ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಪೊಲೀಸರ ಹತ್ಯೆ ಯತ್ನ ಆರೋಪ
ಮಲೇಶಿಯದಲ್ಲಿ ಭಾರತೀಯ ಜನಾಂಗದವರಿಗೆ ತೋರುತ್ತಿರುವ ನಡವಳಿಕೆ ಬಗ್ಗೆ ಭುಗಿಲೆದ್ದಿರುವ ವಿವಾದವಿನ್ನೂ ಶಮನವಾಗಿಲ್ಲ. ನ.25ರಂದು ನಡೆದ ತಾರತಮ್ಯದ ವಿರುದ್ಧ ರಾಲಿಯಲ್ಲಿ ಪೊಲೀಸರ ಹತ್ಯೆಗೆ ಯತ್ನಿಸಲಾಯಿತೆಂದು ಆರೋಪಿಸಿ ಭಾರತೀಯ ಸಮುದಾಯದ 26 ಜನರ ಮೇಲೆ ಮೊಕದ್ದಮೆ ಹೂಡಲಾಗಿದೆ.

ರಾಜಧಾನಿ ಕೌಲಾಲಂಪುರದ ಹೊರಗೆ ಬಾಟು ಕೇವ್ಸ್ ದೇವಸ್ಥಾನದ ಕಾಂಪೌಂಡ್‌ ಬಳಿ ಪೊಲೀಸನೊಬ್ಬನ ಹತ್ಯೆಗೆ ಯತ್ನಿಸಲಾಯಿತೆಂದು ಆರೋಪ ಹೊರಿಸಲಾಗಿದ್ದು, 26 ಪ್ರತಿವಾದಿಗಳು ತಾವು ನಿರ್ದೋಷಿಗಳೆಂದು ಹೇಳಿದ್ದಾರೆ. ಅಕ್ರಮ ಸಭೆ, ಕೀಟಲೆ ಮತ್ತು ಗಲಭೆ ನಡೆಸಿದ ಆರೋಪಗಳನ್ನೂ ಅವರ ಮೇಲೆ ಹೊರಿಸಲಾಗಿದೆಯೆಂದು ವಕೀಲ ಎಂ. ಮನೋಹರನ್ ತಿಳಿಸಿದರು.

ಆರೋಪಿಗಳು ತಪ್ಪಿತಸ್ಥರೆಂದು ಕಂಡುಬಂದರೆ ಕೊಲೆಯತ್ನಕ್ಕೆ 20 ವರ್ಷಗಳ ಜೀವಾವಧಿ ಶಿಕ್ಷೆಯನ್ನು ಅವರು ಎದುರಿಸಬೇಕಾಗಿದೆ.ಜನಾಂಗೀಯ ಭಾರತೀಯರ ಪರ ಇನ್ನೊಬ್ಬ ವಕೀಲರಾದ ರವಿ ನಿಕೊ ದೂರವಾಣಿಯಲ್ಲಿ ಮಾತನಾಡುತ್ತಾ, ಈ ತೀರ್ಪಿನ ವಿರುದ್ಧ ಸಾಂವಿಧಾನಿಕ ವಿಷಯಗಳನ್ನು ಎತ್ತುವುದಾಗಿ ತಿಳಿಸಿದ್ದಾರೆ.

ದಂಡಸಂಹಿತೆಯ 307ನೇ ಸೆಕ್ಷನ್ ಅಡಿಯಲ್ಲಿ ಅವರ ವಿರುದ್ಧ ಆರೋಪಗಳನ್ನು ಹೊರಿಸಲಾಗಿದೆ. ಈ ಆರೋಪಗಳ ಬಗ್ಗೆ ಪ್ರತಿವಾದಿ ಪರ ವಕೀಲರು ಅನುಮಾನ ವ್ಯಕ್ತಪಡಿಸಲಿದೆ. ವಿಚಾರಣೆ ಯಾವಾಗ ಆರಂಭವಾಗುತ್ತದೆಂದು ತಿಳಿದಿಲ್ಲವೆಂದು ಅವರು ನುಡಿದಿದ್ದಾರೆ.
ಮತ್ತಷ್ಟು
ಆನ್‌ಲೈನ್ ವಂಚನೆ: ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ನಷ್ಟ
ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜು
ಮನಮೋಹನ್ ಸಿಂಗ್ ಮೇಲೆ ಸಿನ್ಹಾ ವಾಗ್ದಾಳಿ
ವಿಮಾನ ಅಪಹರಣದ ಬೆದರಿಕೆ ಹುಸಿ
ಪೋಷಕರಿಗಾಗಿ ಹುಡುಕುತ್ತಿರುವ ಬಾಲಕ
ರೈಲು ಎಂಜಿನ್‌ನಲ್ಲಿ ಬಾಂಬ್ ಸ್ಫೋಟ