ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜು
2002ರ ವಿಧಾನಸಭೆ ಚುನಾವಣೆಯಲ್ಲಿ ಮಧ್ಯಗುಜರಾತಿನ ತನ್ನ ಪ್ರಾಬಲ್ಯದ ಪ್ರದೇಶದಲ್ಲಿ ಧೂಳೀಪಟವಾದ ಕಾಂಗ್ರೆಸ್ 7 ಸ್ಥಾನಗಳನ್ನು ಬಿಟ್ಟರೆ ಎಲ್ಲ ಸ್ಥಾನಗಳನ್ನು ಗೆದ್ದುಕೊಂಡ ಬಿಜೆಪಿ ಅಲೆಯನ್ನು ತಿರುವುಮುರುವು ಮಾಡಲು ಆಶಿಸಿದೆ. 182 ಸ್ಥಾನಗಳಲ್ಲಿ ನಾಲ್ಕನೆ ಒಂದರಷ್ಟು ಸ್ಥಾನಗಳನ್ನು ಹೊಂದಿರುವ ಮಧ್ಯಗುಜರಾತ್‌ನಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ತೀವ್ರ ಪೈಪೋಟಿ ದಟ್ಟವಾಗಿದೆ.

ಡಿ.16ರಂದು ಎರಡನೇ ಹಂತದ ಚುನಾವಣೆಗೆ 49ರಲ್ಲಿ 42 ಕ್ಷೇತ್ರಗಳು ಹೋಗಲಿದ್ದು, ರಾಷ್ಟ್ರೀಯ ಮತ್ತು ಬುಡಕಟ್ಟು ನಾಯಕರು ಈಗಾಗಲೇ ಆ ಪ್ರದೇಶಕ್ಕೆ ಲಗ್ಗೆಹಾಕಿದ್ದು, ಮತದಾರರನ್ನು ಓಲೈಸಲು ಎಲ್ಲ ಪ್ರಯತ್ನ ಮಾಡುತ್ತಿವೆ. ಮಧ್ಯಗುಜರಾತ್ ಸಾಂಪ್ರದಾಯಿಕವಾಗಿ ಕಾಂಗ್ರೆಸ್ ಆಧಿಪತ್ಯದ ಪ್ರದೇಶವಾಗಿದ್ದರೂ ಗೋಧ್ರಾ ಬಳಿಕದ ಗಲಭೆಗಳಿಂದ ಹಿಂದಿನ ಚುನಾವಣೆಯಲ್ಲಿ ಬಿಜೆಪಿ ಸಮೃದ್ಧ ಪ್ರತಿಫಲ ಪಡೆಯಿತು.


ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ತುದಿಗಾಲಲ್ಲಿ ನಿಂತಿದ್ದರೂ, ಈ ಪ್ರದೇಶದಲ್ಲಿ ಬಹುತೇಕ ಸ್ಥಾನಗಳನ್ನು ಉಳಿಸಿಕೊಳ್ಳಲು ಬಿಜೆಪಿ ಎಲ್ಲ ಪ್ರಯತ್ನಗಳನ್ನು ಮಾಡುವುದು ಖಚಿತವೆನ್ನುವುದು ಚುನಾವಣೆ ವೀಕ್ಷಕರ ಅಭಿಪ್ರಾಯ.

ವಡೋದರಾ, ಖೇಡ, ಪಂಚಮಹಲ್ಸ್, ಆನಂದ್, ದಾಹೋದ್, ಭರೂಚ ಮತ್ತು ನರ್ಮದಾ ಜಿಲ್ಲೆಗಳನ್ನು ಹೊಂದಿರುವ ಈ ಪ್ರದೇಶದವು ಆದಿವಾಸಿ ಜನಸಂಖ್ಯಾ ಬಾಹುಳ್ಯದಿಂದ ಕೂಡಿದ್ದು, ಮುಸ್ಲಿಂರ ಪ್ರಾಬಲ್ಯವನ್ನೂ ಹೊಂದಿದೆ. ಇಬ್ಬರೂ ಕಾಂಗ್ರೆಸ್ ಸಾಂಪ್ರದಾಯಿಕ ಬೆಂಬಲಿಗರು.

ಆದರೆ ಗೋಧ್ರಾ ಗಲಭೆಯ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಈ ಪ್ರದೇಶದಲ್ಲಿ ಬೀಸಿದ ಹಿಂದುತ್ವದ ಅಲೆಯಿಂದ ಆದಿವಾಸಿಗಳು ಸಾಮೂಹಿಕವಾಗಿ ಬಿಜೆಪಿಗೆ ಮತ ಹಾಕಿ ಗೆಲ್ಲಿಸಿದ್ದರು.
ಮತ್ತಷ್ಟು
ಮನಮೋಹನ್ ಸಿಂಗ್ ಮೇಲೆ ಸಿನ್ಹಾ ವಾಗ್ದಾಳಿ
ವಿಮಾನ ಅಪಹರಣದ ಬೆದರಿಕೆ ಹುಸಿ
ಪೋಷಕರಿಗಾಗಿ ಹುಡುಕುತ್ತಿರುವ ಬಾಲಕ
ರೈಲು ಎಂಜಿನ್‌ನಲ್ಲಿ ಬಾಂಬ್ ಸ್ಫೋಟ
ಬಿಎಸ್‌ಎಫ್ ಯೋಧನ ಆತ್ಮಹತ್ಯೆ
ವೈದ್ಯರ ಮುಷ್ಕರ: 7 ಮಕ್ಕಳ ಸಾವು