್ತು ತೆಲುಗುದೇಶಂ ಪಕ್ಷ ಸದನದಲ್ಲಿ ತೆಗೆದುಕೊಳ್ಳುವ ನಿಲುವು ಸ್ಪಷ್ಟವಾಗಿಲ್ಲ. ತೃತೀಯ ರಂಗದ ಮುಖ್ಯ ಎರಡು ಪಕ್ಷಗಳು ಮೃದುಧೋರಣೆ ತಾಳಿರಬಹುದು ಅಥವಾ ಕಳೆದ ವಾರ ಚರ್ಚೆಯಿಂದ ದೂರ ಉಳಿದಿರಬಹುದು.

ಚರ್ಚೆಗೆ ವಿದೇಶಾಂಗ ಸಚಿವ ಪ್ರಣಬ್ ಮುಖರ್ಜಿ ಮಾತ್ರ ಉತ್ತರಿಸುವರೆಂದು ತಿಳಿಸಿದ ಸಂಸದೀಯ ವ್ಯವಹಾರ ಸಚಿವ ಪಿ.ಆರ್. ದಾಸ್‌ಮುನ್ಷಿ, ಪ್ರಧಾನ ಮಂತ್ರಿ ಕನಿಷ್ಠ ಮಧ್ಯಪ್ರವೇಶ ಮಾಡುವರೇ ಎಂಬ ಪ್ರಶ್ನೆಗೆ ನಿರುತ್ತರರಾದರು.

ಇಂತಹ ಮುಖ್ಯವಾದ ಚರ್ಚೆಯಲ್ಲಿ ಪ್ರಧಾನಮಂತ್ರಿ ಮೂಕ ಪ್ರೇಕ್ಷಕರಾಗಿರಬಾರದು ಎಂದು ಬಿಜೆಪಿ ತಿಳಿಸಿದೆ. ಆದರೆ ಸರ್ಕಾರ ಚರ್ಚೆಯಲ್ಲಿ ಪ್ರಣವ್ ಮುಖರ್ಜಿಯನ್ನು ಕಣಕ್ಕೆ ಇಳಿಸಲು ನಿರ್ಧರಿಸಿದರೆ ಸಿಂಗ್ ಮಧ್ಯಪ್ರವೇಶಿಸಿ ಚರ್ಚೆಯಲ್ಲಿ ಮಾತನಾಡಬೇಕು ಎಂದು ಬಿಜೆಪಿ ಹೇಳಿದೆ.
ಮತ್ತಷ್ಟು
ಸಾಲ ವಸೂಲಿಗೆ ಗೂಂಡಾಗಳು ಬೇಡ: ಚಿದಂಬರಮ್
ವಿಕಲಾಂಗ ವ್ಯಕ್ತಿಗಳಿಗೆ ಮಾಯಾವತಿ ಕೊಡುಗೆ
ಸಾಲವಸೂಲಿಗೆ ಬಾಹುಬಲದ ವಿರುದ್ಧ ಎಚ್ಚರಿಕೆ
ಅಸ್ಫಕ್‌ಗೆ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ
ಮಕ್ಕಳ ವಿರುದ್ಧ ದೌರ್ಜನ್ಯದ ವರದಿಗೆ ಕ್ರಮ
ಏಮ್ಸ್ ಮಸೂದೆ ವಿರುದ್ಧ ಸುಪ್ರೀಂಕೋರ್ಟ್ ತರಾಟೆ