ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಶಬರಿಮಲೆಯಲ್ಲಿ ಬಿಗಿ ಭದ್ರತೆ
ಡಿ.6ರಂದು ಬಾಬ್ರಿ ಮಸೀದಿಯ 15ನೇ ಕರಾಳ ದಿನಾಚರಣೆ ಹಿನ್ನೆಲೆಯಲ್ಲಿ ಕೇರಳದ ಪ್ರಮುಖ ದೇವಸ್ಥಾನ ಶಬರಿಮಲೆ ಮತ್ತು ಗುರುವಾಯೂರಿನ ಶ್ರೀ ಕೃಷ್ಣ ದೇವಳದಲ್ಲಿ ಬಿಗಿ ಭದ್ರತೆ ನಿಯೋಜಿಸಲಾಗಿದೆ. ಹೆಚ್ಚುವರಿ ಪಡೆಗಳನ್ನು ನಿಯೋಜಿಸುವ ಮೂಲಕ ರೈಲ್ವೆ ನಿಲ್ದಾಣಗಳಲ್ಲಿ, ವಿಮಾನನಿಲ್ದಾಣಗಳಲ್ಲಿ ಮತ್ತು ಬಸ್ ಡಿಪೊಗಳಲ್ಲಿ ಕಾವಲನ್ನು ಬಿಗಿಗೊಳಿಸಲಾಗಿದೆ ಎಂದು ಪೊಲೀಸ್ ಮೂಲಗಳು ಹೇಳಿವೆ.

ವಾರ್ಷಿಕ ಮಂಡಲವಿಳಕ್ಕು ಪ್ರಯುಕ್ತ ಸಾವಿರಾರು ಭಕ್ತರ ಆಗಮನ ನಿರೀಕ್ಷಿಸಿರುವ ಶಬರಿಮಲೆ ಮತ್ತು ಪಂಪಾ ಬೆಟ್ಟದ ತಪ್ಪಲಿನಲ್ಲಿ ಸಶಸ್ತ್ರ ಪೊಲೀಸ್ ಸಿಬ್ಬಂದಿ ಮತ್ತು ಬಾಂಬ್ ತುಕಡಿಯನ್ನು ನಿಯೋಜಿಸಲಾಗಿದೆ.

ಪಂಪಾ ಮತ್ತು ಸನ್ನಿಧಾನಂನಲ್ಲಿ ಯಾತ್ರಿಗಳನ್ನು ಲೋಹಶೋಧಕ ಯಂತ್ರದಿಂದ ಪರಿಶೀಲನೆ ಮಾಡಿ ಅವರ ಚೀಲ ಮತ್ತು ಮೊಬೈಲ್ ಫೋನ್‌ಗಳನ್ನು ಮಂದಿರದ ಆವರಣದೊಳಗೆ ಒಯ್ಯಲು ಅವಕಾಶ ನೀಡುತ್ತಿಲ್ಲ. ಭದ್ರತಾ ಪಡೆಗಳು ವಿದ್ಯುತ್ ಟ್ರಾನ್ಸ್‌ಪಾರ್ಮರ್, ನೀರಿನ ಟ್ಯಾಂಕ್ ಮತ್ತು ಪೆಟ್ರೋಲ್ ಬಂಕ್‌ಗಳಲ್ಲಿ ಕೂಡ ಕಾವಲು ಕಾಯುತ್ತಿದ್ದಾರೆ.
ಮತ್ತಷ್ಟು
ಸಿಖ್ ವಿರೋಧಿ ಗಲಭೆಯ ಸಾಕ್ಷಿ ಪತ್ತೆ
ಮೋದಿಗೆ ಕ್ಷಮೆ ಕೇಳಲು ಆಗ್ರಹ
ಉಭಯ ಸದನಗಳಲ್ಲಿ ಅಯೋಧ್ಯೆ ಪ್ರತಿಧ್ವನಿ
ಸೂಪರ್ ಸೋನಿಕ್ ಕ್ಷಿಪಣಿ ಪ್ರಯೋಗ
ವೃದ್ಧ ಪೋಷಕರ ಹೊಣೆ ಮಕ್ಕಳಿಗೆ:ಕಾಯ್ದೆಗೆ ಅಸ್ತು
ರಾಜಧಾನಿಯಲ್ಲಿ ದಾಳಿ ಶಂಕೆ: ಬಿಗಿ ಭದ್ರತೆ