ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಿಖ್ ವಿರೋಧಿ ಗಲಭೆಯ ಸಾಕ್ಷಿ ಪತ್ತೆ
1984ರ ಸಿಖ್ ವಿರೋಧಿ ಹಿಂಸಾಚಾರದ ಪ್ರಮುಖ ಸಾಕ್ಷಿಯಾದ ಜಸ್ವೀರ್ ಸಿಂಗ್ ಇರುವ ಸ್ಥಳದ ಬಗ್ಗೆ ಸುಳಿವು ಸಿಕ್ಕಿದೆ ಎಂದು ಕೇಂದ್ರೀಯ ತನಿಖಾ ದಳ ಸಿಬಿಐ ಗುರುವಾರ ತಿಳಿಸುವ ಮೂಲಕ ಮಹತ್ವದ ಬೆಳವಣಿಗೆ ಸಂಭವಿಸಿದೆ. ಜಸ್ವೀರ್ ಸಿಂಗ್ ಪ್ರಸಕ್ತ ಕ್ಯಾಲಿಪೋರ್ನಿಯಾದಲ್ಲಿ ವಾಸವಾಗಿದ್ದು, ಗಲಭೆ ಪ್ರಕರಣದ ಬಗ್ಗೆ ತಾನು ಸಾಕ್ಷಿ ನುಡಿಯುವುದಾಗಿ ಹೇಳಿದ್ದಾನೆಂದು ಸಿಬಿಐ ತಿಳಿಸಿದೆ.

ಪ್ರಮುಖ ಸಾಕ್ಷಿದಾರನು ನಾಪತ್ತೆಯಾಗಿದ್ದಾನೆ ಮತ್ತು ಜಗದೀಶ್ ಟೈಟ್ಲರ್ ಜತೆಗೆ ಕಾಂಗ್ರೆಸ್ ನಾಯಕರಾದ ಭಗತ್ ಸಿಂಗ್ ಹಾಗೂ ಸಜ್ಜನ್ ಕುಮಾರ್ ವಿರುದ್ಧ ದೃಢ ಸಾಕ್ಷ್ಯಗಳಿಲ್ಲ ಎಂದು ಸಿಬಿಐ ಇದಕ್ಕೆ ಮುಂಚೆ ಪ್ರತಿಪಾದಿಸಿತ್ತು. ಆದರೆ ಕೋರ್ಟ್‌ಗೆ ಸಾಕ್ಷಿ ನುಡಿಯಲು ಇಚ್ಛೆಪಟ್ಟಿರುವುದಾಗಿ ಅಮೆರಿಕದಲ್ಲಿರುವ ಜಸ್ವೀರ್ ಸಿಂಗ್ ಹೇಳಿಕೆಯನ್ನು ಟಿವಿ ಚಾನೆಲ್‌ವೊಂದು ಪ್ರಸಾರ ಮಾಡಿತ್ತು,

ಈ ಪ್ರಕರಣದಲ್ಲಿ ಸಿಬಿಐ ತಮ್ಮನ್ನು ಸಂಪರ್ಕಿಸಿಯೇ ಇಲ್ಲವೆಂದೂ ಸಿಂಗ್ ನುಡಿದಿದ್ದರು. ಟೈಟ್ಲರ್ ಬೆಂಬಲಿಗರಿಂದ ತಾವು ಬೆದರಿಕೆ ಎದುರಿಸುತ್ತಿದ್ದು, ಸರ್ಕಾರ ತಮಗೆ ರಕ್ಷಣೆ ನೀಡುವುದಾದರೆ ಮಾತ್ರ ಸಾರ್ವಜನಿಕವಾಗಿ ಪ್ರತ್ಯಕ್ಷವಾಗುವುದಾಗಿ ಅವರು ನುಡಿದಿದ್ದರು. ತಮ್ಮ ಹೇಳಿಕೆ ವಾಪಸ್ ತೆಗೆದುಕೊಂಡರೆ ಹಣ ನೀಡುವ ಪ್ರಸ್ತಾಪವನ್ನು ಟೈಟ್ಲರ್ ಮಾಡಿದ್ದರೆಂದು ಜಸ್ವೀರ್ ತಿಳಿಸಿದ್ದರು.

ನಾನಾವತಿ ಆಯೋಗದ ಮುಂದೆ ತಾವು ಸಾಕ್ಷಿ ನುಡಿದಿದ್ದರೂ ಯಾವುದೇ ಕೋರ್ಟ್ ಸಾಕ್ಷ್ಯ ನುಡಿಯಲು ತಮ್ಮನ್ನು ಕರೆದಿಲ್ಲ ಎಂದು ಜಸ್ವೀರ್ ಹೇಳಿಕೊಂಡಿದ್ದರು. ಏತನ್ಮದ್ಯೆ, ಟೈಟ್ಲರ್ ಜಸ್ವೀರ್ ವಾದವನ್ನು ಅಲ್ಲಗಳೆದಿದ್ದು, ಅವನ ಅಸ್ತಿತ್ವವೇ ಇಲ್ಲವೆಂದು ಹೇಳಿ, ತನಗೆ ಕಳಂಕ ತರಲು ಹೂಡಿದ ಸಂಚು ಎಂದು ತಿಳಿಸಿದ್ದಾರೆ.
ಮತ್ತಷ್ಟು
ಮೋದಿಗೆ ಕ್ಷಮೆ ಕೇಳಲು ಆಗ್ರಹ
ಉಭಯ ಸದನಗಳಲ್ಲಿ ಅಯೋಧ್ಯೆ ಪ್ರತಿಧ್ವನಿ
ಸೂಪರ್ ಸೋನಿಕ್ ಕ್ಷಿಪಣಿ ಪ್ರಯೋಗ
ವೃದ್ಧ ಪೋಷಕರ ಹೊಣೆ ಮಕ್ಕಳಿಗೆ:ಕಾಯ್ದೆಗೆ ಅಸ್ತು
ರಾಜಧಾನಿಯಲ್ಲಿ ದಾಳಿ ಶಂಕೆ: ಬಿಗಿ ಭದ್ರತೆ
ಏನು ಮಾಡಬೇಕಿತ್ತು: ಮೋದಿ ಪ್ರಶ್ನೆ