ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವೈದ್ಯರ ಮುಷ್ಕರ: 7 ಮಕ್ಕಳ ಸಾವು
ಆಂಧ್ರಪ್ರದೇಶದಲ್ಲಿ ಕಿರಿಯ ವೈದ್ಯರ ಮುಷ್ಕರದಿಂದ ವೈದ್ಯಕೀಯ ಸೇವೆ ಅಸ್ತವ್ಯಸ್ತಗೊಂಡಿದ್ದು, ಆಸ್ಪತ್ರೆಗೆ ಚಿಕಿತ್ಸೆ ಸಲುವಾಗಿ ಬಂದ 7 ಮಕ್ಕಳು ಅಸುನೀಗಿವೆ. ನಿಲೋಫರ್ ಆಸ್ಪತ್ರೆಯಲ್ಲಿ ವೈದ್ಯರ ಮೇಲೆ ಹಲ್ಲೆ ಮಾಡಿದ ಶಾಸಕ ಅಫ್ಸರ್ ಖಾನ್ ಅವರನ್ನು ಅಮಾನುತುಗೊಳಿಸುವಂತೆ ಆಗ್ರಹಿಸಿ ಕಿರಿಯ ವೈದ್ಯರು ಅನಿರ್ದಿಷ್ಟಾವಧಿ ಮುಷ್ಕರವನ್ನು ಮಂಗಳವಾರದಿಂದ ಆರಂಭಿಸಿದ್ದಾರೆ.

ನಿಲೋಫರ್ ಆಸ್ಪತ್ರೆಯ ವೈದ್ಯರು ಮತ್ತು ಅಧಿಕಾರಿಗಳ ಜತೆ ಪರಿಸ್ಥಿತಿಯ ಪರಾಮರ್ಶೆ ನಡೆಸಿದ ಹೈದರಾಬಾದ್ ಜಿಲ್ಲಾಧಿಕಾರಿ ಚಂದ್ರವದನ್, ಕಳೆದ ಎರಡು ದಿನಗಳಲ್ಲಿ ಆಸ್ಪತ್ರೆಗೆ ಸೇರಿದ 7 ಮಕ್ಕಳು ಸತ್ತಿವೆ. ಅವುಗಳಲ್ಲಿ ಅನೇಕ ಮಂದಿ ಅಪೌಷ್ಠಿಕತೆ ಮತ್ತು ರಕ್ತಹೀನತೆಯಿಂದ ಬಳಲುತ್ತಿದ್ದವು ಎಂದು ಹೇಳಿದ್ದಾರೆ. ಸರ್ಕಾರ ಹೆಚ್ಚುವರಿ ವೈದ್ಯರನ್ನು ನೇಮಿಸುವ ಮೂಲಕ ಮಕ್ಕಳಿಗೆ ಚಿಕಿತ್ಸೆ ನೀಡಲು ಎಲ್ಲ ಪ್ರಯತ್ನ ಮಾಡುತ್ತಿದೆ ಎಂದು ಅವರು ನುಡಿದರು.

ಏತನ್ಮಧ್ಯೆ, ಕಿರಿಯ ವೈದ್ಯರು ಅಸೀಫ್‌ನಗರ ಶಾಸಕರ ವಿರುದ್ಧ ಹತ್ಯೆಯತ್ನವನ್ನು ದಾಖಲಿಸಿಕೊಳ್ಳುವಂತೆ ಹಾಗೂ ಎಲ್ಲ ಬೋಧಕ ಆಸ್ಪತ್ರೆಗಳಲ್ಲಿ 24ಗಂಟೆಯೂ ಭದ್ರತೆ ಒದಗಿಸುವಂತೆ ಆಗ್ರಹಿಸಿದ್ದಾರೆ. ಹಿರಿಯ ವೈದ್ಯರು ಕೂಡ ಕಿರಿಯ ವೈದ್ಯರ ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದು, ಅವರ ಬೇಡಿಕೆ ಈಡೇರಿಸದಿದ್ದರೆ ತಾವೂ ಕೂಡ ಮುಷ್ಕರಕ್ಕೆ ಇಳಿಯುವುದಾಗಿ ನೋಟೀಸ್ ಕಳಿಸಿದ್ದಾರೆ.
ಮತ್ತಷ್ಟು
ಲೋಕಸಭೆಯಲ್ಲಿ ಅನಂತ್, ಸುಬ್ಬರಾಮಿ ರೆಡ್ಡಿ ವಾಗ್ದಾಳಿ
ಇಂದು ರಾಜ್ಯಸಭೆಯಲ್ಲಿ ಅಣುಬಂಧದ ಚರ್ಚೆ
ಸಾಲ ವಸೂಲಿಗೆ ಗೂಂಡಾಗಳು ಬೇಡ: ಚಿದಂಬರಮ್
ವಿಕಲಾಂಗ ವ್ಯಕ್ತಿಗಳಿಗೆ ಮಾಯಾವತಿ ಕೊಡುಗೆ
ಸಾಲವಸೂಲಿಗೆ ಬಾಹುಬಲದ ವಿರುದ್ಧ ಎಚ್ಚರಿಕೆ
ಅಸ್ಫಕ್‌ಗೆ ಗಲ್ಲುಶಿಕ್ಷೆಗೆ ಸುಪ್ರೀಂಕೋರ್ಟ್ ತಡೆ