ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಣವ್ ಮುಖರ್ಜಿ- ಇನಾಮುಲ್ ಹಕ್ ಭೇಟಿ
PTI
ವಿದೇಶಾಂಗ ವ್ಯವಹಾರ ಸಚಿವ ಪ್ರಣವ್ ಮುಖರ್ಜಿ ಅವರು ಶುಕ್ರವಾರ ಪಾಕಿಸ್ತಾನ ವಿದೇಶಾಂಗ ಸಲಹೆಗಾರ ಇನಾಮುಲ್ ಹಕ್ ಅವರನ್ನು ಭೇಟಿ ಮಾಡಲಿದ್ದು, ಭಾರತ-ಪಾಕಿಸ್ತಾನ ಜಂಟಿ ಮಾತುಕತೆಯ ಸ್ಥಿತಿಗತಿಯನ್ನು ಪರಾಮರ್ಶಿಸಲಿದ್ದಾರೆ. ಅಧ್ಯಕ್ಷ ಮುಷರ್ರಫ್ ಪಾಕಿಸ್ತಾನದಲ್ಲಿ ತುರ್ತುಪರಿಸ್ಥಿತಿ ಹೇರಿದ ಬಳಿಕ ಭಾರತ-ಪಾಕಿಸ್ತಾನದ ನಡುವೆ ನಡೆಯುತ್ತಿರುವ ಉನ್ನತ ಮಟ್ಟದ ಮಾತುಕತೆ ಇದಾಗಿದೆ.

ಇನಾಮುಲ್ ಹಕ್ ಅವರು ಪ್ರಾದೇಶಿಕ ಸಹಕಾರ ದಕ್ಷಿಣ ಏಷ್ಯ ಒಕ್ಕೂಟ(ಸಾರ್ಕ್)ಸಚಿವ ಮಂಡಳಿಯ ಸಭೆಯಲ್ಲಿ ಭಾಗವಹಿಸಲು ರಾಜಧಾನಿಯಲ್ಲಿದ್ದಾರೆ. ಸಾರ್ಕ್ ಸಭೆಯ ನೇಪಥ್ಯದಲ್ಲಿ ಹಕ್ ಮತ್ತು ಮುಖರ್ಜಿ ಪ್ರತ್ಯೇಕ ದ್ವಿಪಕ್ಷೀಯ ವಿನಿಮಯ ಮಾಡಿಕೊಳ್ಳುವರೆಂದು ನಿರೀಕ್ಷಿಸಲಾಗಿದೆ. ಹಕ್ ಇಲ್ಲಿಗೆ ಆಗಮಿಸಿದ ಬಳಿಕ ವರದಿಗಾರರ ಜತೆ ಮಾತನಾಡುತ್ತಾ, ಸಿಯಾಚಿನ್, ಜಮ್ಮುಕಾಶ್ಮೀರ ಮುಂತಾದ ವಿಷಯಗಳನ್ನು ಒಳಗೊಂಡ ಜಂಟಿಮಾತುಕತೆಯ ಸ್ಥಿತಿಗತಿಯನ್ನು ಪ್ರಣವ್ ಜತೆ ಚರ್ಚಿಸುವುದಾಗಿ ಅವರು ನುಡಿದರು.

ಇದಕ್ಕೆ ಮುನ್ನ, ವಿದೇಶಾಂಗ ಸಚಿವ ಶಿವಶಂಕರ ಮೆನನ್ ಮಾತನಾಡುತ್ತಾ, ಉಭಯ ನಾಯಕರು ದ್ವಿಪಕ್ಷೀಯ ಸಂಬಂಧದ ಬಗ್ಗೆ ಪರಾಮರ್ಶೆ ನಡೆಸಿ ಎಷ್ಟು ಸಾಧನೆ ಮಾಡಲಾಗಿದೆ ಮತ್ತು ಇನ್ನೂ ಎಷ್ಟು ಸಾಧನೆ ಮಾಡಲು ಸಾಧ್ಯವೆಂಬುದನ್ನು ಪರಿಶೀಲನೆ ಮಾಡಲಿದ್ದಾರೆಂದು ಹೇಳಿದರು. ಪಾಕಿಸ್ತಾನದಲ್ಲಿ ರಾಜಕೀಯ ಕ್ಷೋಬೆ ಉಂಟಾಗಿರುವ ನಡುವೆ ಈ ಭೇಟಿ ಮಹತ್ವ ಪಡೆದಿದೆ.
ಮತ್ತಷ್ಟು
ಮೋದಿಯ ಪ್ರಚಾರ ವೈಖರಿ ಬದಲು
ಮಧುರೈ ಹೈಕೋರ್ಟ್‌ನಿಂದ ನಿಂದನಾ ನೋಟಿಸ್
ಗುಜರಾತಿನಲ್ಲಿ ಪ್ರಧಾನಿಯಿಂದ ಚುನಾವಣಾ ಪ್ರಚಾರ
ಶಬರಿಮಲೆಯಲ್ಲಿ ಬಿಗಿ ಭದ್ರತೆ
ಸಿಖ್ ವಿರೋಧಿ ಗಲಭೆಯ ಸಾಕ್ಷಿ ಪತ್ತೆ
ಮೋದಿಗೆ ಕ್ಷಮೆ ಕೇಳಲು ಆಗ್ರಹ