ಅಯೋಧ್ಯೆ ಬಾಬ್ರಿ ಮಸೀದಿ ಧ್ವಂಸ ಮಾಡಿದ 15ನೇ ವಾರ್ಷಿಕವಾದ ಗುರುವಾರ ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪ್ರತಿಧ್ವನಿಸಿ ಉಭಯ ಸದನಗಳನ್ನು ಮುಂದೂಡಿದ ಘಟನೆ ನಡೆಯಿತು. ಲೋಕಸಭೆಯಲ್ಲಿ ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸುವಂತೆ ಸಮಾಜವಾದಿ ಪಕ್ಷದ ಸದಸ್ಯರು ಆಗ್ರಹಿಸಿದರು.
ಸದನ ಸಮಾವೇಶಗೊಳ್ಳುತ್ತಿದ್ದಂತೆ ಘೋಷಣೆ ಕೂಗಿದ ಎಸ್‌ಪಿ ಸದಸ್ಯರು ಸದನದ ಬಾವಿಗೆ ಪ್ರವೇಶಿಸಿ ಬಾಬ್ರಿ ಮಸೀದಿ ನೆಲಸಮ ಮಾಡಿದವರಿಗೆ ಶಿಕ್ಷೆ ವಿಧಿಸುವಂತೆ ಆಗ್ರಹಿಸಿದರು. ಬಿಜೆಪಿ ಸದಸ್ಯರು ಪ್ರತಿವಾಗ್ದಾಳಿ ನಡೆಸಿ ಬಾಬ್ರಿ ಮಸೀದಿ ಸ್ಥಳದಲ್ಲಿ ರಾಮಮಂದಿರ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಸ್ಪೀಕರ್ ಸೋಮನಾಥ ಚಟರ್ಜಿ ಅವರ ಅನುಮತಿ ಪಡೆದ ಸಮಾಜವಾದಿ ಪಕ್ಷದ ರಾಮ್ಜಿಲಾಲ್ ಸುಮನ್ ಅಯೋಧ್ಯೆ ವಿವಾದದ ವಿಚಾರಣೆ ನಡೆಸುತ್ತಿರುವ ಲಿಬರಾನ್ ಆಯೋಗದ ಅವಧಿಯನ್ನು 42 ಬಾರಿ ವಿಸ್ತರಿಸಲಾಗಿದ್ದರೂ, ಸರ್ಕಾರಕ್ಕೆ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಆಗಿಲ್ಲವೆಂದು ಹೇಳಿದಾಗ ಬಿಜೆಪಿಯ ಘೋಷಣೆ ತಾರಕ್ಕಕೇರಿ ಗದ್ದಲು ಉಂಟಾದಾಗ ಸ್ಪೀಕರ್ ಸದನವನ್ನು ಮುಂದೂಡಿದರು.
|