ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರಗಾಮಿಯಿಂದ ಪಾಕ್ ಕ್ರಿಕೆಟಿಗರಿಗೆ ಶುಭ ಹಾರೈಕೆ
ಪಾಕ್ ಉಗ್ರಗಾಮಿ ಪಹಾರ್ ಪಾಕಿಸ್ಥಾನದ ಕ್ರಿಕೆಟ್ ಪಟುಗಳಿಗೆ ಶುಭ ಕೋರಿರುವುದು ಇದೀಗ ಬೆಳಕಿಗೆ ಬಂದಿದೆ. ಅಲ್ ಬರ್ ಮುಜಾಹಿದ್ದೀನ್ ಸಂಘಟನೆಯ ಉಗ್ರಗಾಮಿ ಪಹಾರ್ ಇದೀಗ ಮೈಸೂರು ಜೈಲಿನಲ್ಲಿದ್ದು ಬಿಡುಗಡೆಗೆ ಶತಾಯ ಗತಾಯ ಯತ್ನಗಳನ್ನು ಮಾಡುತ್ತಿದ್ದಾನೆ.

ಈಚೆಗೆ ಮೈಸೂರು ಜಿಲ್ಲಾ ಹಾಗೂ ರಾಜ್ಯ ವಕೀಲರ ಸಂಘವು ತೆಗೆದುಕೊಂಡ ನಿರ್ಣಯದಂತೆ ಯಾವೊಬ್ಬ ವಕೀಲನೂ ಉಗ್ರಗಾಮಿ ಎಂದು ಗುರುತಿಸಲ್ಪಟ್ಟ ವ್ಯಕ್ತಿಯ ವಕಾಲತ್ತು ವಹಿಸುವುದಾಗಲಿ ಅಥವಾ ಉಗ್ರಗಾಮಿ ಸಂಘಟನೆಗಳೊಂದಿಗೆ ಗುರುತಿಸಲ್ಪಟ್ಟ ವ್ಯಕ್ತಿಗಳ ಪರವಾಗಿಯಾಗಲೀ ವಾದ ಮಾಡಬಾರದು ಎಂದು ನಿರ್ಣಯ ಕೈಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

ತನ್ನ ಪರವಾಗಿ ಯಾರೊಬ್ಬರೂ ವಕಾಲತ್ತು ವಹಿಸಲು ಬಾರದಿರುವ ವಕೀಲರ ಕ್ರಮದಿಂದಾಗಿ ಕಂಗಾಲಾಗಿರುವ ಪಹಾರ್ ತನ್ನ ರಕ್ಷಣೆಗಾಗಿ ಪಾಕಿಸ್ಥಾನ ಹೈಕಮಿಷನರ್ ಪತ್ರ ಇದೀಗ ಬೆಳಕಿಗೆ ಬಂದಿದೆ.

ಪಹಾರ್ ಬರೆದ ಪತ್ರದಲ್ಲಿ ನಾನು ನಿರಪರಾಧಿ ನನ್ನನ್ನು ರಕ್ಷಿಸಿ ಎಂಬ ಘೋಷ ವಾಕ್ಯ ಇರುವುದರ ಜೊತೆಗೆ ಪಾಕ್ ಕ್ರಿಕೆಟಿಗರಿಗೆ ಶುಭ ಕೋರಿರುವ ಅಂಶ ಬೆಳಕಿಗೆ ಬಂದಿದ್ದು ಕ್ರಿಕೆಟ್ ಪ್ರೇಮಿಗಳನ್ನು ಚಿಂತೆಗೀಡು ಮಾಡಿದೆ. ಆಲ್ ಬರ್ ಮುಜಾಹಿದ್ದೀನ್ ಸಂಘಟನೆಯ ಲೆಟರ್ ಹೆಡ್‌ನ ಲ್ಲಿ ಈ ಪತ್ರವನ್ನು ಬರೆಯಲಾಗಿದ್ದು ಅದರ ಒಕ್ಕಣಿಕೆ ಉರ್ದು ಭಾಷೆಯಲ್ಲಿದೆ.

ಪಾಕಿಸ್ಥಾನದ ಹೈಕಮಿಷನರ್ ಅನ್ನು ಉದ್ದೇಶಿಸಿ ಜೈಲಿನಿಂದಲೇ ಈ ಉಗ್ರಗಾಮಿ ಪತ್ರ ಬರೆದಿದ್ದು ಅವನ ನಡುವಳಿಕೆ ಹಲವಾರು ಸಂಶಯಗಳಿಗೆ ಎಡೆ ಮಾಡಿಕೊಟ್ಟಿದೆ.

ಉಗ್ರಗಾಮಿಯೊಬ್ಬ ಪಾಕ್ ಕ್ರಿಕೆಟಿಗರಿಗೆ ಶುಭಾಷಯ ಕೋರುವುದು ಅವರೀರ್ವರ ನಡುವೆ ಇರುವ ನಂಟೇ ಅಥವಾ ಅದು ಇನ್ಯಾವುದೇ ಕೋಡ್ ವರ್ಡ್ ಇರಬಹುದೇ ಎಂಬುದರ ಬಗ್ಗೆ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.

ಇಂದಿನಿಂದ ಭಾರತ ಪಾಕಿಸ್ತಾನದ ಕ್ರಿಕೆಟ್ ಆರಂಭವಾಗುತ್ತಿರುವ ಬೆನ್ನ ಹಿಂದೆಯೇ ಈ ಪ್ರಕರಣವನ್ನು ಖಾಸಗಿ ಛಾನೆಲ್ ಬಹಿರಂಗಪಡಿಸಿರುವುದು ಕ್ರಿಕೆಟ್ ಪ್ರಿಯರಲ್ಲಿ ಮಂಕು ಛಾಯೆ ಮೂಡಿಸಿದೆ.
ಮತ್ತಷ್ಟು
ಬೆಂಗಳೂರು ಟೆಸ್ಟ್: ಅಂತಿಮ ಹಣಾಹಣಿಗೆ ವೇದಿಕೆ ಸಜ್ಜು
ದೇವರೇ ಕಾಪಾಡಬೇಕು: ಪ್ರಧಾನಿ ಉದ್ಗಾರ
ಮೇವು ಹಗರಣ: 71 ಆರೋಪಿಗಳಿಗೆ ಶಿಕ್ಷೆ
ರೋಗಿಗೆ ಸಾವಿನ ಹಕ್ಕು ಶಿಫಾರಸು ವಜಾ
ರೈತರ ಸಾಲಕ್ಕೆ ಬಡ್ಡಿದರ ತಗ್ಗಿಸಲು ಪರಿಶೀಲನೆ
ನಂದಿಗ್ರಾಮ: ಸಿಐಡಿ ತನಿಖೆಗೆ ಆದೇಶ