ಸಾವಿನ ಅಂಚಿನಲ್ಲಿರುವ ರೋಗಿಗಳಿಗೆ ಜೀವ ರಕ್ಷಕ ಹಿಂತೆಗೆದುಕೊಳ್ಳುವುದಕ್ಕೆ ಸಂಬಂಧಿಸಿದಂತೆ ಪರಿಶೀಲನೆಗೆ ಸಮಿತಿಯನ್ನು ರಚಿಸಬೇಕೆಂಬ ಕಾನೂನು ಆಯೋಗದ ಶಿಫಾರಸನ್ನು ಸರ್ಕಾರ ತಳ್ಳಿಹಾಕಿದೆ. ಸರ್ಕಾರ ಶಿಫಾರಸುಗಳನ್ನು ಪರಿಶೀಲಿಸಿದ್ದು, ಅದನ್ನು ಒಪ್ಪಿಕೊಳ್ಳಲು ತಯಾರಿಲ್ಲ ಎಂದು ಕಾನೂನು ಸಚಿವ ಹನ್ಸ್ ರಾಜ್ ಭಾರದ್ವಾಜ್ ಲೋಕಸಭೆಗೆ ಮಾಹಿತಿ ನೀಡಿದರು.
ಕಾನೂನು ಆಯೋಗದ ಶಿಫಾರಸಿನಲ್ಲಿ ಮಾರಣಾಂತಿಕ ಕಾಯಿಲೆಯಿಂದ ನರಳುವ ಪ್ರತಿಯೊಬ್ಬ ರೋಗಿ ತನ್ನನ್ನು ಬಾಧಿಸುವ ನೋವಿನಿಂದ ಮುಕ್ತಿಹೊಂದಲು ವೈದ್ಯಕೀಯ ಚಿಕಿತ್ಸೆ ನಿರಾಕರಿಸುವ ಹಕ್ಕಿದೆ ಎಂದು ತಿಳಿಸಲಾಗಿತ್ತು.
ಸೂಕ್ತ ರೋಗಿ ಈ ನಿರ್ಧಾರವನ್ನು ಮಾಡಿರುವುದರ ಬಗ್ಗೆ ವೈದ್ಯರಿಗೆ ತೃಪ್ತಿಯಾಗಬೇಕು ಮತ್ತು ಅದೊಂದು ಮಾಹಿತಿ ನೀಡಿದ ನಿರ್ಧಾರವಾಗಿರಬೇಕು ಎಂದು ಶಿಫಾರಸಿನಲ್ಲಿ ತಿಳಿಸಲಾಗಿದೆ. ಸೂಕ್ತವಲ್ಲದ ರೋಗಿಗಳ ವಿಷಯದಲ್ಲಿ ಮೂವರು ವೈದ್ಯಕೀಯ ತಜ್ಞರ ಸಮಿತಿಯ ಅಭಿಪ್ರಾಯ ಪಡೆದ ಬಳಿಕವೇ ಅವರು ನಿರ್ಧಾರ ಕೈಗೊಳ್ಳಬೇಕು ಎಂದು ಸಮಿತಿ ಶಿಫಾರಸು ಮಾಡಿತ್ತು.
|