ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿಗೆ ಕ್ಷಮೆ ಕೇಳಲು ಆಗ್ರಹ
ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಬಗ್ಗೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನೀಡಿದ ಪ್ರತಿಕ್ರಿಯೆಗೆ ಕ್ಷಮಾಪಣೆ ಕೋರದಿದ್ದರೆ ರಾಜೀನಾಮೆ ನೀಡುವುದಾಗಿ ಸುಪ್ರೀಂಕೋರ್ಟ್‌ನಲ್ಲಿ ಗುಜರಾತ್ ಸರ್ಕಾರದ ಪರ ವಾದಿಸುತ್ತಿರುವ ವಿಶೇಷ ವಕೀಲ ಕೆ.ಟಿ.ಎಸ್.ತುಳಸಿ ಬೆದರಿಕೆ ಹಾಕಿದ್ದಾರೆ.

ಮುಖ್ಯಮಂತ್ರಿ ಸೂಕ್ತ ಸ್ಪಷ್ಟೀಕರಣ ನೀಡಿ ಕ್ಷಮಾಪಣೆ ಕೋರದಿದ್ದರೆ ವಿಶೇಷ ವಕೀಲರಾಗಿ ಗುಜರಾತ್ ಸರ್ಕಾರಕ್ಕೆ ಪ್ರಾತಿನಿಧ್ಯ ವಹಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು. ಸುಪ್ರೀಂಕೋರ್ಟ್‌ನಲ್ಲಿ ರಾಜ್ಯಸರ್ಕಾರ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಸೊಹ್ರಾಬುದ್ದೀನ್ ಅವರದ್ದು ನಕಲಿ ಎನ್‌ಕೌಂಟರ್ ಮೂಲಕ ನಿರ್ವಹಿಸಿದ ನಿರ್ದಯ ಹತ್ಯೆ ಎಂದು ತಿಳಿಸಿರುವುದಾಗಿ ಅವರು ನುಡಿದರು.

ಎನ್‌ಕೌಂಟರ್‌ನಲ್ಲಿ ಪಾಲ್ಗೊಂಡ ಪೊಲೀಸ್ ಅಧಿಕಾರಿಗಳು ಸಾಕ್ಷ್ಯಗಳನ್ನು ತಿರುಚಿದ್ದಾರೆಂದು ಅದರಲ್ಲಿ ತಿಳಿಸಲಾಗಿತ್ತು. ಈ ಬಗ್ಗೆ ಆರೋಪಪಟ್ಟಿಯನ್ನು ಕೂಡ ಈಗಾಗಲೇ ಸಲ್ಲಿಸಲಾಗಿದ್ದು, ಮುಖ್ಯಮಂತ್ರಿಗಳ ಹೇಳಿಕೆ ತದ್ವಿರುದ್ಧವಾಗಿದೆ ಎಂದು ತುಳಸಿ ನುಡಿದರು.ಕೋರ್ಟ್‌ಗೆ ರಾಜ್ಯ ಸರ್ಕಾರ ನೀಡಿದ ಹೇಳಿಕೆಗೆ ತದ್ವಿರುದ್ಧ ನಿಲುವನ್ನು ಮುಖ್ಯಮಂತ್ರಿ ಹೇಗೆ ತೆಗೆದುಕೊಳ್ಳುತ್ತಾರೆಂದು ತುಳಸಿ ಪ್ರಶ್ನಿಸಿದರು.
ಮತ್ತಷ್ಟು
ಉಭಯ ಸದನಗಳಲ್ಲಿ ಅಯೋಧ್ಯೆ ಪ್ರತಿಧ್ವನಿ
ಸೂಪರ್ ಸೋನಿಕ್ ಕ್ಷಿಪಣಿ ಪ್ರಯೋಗ
ವೃದ್ಧ ಪೋಷಕರ ಹೊಣೆ ಮಕ್ಕಳಿಗೆ:ಕಾಯ್ದೆಗೆ ಅಸ್ತು
ರಾಜಧಾನಿಯಲ್ಲಿ ದಾಳಿ ಶಂಕೆ: ಬಿಗಿ ಭದ್ರತೆ
ಏನು ಮಾಡಬೇಕಿತ್ತು: ಮೋದಿ ಪ್ರಶ್ನೆ
ಅಗತ್ಯಕಂಡು ಬಂದರೆ ಅಣ್ವಸ್ತ್ರ ಪರೀಕ್ಷೆ: ಪ್ರಣವ್