ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಲೋಕಸಭೆಯಲ್ಲಿ ಅನಂತ್, ಸುಬ್ಬರಾಮಿ ರೆಡ್ಡಿ ವಾಗ್ದಾಳಿ
ಬಿಜೆಪಿ ಸದಸ್ಯ ಅನಂತಕುಮಾರ್ ಮತ್ತು ಕಲ್ಲಿದ್ದಲು ಖಾತೆ ರಾಜ್ಯ ಸಚಿವ ಸುಬ್ಬರಾಮಿ ರೆಡ್ಡಿ ಪರಸ್ಪರರ ಮೇಲೆ ತಪ್ಪುಹೊರಿಸುವ ಮೂಲಕ ಲೋಕಸಭೆಯಲ್ಲಿ ಮಂಗಳವಾರ ತೀವ್ರ ವಾಗ್ದಾಳಿಯಲ್ಲಿ ಮುಳುಗಿದಾಗ ಇಡೀ ಸದನವು ಚಕಿತವಾಯಿತು. ಕಲ್ಲಿದ್ದಲು ಮೇಲಿನ ಪೂರಕಪ್ರಶ್ನೆಯನ್ನು ಕೇಳಿದ ಅನಂತಕುಮಾರ್ ಸಚಿವರು ಲಿಖಿತರೂಪದಲ್ಲಿ ನೀಡಿದ ಉತ್ತರ ಪ್ರಶ್ನೆಗೆ ಸಂಬಂಧಿಸಿದ್ದಲ್ಲ ಎಂದು ಹೇಳಿದರು.

ರೆಡ್ಡಿ ಉತ್ತರವನ್ನು ಪುನಃ ಓದಲು ಎದ್ದುನಿಂತು ನಿಮ್ಮದು ತಪ್ಪು, ನನ್ನದು ಸರಿ ಎಂದು ನುಡಿದರು. ಆಗ ಅನಂತಕುಮಾರ್ ಅಸಮಾಧಾನಗೊಂಡು ಸಚಿವರು ಪ್ರಸ್ತುತ ಮಾಹಿತಿ ನೀಡದೇ ಸದನವನ್ನು ದಾರಿತಪ್ಪಿಸುತ್ತಿದ್ದಾರೆಂದು ನುಡಿದು, ನನ್ನದೇ ಸರಿ, ನಿಮ್ಮದು ತಪ್ಪು ಎಂದು ಪ್ರತ್ಯುತ್ತರಿಸಿದರು. ಮಧ್ಯಪ್ರವೇಶಿಸಿದ ಸ್ಪೀಕರ್ ಸೋಮನಾಥ ಚಟರ್ಜಿ ಒಂದು ಕಪ್ ಚಹಾ ಸೇವನೆಯ ಮೂಲಕ ಅನುಮಾನಗಳಿಗೆ ಸಚಿವರು ಸ್ಪಷ್ಟನೆ ನೀಡಲಿ ಎಂದು ನುಡಿದರು.

ತಾವು ರೆಡ್ಡಿ ಮನೆಗೆ ಚಹಾಕುಡಿಯಲು ಖಂಡಿತವಾಗಿ ಹೋಗುತ್ತೇನೆ. ಆದರೆ ಸಚಿವರು ಸದನವನ್ನು ದಾರಿತಪ್ಪಿಸಬಾರದು ಎಂದು ಹೇಳಿದಾಗ ಇದು ಒಂದು ಕಪ್ ಚಹಾಗಿಂತ ಹೆಚ್ಚು ಬೇಕಾಗುತ್ತದೆ ಎಂದು ಚಟರ್ಜಿ ನುಡಿದಾಗ ಇಡೀ ಸದನ ನಗೆಗಡಲಲ್ಲಿ ಮುಳುಗಿತು.
ಮತ್ತಷ್ಟು
ಇಂದು ರಾಜ್ಯಸಭೆಯಲ್ಲಿ ಅಣುಬಂಧದ ಚರ್ಚೆ
ಸಾಲ ವಸೂಲಿಗೆ ಗೂಂಡಾಗಳು ಬೇಡ: ಚಿದಂಬರಮ್
ವಿಕಲಾಂಗ ವ್ಯಕ್ತಿಗಳಿಗೆ ಮಾಯಾವತಿ ಕೊಡುಗೆ
ಸಾಲವಸೂಲಿಗೆ ಬಾಹುಬಲದ ವಿರುದ್ಧ ಎಚ್ಚರಿಕೆ
ಅಸ್ಫಕ್‌ಗೆ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ
ಮಕ್ಕಳ ವಿರುದ್ಧ ದೌರ್ಜನ್ಯದ ವರದಿಗೆ ಕ್ರಮ