ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ ವಿರುದ್ಧ ಅರ್ಜಿ ವಿಚಾರಣೆ
PTI
ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಚುನಾವಣೆ ಪ್ರಚಾರ ಭಾಷಣದಲ್ಲಿ ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಕುರಿತು ಪ್ರಚೋದನಾಕಾರಿ ಹೇಳಿಕೆ ನೀಡಿರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಕೋರಿದ ಎರಡು ಪ್ರತ್ಯೇಕ ಅರ್ಜಿಗಳನ್ನು ವಿಚಾರಣೆಗೆ ಎತ್ತಿಕೊಳ್ಳಲು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ.

ನ್ಯಾಯಮೂರ್ತಿ ತರುಣ್ ಚಟರ್ಜಿ ನೇತೃತ್ವದ ಪೀಠ ಸೋಮವಾರ ವಿಚಾರಣೆಯನ್ನು ಮುಂದೂಡಿತು. ಮೃತರ ಸೋದರ ರುಬಾಬುದ್ದೀನ್ ಶೇಖ್ ಪರ ವಕೀಲ ದುಷ್ಯಂತ್ ದೇವ್ ಮತ್ತು ಇನ್ನೊಬ್ಬ ಅರ್ಜಿದಾರ ಜಾವೇದ್ ಅಕ್ತರ್ ಪರ ವಕೀಲ ಪ್ರಶಾಂತ್ ಭೂಷಣ್ ಈ ವಿಷಯವನ್ನು ಪೀಠದ ಎದುರು ಪ್ರಸ್ತಾಪಿಸಿದರು.

ನಕಲಿ ಎನ್‌ಕೌಂಟರ್ ಮೂಲಕ ಸೊಹ್ರಾಬುದ್ದೀನ್ ಹತ್ಯೆ ಸಮರ್ಥಿಸಿಕೊಂಡ ಮೋದಿಯ ಬಗ್ಗೆ ವಿಚಾರಣೆ ನಡೆಸುವಂತೆ ಇಬ್ಬರು ಅರ್ಜಿದಾರರು ಕೋರಿದ್ದರು.
ಮತ್ತಷ್ಟು
ಪ್ರಣವ್ ಮುಖರ್ಜಿ- ಇನಾಮುಲ್ ಹಕ್ ಭೇಟಿ
ಮೋದಿಯ ಪ್ರಚಾರ ವೈಖರಿ ಬದಲು
ಮಧುರೈ ಹೈಕೋರ್ಟ್‌ನಿಂದ ನಿಂದನಾ ನೋಟಿಸ್
ಗುಜರಾತಿನಲ್ಲಿ ಪ್ರಧಾನಿಯಿಂದ ಚುನಾವಣಾ ಪ್ರಚಾರ
ಶಬರಿಮಲೆಯಲ್ಲಿ ಬಿಗಿ ಭದ್ರತೆ
ಸಿಖ್ ವಿರೋಧಿ ಗಲಭೆಯ ಸಾಕ್ಷಿ ಪತ್ತೆ