ಬಂಗಾಳಕೊಲ್ಲಿಯಲ್ಲಿ ಧಾಮ್ರಾ ತೀರಕ್ಕೆ ಸಮೀಪದಲ್ಲಿ ಇನ್ನರ್‌ವೀಲ್ ದ್ವೀಪದಿಂದ ಸುಧಾರಿತ ಸೂಪರ್‌ಸೋನಿಕ್ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವನ್ನು ಭಾರತ ಕೈಗೊಂಡಿದೆ. ಡಿ.2ರಂದು ಯಶಸ್ವಿ ಡಮ್ಮಿ ಪರೀಕ್ಷೆ ಬಳಿಕ ಒಳಕ್ಕೆ ಬರುವ ಖಂಡಾಂತರ ಕ್ಷಿಪಣಿಗಳನ್ನು ಹೊಡೆದುರುಳಿಸಲು ಸಾಧ್ಯವಾಗುವಂತೆ ವಿನ್ಯಾಸಗೊಳಿಸಿದ ದೇಶೀಯವಾಗಿ ಅಭಿವೃದ್ಧಿಪಡಿಸಿದ ಸೂಪರ್‌ಸೋನಿಕ್ ಕ್ಷಿಪಣಿಯನ್ನು ಭಾರತ ಅಭಿವೃದ್ಧಿಪಡಿಸಿತು.
ಪ್ರಥ್ವಿಯ ಸುಧಾರಿತ ಶ್ರೇಣಿಯ ಒಂದು ಕ್ಷಿಪಣಿಯನ್ನು ಐಟಿಆರ್ ಉಡಾವಣೆ ನೆಲೆ-3ರಿಂದ ಬೆಳಿಗ್ಗೆ 11 ಗಂಟೆಗೆ "ದಾಳಿಗಾರ"ಹೆಸರಿನೊಂದಿಗೆ ಹಾರಿಬಿಟ್ಟಿದ್ದರೆ ಸೂಪರ್‌ಸೋನಿಕ್ ಕ್ಷಿಪಣಿಯನ್ನು "ಪ್ರತಿಬಂಧಕ" ಹೆಸರಿನಲ್ಲಿ ಉಡಾವಣೆ ನೆಲೆ 4ರಿಂದ ಇನ್ನರ್ ವೀಲ್ ದ್ವೀಪದಿಂದ ಪ್ರಯೋಗಿಸಲಾಯಿತು ಎಂದು ಮೂಲಗಳು ಹೇಳಿವೆ.
ಎರಡೂ ನೆಲೆಗಳಿಂದ ವಾಯುರಕ್ಷಣಾ ಅಬ್ಯಾಸದ ಎರಡನೇ ಪರೀಕ್ಷೆ ಇದಾಗಿದ್ದು, ಮುಂಚಿನ ಪರೀಕ್ಷೆಯನ್ನು ನ.27ರಂದು ನಡೆಸಲಾಗಿತ್ತು. ಈ ಅಭ್ಯಾಸದಲ್ಲಿನ ಸಾಧನೆ ಡಿಆರ್‌ಡಿಒ ರಕ್ಷಣಾ ವಿಜ್ಞಾನಿಗಳ ಕಿರೀಟಕ್ಕೆ ಇನ್ನೊಂದು ಗರಿ ಸಿಕ್ಕಿಸಿದಂತಾಗಿದೆ.
|