ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೇವು ಹಗರಣ: 71 ಆರೋಪಿಗಳಿಗೆ ಶಿಕ್ಷೆ
ಮೇವು ಹಗರಣದ ಪ್ರಕರಣವೊಂದಕ್ಕೆ ಸಂಬಂಧಪಟ್ಟಂತೆ ನಿಯೋಜಿತ ಸಿಬಿಐ ನ್ಯಾಯಾಲಯ ಶುಕ್ರವಾರ 80 ಆರೋಪಿಗಳಲ್ಲಿ 71 ಜನರಿಗೆ ಶಿಕ್ಷೆ ವಿಧಿಸಿದೆ. ರಾಂಚಿಯ ಬೊಕ್ಕಸದಿಂದ ನಕಲಿ ದಾಖಲೆಗಳನ್ನು ಬಳಸಿ 27.33 ಕೋಟಿ ರೂ.ಗಳನ್ನು ಅಕ್ರಮವಾಗಿ ಪಡೆದಿರುವುದಕ್ಕೆ ಸಂಬಂಧಪಟ್ಟಂತೆ ಈ ಶಿಕ್ಷೆ ವಿಧಿಸಲಾಗಿದೆ.

ಮೂವರು ಆರೋಪಿಗಳಿಗೆ 6 ವರ್ಷಗಳ ಕಾರಾಗೃಹವಾಸ ಮತ್ತು 50,000 ರೂ.ದಂಡವನ್ನು ಕೋರ್ಟ್ ವಿಧಿಸಿದ್ದು, 21 ಮಂದಿಗೆ ಮೂರು ವರ್ಷಗಳ ಕಾರಾಗೃಹ ಶಿಕ್ಷೆ ಮತ್ತು 50,000 ರೂ.ದಂಡವನ್ನು ವಿಧಿಸಿದೆ. 7 ಮಂದಿ ಆರೋಪಿಗಳನ್ನು ಸಾಕ್ಷ್ಯಾಧಾರದ ಕೊರತೆಯಿಂದ ಬಿಡುಗಡೆ ಮಾಡಲಾಗಿದೆ ಎಂದು ಕೋರ್ಟ್ ತಿಳಿಸಿದ್ದು, ಡಿ.12ರಂದು ಉಳಿದ 40 ಆರೋಪಿಗಳ ಶಿಕ್ಷೆಯ ಸ್ವರೂಪವನ್ನು ನಿರ್ಧರಿಸಲಾಗುವುದು ಎಂದು ಕೋರ್ಟ್ ತಿಳಿಸಿದೆ.

ಆದಾಗ್ಯೂ, ಮೂರು ವರ್ಷಗಳ ಶಿಕ್ಷೆಯನ್ನು ಪಡೆದಿರುವ 21 ಆರೋಪಿಗಳಿಗೆ ಜಾಮೀನು ನೀಡಲಾಗಿದೆ. ಎರಡೂ ಕಡೆಯ ವಾದವಿವಾದಗಳನ್ನು ಆಲಿಸಿದ ಸಿಬಿಐ ನ್ಯಾಯಾಧೀಶ ಜೆ.ಕೆ.ಎನ್.ತಿವಾರಿ ಈ ತೀರ್ಪುನೀಡಿದ್ದಾರೆ.

ಆರಂಭದಲ್ಲಿ ಈ ಪ್ರಕರಣದಲ್ಲಿ ಸುಮಾರು 80 ಆರೋಪಿಗಳಿದ್ದರು. ಅವರಲ್ಲಿ ಮೂವರು ಸರ್ಕಾರಿ ಮಾಫಿ ಸಾಕ್ಷಿಗಳಾಗಿ ಪರಿವರ್ತನೆಯಾದರು. ವಿಚಾರಣೆಯ ವೇಳೆಯಲ್ಲಿ ನಾಲ್ವರು ಮೃತಪಟ್ಟರು ಮತ್ತು ಒಬ್ಬರನ್ನು ಪ್ರಕರಣದ ಆರಂಭದ ಹಂತದಲ್ಲೇ ಖುಲಾಸೆ ಮಾಡಲಾಗಿತ್ತು. ಇನ್ನುಳಿದ ಒಬ್ಬರು ವಿಚಾರಣೆ ವೇಳೆಯಲ್ಲಿ ತಾವು ನಿರ್ದೋಷಿ ಎಂದು ಕೋರಿಕೊಂಡಿದ್ದರಲ್ಲದೇ ಬಳಿಕ ಮೃತಪಟ್ಟರು.
ಮತ್ತಷ್ಟು
ರೋಗಿಗೆ ಸಾವಿನ ಹಕ್ಕು ಶಿಫಾರಸು ವಜಾ
ರೈತರ ಸಾಲಕ್ಕೆ ಬಡ್ಡಿದರ ತಗ್ಗಿಸಲು ಪರಿಶೀಲನೆ
ನಂದಿಗ್ರಾಮ: ಸಿಐಡಿ ತನಿಖೆಗೆ ಆದೇಶ
ರಾಮನ ಅಸ್ತಿತ್ವವೇ ಇಲ್ಲ: ಬುದ್ಧದೇವ್
ಮೋದಿ ವಿರುದ್ಧ ಅರ್ಜಿ ವಿಚಾರಣೆ
ಪ್ರಣವ್ ಮುಖರ್ಜಿ- ಇನಾಮುಲ್ ಹಕ್ ಭೇಟಿ