ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ ವಕೀಲರಿಂದ ಕಾಲಾವಕಾಶ ಕೋರಿಕೆ
ಚುನಾವಣೆ ಆಯೋಗ ನೀಡಿರುವ ನೋಟೀಸಿಗೆ ಉತ್ತರಿಸಲು ಇನ್ನಷ್ಟು ಕಾಲಾವಕಾಶ ನೀಡುವಂತೆ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ವಕೀಲರು ಕೋರಿದ್ದಾರೆ. ನಕಲಿ ಎನ್‌ಕೌಂಟರ್‌ನಲ್ಲಿ ಸೊಹ್ರಾಬುದ್ದೀನ್ ಶೇಖ್ ಹತ್ಯೆಯನ್ನು ಚುನಾವಣೆ ರಾಲಿಯಲ್ಲಿ ಸಮರ್ಥಿಸಿಕೊಂಡು ಮೋದಿ ಪ್ರತಿಕ್ರಿಯೆ ಕುರಿತು ನೋಟೀಸ್ ನೀಡಿದ್ದ ಚುನಾವಣೆ ಆಯೋಗವು ಉತ್ತರ ಸಲ್ಲಿಸುವ ಗಡುವನ್ನು ಶನಿವಾರದವರೆಗೆ ವಿಸ್ತರಿಸಲು ಒಪ್ಪಿಕೊಂಡಿದೆ.

ಚುನಾವಣೆ ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದರಲ್ಲಿ ಮೇಲ್ನೋಟಕ್ಕೆ ತಪ್ಪಿತಸ್ಥರಂತೆ ಕಂಡುಬಂದ ಗುಜರಾತ್ ಮುಖ್ಯಮಂತ್ರಿ ಚುನಾವಣೆ ಆಯೋಗದ ನೋಟೀಸಿಗೆ ಸೂಕ್ತ ಉತ್ತರ ನೀಡುವುದಾಗಿ ಈ ಮುಂಚೆ ತಿಳಿಸಿದ್ದರು.

ಮಾಂಗ್ರೋಲ್‌ನಲ್ಲಿ ಚುನಾವಣೆ ಭಾಷಣದ ಸಂದರ್ಭದಲ್ಲಿ ಸೊಹ್ರಾಬುದ್ದೀನ್ ಪ್ರಕರಣದ ಬಗ್ಗೆ ತಮ್ಮ ವಿವಾದಾತ್ಮಕ ಹೇಳಿಕೆಯನ್ನು ರಾಜಕೀಯ ವಿಷಯ ಎಂದು ಸಮರ್ಥಿಸಿಕೊಂಡ ಮೋದಿ ಚುನಾವಣೆ ಆಯೋಗದ ನೋಟೀಸಿಗೆ ಸೂಕ್ತ ಉತ್ತರ ನೀಡುವುದಾಗಿ ತಿಳಿಸಿದ್ದಾರೆ. ಗುಜರಾತ್ ಮುಖ್ಯಮಂತ್ರಿ ಮಣಿನಗರ ವಿಧಾನಸಭೆ ಕ್ಷೇತ್ರದ ಅಭ್ಯರ್ಥಿಯಾಗಿದ್ದು. ಎರಡನೇ ಹಂತದಲ್ಲಿ ಡಿ.16ರಂದು ಅಲ್ಲಿ ಚುನಾವಣೆ ನಡೆಯಲಿದೆ.
ಮತ್ತಷ್ಟು
ವಿಷಾನಿಲ ಸೇವಿಸಿ ನಾಲ್ವರ ಸಾವು
ಪ್ರಭಾಕರನ್ ಹತ್ಯೆಗೆ ರಾಜೀವ್ ನೀಡಿದ್ದ ಆದೇಶ
ಉಗ್ರಗಾಮಿಯಿಂದ ಪಾಕ್ ಕ್ರಿಕೆಟಿಗರಿಗೆ ಶುಭ ಹಾರೈಕೆ
ಬೆಂಗಳೂರು ಟೆಸ್ಟ್: ಅಂತಿಮ ಹಣಾಹಣಿಗೆ ವೇದಿಕೆ ಸಜ್ಜು
ದೇವರೇ ಕಾಪಾಡಬೇಕು: ಪ್ರಧಾನಿ ಉದ್ಗಾರ
ಮೇವು ಹಗರಣ: 71 ಆರೋಪಿಗಳಿಗೆ ಶಿಕ್ಷೆ