ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಮನಮೋಹನ್ ಸಿಂಗ್ ಮೇಲೆ ಸಿನ್ಹಾ ವಾಗ್ದಾಳಿ
ಕುಂಡಂಕುಳಂ ಪರಮಾಣು ರಿಯಾಕ್ಟರುಗಳಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಭಾರತವು ಸಹಿ ಹಾಕದಿರುವುದಕ್ಕೆ ಅಮೆರಿಕದ ಒತ್ತಡವೇ ಕಾರಣ ಎನ್ನುವ ಆರೋಪವನ್ನು ಪ್ರಧಾನಿ ಡಾ.ಮನಮೋಹನ್ ಸಿಂಗ್ ಬಲವಾಗಿ ನಿರಾಕರಿಸಿದ್ದಾರೆ.

ರಾಜ್ಯಸಭೆಯಲ್ಲಿ ಭಾರತ ಮತ್ತು ಅಮೆರಿಕ ನಡುವಿನ ಪರಮಾಣು ಒಪ್ಪಂದ ಕುರಿತು ಕಲಾಪದ ವೇಳೆ ಬಿಜೆಪಿಯ ಹಿರಿಯ ಮುಖಂಡ ಯಶವಂತ್ ಸಿನ್ಹಾ ಅವರು ಮಾಡಿದ ಆರೋಪಕ್ಕೆ, ಇದು ಸುಳ್ಳು ಇಂತಹ ನಿರಾಧಾರ ಆರೋಪ ಮಾಡಬಾರದು ಎಂಬುದಾಗಿ ಸಿಂಗ್ ಈ ಸಂದರ್ಭದಲ್ಲಿ ಹೇಳಿದರು.

ಸರಕಾರವು ಐಎಇಎ ಮತ್ತು ಪರಮಾಣು ಇಂಧನ ಪೂರೈಕೆದಾರರ ಗುಂಪಿನೊಡನೆ ವಿಷಯಗಳನ್ನು ಇನ್ನಷ್ಟೇ ಇತ್ಯರ್ಥಪಡಿಸ ಬೇಕಾಗಿರುವುದೇ ಒಪ್ಪಂದವನ್ನು ಅಖೈರುಗೊಳಿಸಲಾಗುತ್ತದೆನ್ನುವ ಕಾರಣಕ್ಕೆ ಅವರು ಸ್ಪಷ್ಟನೆ ನೀಡಿದರು.

ಭಾರತ ನಿರ್ದಿಷ್ಟವಾದ ಸುರಕ್ಷತಾ ಕ್ರಮಗಳಿಗೆ ಐಎಇಇಯ ಅನುಮೋದನೆಯನ್ನು ಪಡೆದುಕೊಂಡು ಎನ್‌‌ಎಸ್‌‌ಜಿಯೊಂದಿಗೆ ಮಾತುಕತೆ ನಡೆಸಿದ ಬಳಿಕವಷ್ಟೇ ಕುಂಡಂಕುಳಂ ಪರಮಾಣು ವಿದ್ಯುತ್ ಸ್ಥಾವರಕ್ಕೆ 4 ಹೆಚ್ಚುವರಿ ರಿಯಾಕ್ಟರುಗಳ ಖರೀದಿಗೆ ಸಂಬಂಧಿಸಿದ ಒಪ್ಪಂದಗಳಿಗೆ ಸಹಿ ಹಾಕಬಹುದಾಗಿದೆ ಎಂದು ಭಾರತ ಮತ್ತು ಅಮೆರಿಕ ಪರಮಾಣು ಒಪ್ಪಂದ ಕುರಿತ ಚರ್ಚೆಯಲ್ಲಿ ಮಧ್ಯಪ್ರವೇಶಿಸಿ ಮಾತನಾಡಿದ ಪ್ರಧಾನಿ ಸ್ಪಷ್ಟ ಹೇಳಿಕೆ ನೀಡಿದರು.

ಆದರೂ ಸಿನ್ಹಾ, ಅಮೆರಿಕದ ಒತ್ತಡದಿಂದಾಗಿಯೇ ಇತ್ತೀಚೆಗೆ ಪ್ರಧಾನಿ ಮಾಸ್ಕೋಗೆ ಭೇಟಿ ನೀಡಿದಾಗ ರಷ್ಯಾ ರಿಯಾಕ್ಟರ್ ಒಪ್ಪಂದಕ್ಕೆ ಸಹಿ ಹಾಕಿಲ್ಲ ಎಂದು ಆರೋಪಿಸಿದರು.
ಮತ್ತಷ್ಟು
ವಿಮಾನ ಅಪಹರಣದ ಬೆದರಿಕೆ ಹುಸಿ
ಪೋಷಕರಿಗಾಗಿ ಹುಡುಕುತ್ತಿರುವ ಬಾಲಕ
ರೈಲು ಎಂಜಿನ್‌ನಲ್ಲಿ ಬಾಂಬ್ ಸ್ಫೋಟ
ಬಿಎಸ್‌ಎಫ್ ಯೋಧನ ಆತ್ಮಹತ್ಯೆ
ವೈದ್ಯರ ಮುಷ್ಕರ: 7 ಮಕ್ಕಳ ಸಾವು
ಲೋಕಸಭೆಯಲ್ಲಿ ಅನಂತ್, ಸುಬ್ಬರಾಮಿ ರೆಡ್ಡಿ ವಾಗ್ದಾಳಿ