ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ರೈಲು ಎಂಜಿನ್‌ನಲ್ಲಿ ಬಾಂಬ್ ಸ್ಫೋಟ
ಪ್ರಯಾಣಿಕರ ರೈಲಿನ ಎಂಜಿನ್‌ನಲ್ಲಿ ಶಕ್ತಿಶಾಲಿ ಬಾಂಬ್ ಮಂಗಳವಾರ ಸ್ಫೋಟಿಸಿದ್ದು, ಬೋಗಿಗಳಿಗೆ ಹಾನಿಯಾಗದ್ದರಿಂದ ಪ್ರಮುಖ ಅವಘಡವೊಂದು ತಪ್ಪಿದಂತಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕರ್ಬಿ ಆಂಗ್‌ಲಾಂಗ್‌ನ ಕಾಥ್‌ಕಾಟಿಯಲ್ಲಿ ಮಧ್ಯಾಹ್ನ 1.35ಕ್ಕೆ ಈ ಸ್ಫೋಟ ಸಂಭವಿಸಿದೆ ಎಂದು ರೈಲ್ವೆ ವಕ್ತಾರ ತಿಳಿಸಿದರು.

ಕಾಮರೂಪ್ ಎಕ್ಸ್‌ಪ್ರೆಸ್‌ನ ಎಂಜಿನ್‌ಗೆ ಭಾಗಶಃ ಧಕ್ಕೆಯಾಗಿದ್ದರೂ, ಯಾವುದೇ ಸಾವು, ನೋವು ಸಂಭವಿಸಿಲ್ಲ ಎಂದು ರೈಲ್ವೆಯ ಮುಖ್ಯವಕ್ತಾರ ಟಿ. ರಾಭಾ ತಿಳಿಸಿದರು. ಸುಮಾರು 400 ಪ್ರಯಾಣಿಕರಿದ್ದ ರೈಲು ತಿನ್‌ಸುಕಿಯಾ ಕಡೆ ತೆರಳುತ್ತಿದ್ದಾಗ ಈ ಸ್ಫೋಟ ಸಂಭವಿಸಿದೆ.

ಈ ಸ್ಫೋಟದಿಂದ ರೈಲುಹಳಿಗಳಿಗೆ ಹಾನಿಯಾಗಿಲ್ಲ. ನಾವು ಎಂಜಿನ್ ಬದಲಿಸಿದ ಬಳಿಕ 2 ಗಂಟೆಯಲ್ಲಿ ರೈಲು ಪ್ರಯಾಣ ಮುಂದುವರಿಸಿತು ಎಂದು ಅವರು ಹೇಳಿದರು. ಆದಿವಾಸಿ ಕರ್ಬಿ ಉಗ್ರಗಾಮಿಗಳ ಕೈವಾಡವನ್ನು ಪೊಲೀಸರು ಶಂಕಿಸಿದ್ದಾರೆ.
ಮತ್ತಷ್ಟು
ಬಿಎಸ್‌ಎಫ್ ಯೋಧನ ಆತ್ಮಹತ್ಯೆ
ವೈದ್ಯರ ಮುಷ್ಕರ: 7 ಮಕ್ಕಳ ಸಾವು
ಲೋಕಸಭೆಯಲ್ಲಿ ಅನಂತ್, ಸುಬ್ಬರಾಮಿ ರೆಡ್ಡಿ ವಾಗ್ದಾಳಿ
ಇಂದು ರಾಜ್ಯಸಭೆಯಲ್ಲಿ ಅಣುಬಂಧದ ಚರ್ಚೆ
ಸಾಲ ವಸೂಲಿಗೆ ಗೂಂಡಾಗಳು ಬೇಡ: ಚಿದಂಬರಮ್
ವಿಕಲಾಂಗ ವ್ಯಕ್ತಿಗಳಿಗೆ ಮಾಯಾವತಿ ಕೊಡುಗೆ