ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ವಿಮಾನ ಅಪಹರಣದ ಬೆದರಿಕೆ ಹುಸಿ
ಕಾನ್ಪುರಕ್ಕೆ ತೆರಳುವ ಭಾರತದ ವಿಮಾನವನ್ನು ಅಪಹರಿಸುವುದಾಗಿ ಬೆದರಿಕೆ ಕರೆ ಬಂದಿದ್ದರಿಂದ ದೆಹಲಿ ವಿಮಾನನಿಲ್ದಾಣದಲ್ಲಿ ಸ್ವಲ್ಪ ಕ್ಷಣ ಭಯ ಆವರಿಸಿತು. ಆದರೆ ಮೂರು ಗಂಟೆಗಳ ತೀವ್ರ ಭದ್ರತಾ ಶೋಧನೆಯ ಬಳಿಕ ಹುಸಿಕರೆ ಎಂದು ತಿಳಿದುಬಂತು. ದೆಹಲಿ-ಕಾನ್ಪುರ ವಿಮಾನ ಮೂರು ಗಂಟೆಗಳ ನಾಟಕೀಯ ವಿದ್ಯಮಾನದ ಬಳಿಕ ಮಧ್ಯಾಹ್ನ 2.30ಕ್ಕೆ ಬಳಿಕ ಹಾರಾಟ ಆರಂಭಿಸಿತು ಎಂದು ಮೂಲಗಳು ತಿಳಿಸಿವೆ.

ಅಪಹರಣದ ಬೆದರಿಕೆ ಕರೆ ಬಂದಿದೆಯೆಂದು ದೆಹಲಿ ವಿಮಾನನಿಲ್ದಾಣದ ವಿಮಾನ ಸಂಚಾರ ನಿಯಂತ್ರಣ ಕೇಂದ್ರಕ್ಕೆ ಕಾನ್ಪುರ ಪೊಲೀಸರು ಮಾಹಿತಿ ನೀಡಿದ ಕೂಡಲೇ ವಿಮಾನನಿಲ್ದಾಣದಲ್ಲಿ ಕಟ್ಟೆಚ್ಚರ ವಹಿಸಲಾಯಿತು. ವಿಮಾನದಲ್ಲಿ ಬಾಂಬ್ ಇರಿಸಲಾಗಿದೆ ಎಂದು ಅಜ್ಞಾತ ಕರೆ ಮಾಡಿದವ ತಿಳಿಸಿದ್ದ.

ಯಾವುದೇ ಅನುಮಾನಸ್ಪದ ವಸ್ತು ಕಂಡುಬರದಿದ್ದರಿಂದ ಮಧ್ಯಾಹ್ನ ಕಾನ್ಪುರಕ್ಕೆ ವಿಮಾನಸಂಚಾರ ಆರಂಭಿಸಲಾಯಿತು ಎಂದು ಹಿರಿಯ ಅಧಿಕಾರಿ ತಿಳಿಸಿದ್ದಾರೆ.
ಮತ್ತಷ್ಟು
ಪೋಷಕರಿಗಾಗಿ ಹುಡುಕುತ್ತಿರುವ ಬಾಲಕ
ರೈಲು ಎಂಜಿನ್‌ನಲ್ಲಿ ಬಾಂಬ್ ಸ್ಫೋಟ
ಬಿಎಸ್‌ಎಫ್ ಯೋಧನ ಆತ್ಮಹತ್ಯೆ
ವೈದ್ಯರ ಮುಷ್ಕರ: 7 ಮಕ್ಕಳ ಸಾವು
ಲೋಕಸಭೆಯಲ್ಲಿ ಅನಂತ್, ಸುಬ್ಬರಾಮಿ ರೆಡ್ಡಿ ವಾಗ್ದಾಳಿ
ಇಂದು ರಾಜ್ಯಸಭೆಯಲ್ಲಿ ಅಣುಬಂಧದ ಚರ್ಚೆ