ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
 
ಏನು ಮಾಡಬೇಕಿತ್ತು: ಮೋದಿ ಪ್ರಶ್ನೆ
PTI
ಗುಜರಾತಿನಲ್ಲಿ ಚುನಾವಣೆ ಇನ್ನು ಕೇವಲ ಒಂದು ವಾರ ಬಾಕಿ ಇರುವಂತೆಯೇ ಪ್ರಚಾರದ ಕಾವು ಹೆಚ್ಚುತ್ತಿದೆ. ಮುಖ್ಯಮಂತ್ರಿ ನರೇಂದ್ರ ಮೋದಿ ಮಾಂಗ್ರೋಲ್‌ನಲ್ಲಿ ಚುನಾವಣೆ ರಾಲಿಯಲ್ಲಿ ಮಂಗಳವಾರ ಮಾಡಿದ ಭಾಷಣವು ವಿವಾದದ ಕಿಡಿ ಹೊತ್ತಿಸಿದೆ. ತನ್ನ ಅಭಿವೃದ್ಧಿ ಯೋಜನೆಗಳು ಜನಾಕರ್ಷಣೆ ಮಾಡುತ್ತಿಲ್ಲ ಎಂದು ಮನಗಂಡ ಮೋದಿ ಹಿಂದುತ್ವದ ಕಾರ್ಡ್ ಬಳಸಿ ಸೊಹ್ರಾಬುದ್ದೀನ್ ಶೇಖ್ ಅವರ ನಕಲಿ ಎನ್‌ಕೌಂಟರ್ ಹತ್ಯೆಯನ್ನು ಪ್ರಸ್ತಾಪಿಸಿದರು.

ಮೋದಿ ನೆರೆದಿದ್ದ ಜನರನ್ನು ಉದ್ದೇಶಿಸಿ,"ಅಕ್ರಮ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡು ಸಂಗ್ರಹಿಸಿದ ವ್ಯಕ್ತಿಯನ್ನು ಏನು ಮಾಡುವುದು? ನೀವೇ ಹೇಳಿ ಸೊಹ್ರಾಬುದ್ದೀನ್‌ಗೆ ಏನು ಮಾಡಬೇಕಿತ್ತು?" ಎಂದು ಪ್ರಶ್ನಿಸಿದರು. "ಅವರನ್ನು ಕೊಲ್ಲಬೇಕು, ಕೊಲ್ಲಬೇಕು" ಎಂದು ಗುಂಪು ಉತ್ತರಿಸಿತು.

"ಸರಿ, ನಾನು ಅದನ್ನು ಮಾಡಲು ಸೋನಿಯಾ ಅನುಮತಿ ಪಡೆಯಬೇಕಿತ್ತೇ? ನಾನೇನಾದರೂ ತಪ್ಪು ಮಾಡಿದ್ದರೆ ಗಲ್ಲಿಗೇರಿಸಿ" ಎಂದು ಪ್ರತಿಕ್ರಿಯಿಸಿದರು. ಮೋದಿ ಹೇಳಿಕೆ ಜೇನುಗೂಡಿಗೆ ಕಲ್ಲುಹೊಡೆದಂತೆ ವಿವಾದದ ಕಿಡಿ ಹೊತ್ತಿಸಿದ್ದು, ಕಾಂಗ್ರೆಸ್ ಮತ್ತು ವಾಮರಂಗ ಟೀಕಾಪ್ರವಾಹವನ್ನೇ ಹರಿಸಿದೆ. "ಇದು ನಾಚಿಕೆಗೇಡು,ಮೋದಿ ಹೇಳಿಕೆಯನ್ನು ನಾವು ಖಂಡಿಸುತ್ತೇವೆ.

ಯಾರೇ ಕ್ರಿಮಿನಲ್ ಆಗಿದ್ದರೂ ಮುಖ್ಯಮಂತ್ರಿ ಅಥವಾ ಪ್ರಧಾನಮಂತ್ರಿ ಆಗಿದ್ದರೂ ಅವರಿಗೆ ಶಿಕ್ಷೆ ವಿಧಿಸುವ ಹಕ್ಕಿಲ್ಲ. ಕಾನೂನು ಅವರಿಗೆ ಶಿಕ್ಷೆ ನೀಡುತ್ತದೆ. ಹತ್ಯೆಯನ್ನು ಸಮರ್ಥಿಸಿಕೊಂಡಿದ್ದಂತೂ ಇನ್ನೂ ಕೆಟ್ಟ ವಿಚಾರ" ಎಂದು ಸಿಪಿಎಂ ನಾಯಕ ಸೀತಾರಾಂ ಯೆಚೂರಿ ಟೀಕಿಸಿದ್ದಾರೆ.

ಕಾಂಗ್ರೆಸ್ ವ್ಯಗ್ರವಾಗಿ ಮೋದಿ ಸರ್ವಾಧಿಕಾರಿಯಲ್ಲದೇ ಮತ್ತೇನೂ ಅಲ್ಲ ಎಂದು ತಿಳಿಸಿ ಅವರನ್ನು ಕೆಳಕ್ಕಿಳಿಸಿ ಎಂದು ಜನತೆಗೆ ಕರೆನೀಡಿತು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮೋದಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಪಕ್ಷದ ವಕ್ತಾರ ಅಭಿಷೇಕ್ ಎಂ. ಸಿಂಘ್ವಿ ತಿಳಿಸಿದರು.
ಮತ್ತಷ್ಟು
ಅಗತ್ಯಕಂಡು ಬಂದರೆ ಅಣ್ವಸ್ತ್ರ ಪರೀಕ್ಷೆ: ಪ್ರಣವ್
ಹಕ್ಕಿಜ್ವರ ನಿಯಂತ್ರಣಕ್ಕೆ ಪ್ರಧಾನಿ ಕರೆ
ಪೋಸ್ಕೊ: ಸರ್ವ ಪಕ್ಷ ಸಭೆ ಕರೆಯಲು ಆಗ್ರಹ
ಪೊಲೀಸರ ಹತ್ಯೆ ಯತ್ನ ಆರೋಪ
ಆನ್‌ಲೈನ್ ವಂಚನೆ: ಕಿಂಗ್‌ಫಿಷರ್ ಏರ್‌ಲೈನ್ಸ್‌ಗೆ ನಷ್ಟ
ಬಿಜೆಪಿಗೆ ತಿರುಗೇಟು ನೀಡಲು ಕಾಂಗ್ರೆಸ್ ಸಜ್ಜು