ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಹಕ್ಕಿಜ್ವರ ನಿಯಂತ್ರಣಕ್ಕೆ ಪ್ರಧಾನಿ ಕರೆ
PTI
ಹಕ್ಕಿಜ್ವರದ ಜಾಗತಿಕ ಆರೋಗ್ಯ ಸವಾಲನ್ನು ನಿಭಾಯಿಸುವಲ್ಲಿ ಸಾಂಸ್ಥಿಕ ದಣಿವನ್ನು ಪ್ರದರ್ಶಿಸುವುದರ ವಿರುದ್ಧ ಪ್ರಧಾನಮಂತ್ರಿ ಮನಮೋಹನ ಸಿಂಗ್ ಬುಧವಾರ ಎಚ್ಚರಿಸಿದ್ದು, ಸರ್ಕಾರಗಳು ಸ್ಥಳೀಯವಾಗಿ ಕಾರ್ಯಪ್ರವೃತ್ತವಾಗಿ ಹಕ್ಕಿ ಜ್ವರ ನಿಯಂತ್ರಣಕ್ಕೆ ಜಾಗತಿಕವಾಗಿ ಚಿಂತಿಸಬೇಕು ಎಂದು ನುಡಿದರು.

ಇಲ್ಲಿ ಹಕ್ಕಿಜ್ವರ ಕುರಿತು ನಡೆದ ಮೂರುದಿನಗಳ ಅಂತಾರಾಷ್ಟ್ರೀಯ ಸಚಿವರ ಸಮಾವೇಶದಲ್ಲಿ ಮಾತನಾಡುತ್ತಿದ್ದ ಅವರು, ಹಕ್ಕಿಜ್ವರ ತಡೆಗೆ ಬೆಂಬಲ ನೀಡಲು ಅಂತಾರಾಷ್ಟ್ರೀಯ ನಿಧಿ ಇನ್ನೂ ಹೆಚ್ಚು ಹರಿದು ಬರಬೇಕಾದ ಅಗತ್ಯವನ್ನು ಪ್ರತಿಪಾದಿಸಿದರು.

ಮಾನವ ಮತ್ತು ಪ್ರಾಣಿಗಳ ಆರೋಗ್ಯದ ಬಗ್ಗೆ ಗಮನಹರಿಸುವ ಸಮಗ್ರ ನಿಲುವನ್ನು ಅಳವಡಿಸಿಕೊಳ್ಳುವ ಅಗತ್ಯವನ್ನು ಅವರು ಪ್ರತಿಪಾದಿಸಿ, ಪ್ರಾಣಿಗಳ ಆರೋಗ್ಯ ಕಾರ್ಯಕ್ರಮಗಳಿಗೆ ಆಯವ್ಯಯ ನೀತಿಗಳಲ್ಲಿ ಹೆಚ್ಚು ನಿಧಿಯನ್ನು ಒದಗಿಸಬೇಕು ಎಂದು ನುಡಿದರು.

ಹಕ್ಕಿ ಜ್ವರದಂತ ಆರೋಗ್ಯ ಸಮಸ್ಯೆ ನಿಭಾಯಿಸಲು ತಜ್ಞರು, ಕಾರ್ಯಕರ್ತರು, ಸಂಶೋಧಕರು, ಆಡಳಿತಗಾರರು, ಸರ್ಕಾರಿ ಇಲಾಖೆಗಳು ಮತ್ತು ನಾಗರಿಕ ಸಮಾಜ ಸಂಸ್ಥೆಗಳನ್ನು ಒಂದುಮಾಡುವ ಬಹು ಹಂತದ ಕಾರ್ಯತಂತ್ರವನ್ನು ತರುವುದು ಅಗತ್ಯವೆಂದು ಅವರು ನುಡಿದರು.
ಮತ್ತಷ್ಟು
ಪೋಸ್ಕೊ: ಸರ್ವ ಪಕ್ಷ ಸಭೆ ಕರೆಯಲು ಆಗ್ರಹ
ಪೊಲೀಸರ ಹತ್ಯೆ ಯತ್ನ ಆರೋಪ
ಆನ್‌ಲೈನ್ ವಂಚನೆ: ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ನಷ್ಟ
ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜು
ಮನಮೋಹನ್ ಸಿಂಗ್ ಮೇಲೆ ಸಿನ್ಹಾ ವಾಗ್ದಾಳಿ
ವಿಮಾನ ಅಪಹರಣದ ಬೆದರಿಕೆ ಹುಸಿ