ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿಯ ಪ್ರಚಾರ ವೈಖರಿ ಬದಲು
PTI
ಮುಖ್ಯಮಂತ್ರಿ ನರೇಂದ್ರ ಮೋದಿ 2002ರ ಗುಜರಾತ್ ಚುನಾವಣೆಯನ್ನು ತನ್ನ ವಾಕ್ಪುಟತ್ವದಿಂದ ಏಕಾಂಗಿಯಾಗಿ ಗೆದ್ದಿದ್ದರು. ಆದರೆ ಈ ಬಾರಿ ಬಿಜೆಪಿಯ "ಸ್ಪಿನ್ ವೈದ್ಯರು" ತನ್ನ ಭವಿಷ್ಯತ್ತಿನ ಕನಸುಗಳೊಂದಿಗೆ ರಾಜ್ಯವನ್ನು ಮುನ್ನಡೆಸುವ ಆಕಾಂಕ್ಷೆ ಹೊಂದಿರುವ ಪರಿಪಕ್ವ ವರ್ಚಸ್ವಿ ನಾಯಕನ ಸ್ಥಾನವನ್ನು ಮೋದಿಗೆ ನೀಡಲು ಯತ್ನಿಸಿದ್ದಾರೆ.

ವಾಕ್ಪುಟತ್ವಕ್ಕೆ ಹೆಸರಾದ ಮೋದಿ ಪ್ರಸಕ್ತ ಭಯೋತ್ಪಾದನೆ ವಿರೋಧಿ ಧೋರಣೆಯನ್ನು ಪ್ರದರ್ಶಿಸುತ್ತಿದ್ದು, ರಾಷ್ಟ್ರೀಯ ಮನೋಭಾವ ಮತ್ತು ಐ ಲವ್ ಗುಜರಾತ್ ಹಾಗೂ ಗುಜರಾತ್ ಜೀತೇಗಾ ಘೋಷಣೆಗಳೊಂದಿಗೆ ಕಣಕ್ಕೆ ಇಳಿದಿದ್ದಾರೆ. ಗುಜರಾತ್‌ಗೆ 2002ರ ಚುನಾವಣೆ ರೀತಿಯಲ್ಲಿ ಯಾವುದೇ ಭಾವನಾತ್ಮಕ ವಿಷಯವಿಲ್ಲದಿದ್ದರೂ ಭಾವನಾತ್ಮಕ ಮನವಿಗಳನ್ನು ಮತವಾಗಿ ಪರಿವರ್ತಿಸುವ ಕಲೆ ಮೋದಿಗೆ ಕರಗತವಾಗಿದೆ.

ಮೋದಿಯ ಪ್ರಚಾರದ ಶೈಲಿಯು ಕೂಡ ಅವರು ಭೇಟಿ ಮಾಡುವ ಕ್ಷೇತ್ರವನ್ನು ಅವಲಂಬಿಸಿದೆ. ಬಿಜೆಪಿ ಭಿನ್ನಮತವನ್ನು ಎದುರಿಸುತ್ತಿರುವ ಸ್ಥಳಗಳಲ್ಲಿ ಮೋದಿ ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣವನ್ನು ತನ್ನದೇ ಶೈಲಿಯಲ್ಲಿ ವಿವರಿಸುತ್ತಾರೆ. "ಭಯೋತ್ಪಾದನೆಯನ್ನು ಕೈಗೆತ್ತಿಕೊಳ್ಳಲು ಇಲ್ಲಿ ಯಾರಿಗೂ ಎದೆಗಾರಿಕೆ ಇಲ್ಲ. ಸೊಹ್ರಾಬುದ್ದೀನ್ ಗುಜರಾತ್ ನೆಲದಲ್ಲಿ ಸತ್ತನು" ಎಂದು ಮೋದಿ ಪ್ರಚಾರ ಮಾಡುತ್ತಾರೆ.

ಆದರೆ ಗೋಧ್ರಾ ಮುಂತಾದ ಗಲಭೆ ವಲಯಗಳಿಗೆ ಭೇಟಿ ನೀಡಿದಾಗ ಅವರ ಮಾತಿನ ಧಾಟಿಯೇ ಬದಲಾಗುತ್ತದೆ. ತಮ್ಮನ್ನು ಹಿಂದುವೆಂದು ಗುರುತಿಸಿಕೊಳ್ಳಲು ಮತ್ತು ಭಯೋತ್ಪಾದನೆಯ ಬಗ್ಗೆ ಮಾತನಾಡಲು ಅವರು ಇಚ್ಛಿಸುತ್ತಾರೆ. ಈ ಬಾರಿ ಚುನಾವಣೆಯಲ್ಲಿ ಬರೀ ಘೋಷಣೆ ಮಾತ್ರ ಬದಲಾಗಿಲ್ಲ. ಸಾರಿಗೆಯ ವಿಧಾನವೂ ಬದಲಾಗಿದೆ.

2002ರಲ್ಲಿ ಮೋದಿ ರಸ್ತೆ ಪ್ರದರ್ಶನಕ್ಕೆ ಆಧುನಿಕ ರಥವನ್ನು ಟಿವಿ, ಇಂಟರ್‌ನೆಟ್ ಮತ್ತಿತರ ಸೌಲಭ್ಯಗಳೊಂದಿಗೆ ಬಳಸಿದ್ದನು, ಆದರೆ ಪ್ರಸಕ್ತ ಮೋದಿ ಸರಳವಾದ ಕೇಸರಿ ಬಣ್ಣದ ಹವಾನಿಯಂತ್ರಿತ ರಥವನ್ನು ಬಳಸುತ್ತಿದ್ದು, ಅದರ ಮೇಲೆ "ಐ ಲವ್ ಯು"ಗುಜರಾತ್ ಸ್ಟಿಕರ್ ಅಂಟಿಸಲಾಗಿದೆ.
ಮತ್ತಷ್ಟು
ಮಧುರೈ ಹೈಕೋರ್ಟ್‌ನಿಂದ ನಿಂದನಾ ನೋಟಿಸ್
ಗುಜರಾತಿನಲ್ಲಿ ಪ್ರಧಾನಿಯಿಂದ ಚುನಾವಣಾ ಪ್ರಚಾರ
ಶಬರಿಮಲೆಯಲ್ಲಿ ಬಿಗಿ ಭದ್ರತೆ
ಸಿಖ್ ವಿರೋಧಿ ಗಲಭೆಯ ಸಾಕ್ಷಿ ಪತ್ತೆ
ಮೋದಿಗೆ ಕ್ಷಮೆ ಕೇಳಲು ಆಗ್ರಹ
ಉಭಯ ಸದನಗಳಲ್ಲಿ ಅಯೋಧ್ಯೆ ಪ್ರತಿಧ್ವನಿ