ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈತರ ಸಾಲಕ್ಕೆ ಬಡ್ಡಿದರ ತಗ್ಗಿಸಲು ಪರಿಶೀಲನೆ
PTI
ರೈತರ ಸಾಲದ ಮೇಲೆ ಬಡ್ಡಿದರ ಕಡಿಮೆ ಮಾಡಬೇಕೆಂಬ ಸಲಹೆಗಳನ್ನು ಅತ್ಯಂತ ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ವಿತ್ತಸಚಿವ ಪಿ. ಚಿದಂಬರಂ ಲೋಕಸಭೆಗೆ ಶುಕ್ರವಾರ ತಿಳಿಸಿದರು. ಸರ್ಕಾರ ರೈತರ ಸಾಲದ ಮೇಲೆ ಬಡ್ಡಿಯನ್ನು ಶೇ.4ಕ್ಕೆ ತಗ್ಗಿಸುವುದೇ ಎಂಬ ಪೂರಕ ಪ್ರಶ್ನೆಗೆ ಉತ್ತರಿಸಿದ ಅವರು, ಈ ಸರ್ಕಾರವು ಬಡ್ಡಿದರವನ್ನು ಶೇ.10ರಿಂದ ಶೇ.7ಕ್ಕೆ ಇಳಿಸಿದೆ.

ಇನ್ನಷ್ಟು ಇಳಿಮುಖ ಮಾಡಬೇಕೆಂಬ ಸಲಹೆಯನ್ನು ಸಹಾನುಭೂತಿಯಿಂದ ಪರಿಶೀಲಿಸುವುದಾಗಿ ಅವರು ಹೇಳಿದರು. ಇದಕ್ಕೆ ಮುನ್ನ ಸಾವಯವ ಕೃಷಿಗೆ ರಿಯಾಯಿತಿ ದರದಲ್ಲಿ ಸಾಲ ನೀಡಬೇಕೆಂಬ ಬೋಚಾ ಜಾನ್ಸಿ ಲಕ್ಷ್ಮಿ ಪ್ರಶ್ನೆಗೆ ಉತ್ತರಿಸಿದ ಅವರು ಸಾವಯವ ಕೃಷಿಗೆ ಸಾರ್ವಜನಿಕ ವಲಯದ ಬ್ಯಾಂಕುಗಳು ಹೆಚ್ಚು ಸಾಲ ನೀಡುವಂತೆ ಪ್ರೋತ್ಸಾಹಿಸುವುದಾಗಿ ಅವರು ನುಡಿದರು.

ಸರ್ಕಾರ ವೈದ್ಯನಾಥನ್ ಸಮಿತಿಯ ಎರಡನೇ ವರದಿ ನಿರೀಕ್ಷೆಯಲ್ಲಿದ್ದು, ಬಡ್ಡಿದರದ ಬಗ್ಗೆ ಮುಖ್ಯಮಂತ್ರಿಗಳು ಮತ್ತು ವಿತ್ತಸಚಿವರ ಜತೆ ಸಮಾಲೋಚನೆ ನಡೆಸುವುದಾಗಿ ಅವರು ನುಡಿದರು.
ಮತ್ತಷ್ಟು
ನಂದಿಗ್ರಾಮ: ಸಿಐಡಿ ತನಿಖೆಗೆ ಆದೇಶ
ರಾಮನ ಅಸ್ತಿತ್ವವೇ ಇಲ್ಲ: ಬುದ್ಧದೇವ್
ಮೋದಿ ವಿರುದ್ಧ ಅರ್ಜಿ ವಿಚಾರಣೆ
ಪ್ರಣವ್ ಮುಖರ್ಜಿ- ಇನಾಮುಲ್ ಹಕ್ ಭೇಟಿ
ಮೋದಿಯ ಪ್ರಚಾರ ವೈಖರಿ ಬದಲು
ಮಧುರೈ ಹೈಕೋರ್ಟ್‌ನಿಂದ ನಿಂದನಾ ನೋಟಿಸ್