ಆನ್‌ಲೈನ್ ವಂಚನೆಯ ಪ್ರಕರಣಗಳು ಕಂಪೆನಿಗಳಲ್ಲಿ ಹೆಚ್ಚುತ್ತಿದ್ದು, ಈ ಬಲೆಯಲ್ಲಿ ಸಿಕ್ಕಿಕೊಂಡ ಇತ್ತೀಚಿನ ಕಂಪೆನಿ ವಿಜಯ್ ಮಲ್ಯರ ಕಿಂಗ್‌ಫಿಷರ್ ಏರ್‌ಲೈನ್ಸ್. ಈ-ಟಿಕೆಟಿಂಗ್ ವಂಚನೆಯಲ್ಲಿ ಕಳೆದ 10 ತಿಂಗಳಿನಲ್ಲಿ 14 ಕೋಟಿ ರೂ.ಗಳನ್ನು ಕಳೆದುಕೊಂಡಿದ್ದಾಗಿ ಕಿಂಗ್‌ಫಿಷರ್ ಈಗ ಪೊಲೀಸರಿಗೆ ದೂರು ನೀಡಿದೆ.
ಪ್ರವಾಸಿ ಏಜಂಟರ ರೀತಿಯಲ್ಲಿ ಸೋಗು ಹಾಕಿಕೊಂಡ ಗ್ಯಾಂಗ್ ಏರ್‌ಲೈನ್ ವೆಬ್‌ಸೈಟಿನಲ್ಲಿ ಟಿಕೆಟ್‌ಗಳನ್ನು ಬುಕ್ ಮಾಡಿದವು. ಟಿಕೆಟ್ ಬುಕ್ ಮಾಡಲು ನಕಲಿ ಮತ್ತು ಕದ್ದಿರುವ ಕ್ರೆಡಿಟ್ ಕಾರ್ಡ್‌ಗಳು, ಮೊಬೈಲ್ ಫೋನ್‌ಗಳನ್ನು ಮತ್ತು ಈ-ಮೇಲ್ ಅಕೌಂಟ್‌ಗಳನ್ನು ಅವು ಬಳಸಿದವು. ನಕಲಿ ವ್ಯವಹಾರಗಳ ಬಗ್ಗೆ ಪ್ರಯಾಣಿಕರ ಅರಿವಿಗೆ ಬರಲಿಲ್ಲ.
ಒಂದು ಕ್ರೆಡಿಟ್ ಕಾರ್ಡನ್ನು ಮೂರು ಬಾರಿಗಿಂತ ಹೆಚ್ಚು ಬಳಸದಿರಲು ಗ್ಯಾಂಗ್ ನಿರ್ಧರಿಸಿತ್ತು. ಎಲ್ಲ ವ್ಯವಹಾರಗಳು ದೆಹಲಿಯಲ್ಲಿ ನಡೆದಿದ್ದವು. ಕಿಂಗ್‌ಫಿಷರ್ ಏರ್‌ಲೈನ್ಸ್ ಈ ಕುರಿತು ಪಾಲಂ ವಿಹಾರ್ ಪೊಲೀಸ್ ಠಾಣೆಯಲ್ಲಿ ಔಪಚಾರಿಕ ದೂರು ನೀಡಿದೆ. ಎಲ್ಲ ಏರ್‌ಲೈನ್ಸ್‌ಗಳಿಗೆ ಎಚ್ಚರಿಕೆಯಿಂದ ಇರುವಂತೆ ತಿಳಿಸಲಾಗಿದೆ ಎಂದು ದೆಹಲಿ ಪೊಲೀಸ್ ವಕ್ತಾರ ತಿಳಿಸಿದರು.
ವೆಬ್‌ಸೈಟಿನಲ್ಲಿ ಅಗ್ಗದ ವಿಮಾನಸೇವೆ ಪ್ರಸ್ತಾವನೆಗಳ ಬಗ್ಗೆ ಉಲ್ಲೇಖಿಸಿ ಸಾರ್ವಜನಿಕರು ಕೂಡ ಇಂತಹ ಪ್ರಸ್ತಾಪಗಳ ಬಗ್ಗೆ ಎಚ್ಚರಿಕೆಯಿಂದ ಇರಬೇಕೆಂದು ತಿಳಿಸಿದೆ.
|