ದೆಹಲಿಯಲ್ಲಿ ದಾಳಿ ನಡೆಸುವ ಉದ್ದೇಶದಿಂದ ಉತ್ತರಪ್ರದೇಶದ ದಿಯೋಬಂದ್ ಮೂಲಕ ಆರು ಮಂದಿ ಹರ್ಕತ್ ಉಲ್ ಜೆಹಾದಿ ಇಸ್ಲಾಮಿಯಾ ಉಗ್ರಗಾಮಿ ಸಂಘಟನೆಯ ಉಗ್ರರು ಅಕ್ರಮವಾಗಿ ರಾಜಧಾನಿಯನ್ನು ಪ್ರವೇಶಿಸಿದ್ದಾರೆ ಎಂಬ ಗುಪ್ತಚರ ಇಲಾಖೆಯ ಮಾಹಿತಿ ಮೇರೆಗೆ ದೆಹಲಿಯಾದ್ಯಂತ ಕಟ್ಟೆಚ್ಚರ ಕೈಗೊಳ್ಳಲಾಗಿದೆ ಎಂದು ಪೊಲೀಸ್ ವರಿಷ್ಠಾಧಿಕಾರಿಗಳು ತಿಳಿಸಿದ್ದಾರೆ.
ಬಾಬ್ರಿ ಮಸೀದಿ ಧ್ವಂಸದ ದಿನಾಚರಣೆಯಂದು(ಡಿಸೆಂಬರ್6) ದಾಳಿ ನಡೆಸುವ ಉದ್ದೇಶದಿಂದ ಉಗ್ರರು ರಾಜಧಾನಿ ಪ್ರವೇಶಿಸಿದ್ದಾರೆಂದು ಗುಪ್ತಚರ ಇಲಾಖೆ ತಿಳಿಸಿದ್ದು, ಈ ನಿಟ್ಟಿನಲ್ಲಿ ಮುನ್ನಚ್ಚೆರಿಕೆ ಕ್ರಮವಾಗಿ ರಾಜಧಾನಿಯಲ್ಲಿ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.
ಗುಪ್ತಚರ ಇಲಾಖೆ ನೀಡಿದ ಮಾಹಿತಿಯ ಪ್ರಕಾರ, ಪೂರ್ವ ದೆಹಲಿಯ ಸೀಲಂಪುರ್ ಪ್ರದೇಶಕ್ಕೆ ಆರು ಮಂದಿ ಪ್ರವೇಶಿಸಿದ್ದು, ರಾಜಧಾನಿಯಲ್ಲಿ ಆಕ್ರಮಣ ನಡೆಸುವ ಸಾಧ್ಯತೆಗಳಿದ್ದವು ಎಂದು ಪೋಲೀಸ್ ಮೂಲಗಳು ತಿಳಿಸಿವೆ.
ನಕಲಿ ಧೃಢೀಕರಣ ಸಂಖ್ಯೆಯನ್ನು ಹೊಂದಿದ ಬಿಳಿ ಬಣ್ಣದ ಕಾರಿನಲ್ಲಿ ಆರು ಉಗ್ರಗಾಮಿಗಳು ಉತ್ತರಪ್ರದೇಶದ ದಿಯೋಬಂದ್‌ನಿಂದ ಸೀಲಂಪುರ್ ಪ್ರದೇಶಕ್ಕೆ ಪ್ರಯಾಣಿಸಿದ್ದರು ಎಂದು ಮೂಲಗಳು ತಿಳಿಸಿವೆ.
ಕಾರಿನಲ್ಲಿದ್ದ ಒಬ್ಬ ವ್ಯಕ್ತಿಯ ಆಫ್ರಿಕ ವಲಯದವನಾಗಿದ್ದು, ಇಬ್ಬರು ಅಫ್ಗಾನ್‌ವರಾಗಿದ್ದು, ಉಳಿದವರು ಸ್ಥಳೀಯರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
|