ಜಮ್ಮು ಕಾಶ್ಮೀರದಲ್ಲಿ ಮೈಕೊರೆಯುವ ಚಳಿಯ ನಡುವೆ ಭದ್ರತಾ ಪಡೆಗಳು ಕಾವಲು ಕಾಯುತ್ತಿದ್ದು, ದೇಶಾಭಿಮಾನ ಅವರಿಗೆ ಇಂತಹ ಸ್ಫೂರ್ತಿ ಉಕ್ಕಿಸಿದೆ. ನಮ್ಮ ದೇಶದ ಬಗ್ಗೆ ಅಪಾರ ಅಭಿಮಾನವಿದ್ದು, ನಾವು ತೀವ್ರವಾಗಿ ಪ್ರೀತಿಸುವ ದೇಶವನ್ನು ರಕ್ಷಿಸಲು ಎಂತಹ ಕಷ್ಟವನ್ನಾದರೂ ಎದುರಿಸಲು ಸಿದ್ಧವಿರುವುದಾಗಿ ಕೇಂದ್ರ ಮೀಸಲು ಪೊಲೀಸ್ ಪಡೆಯ ಎ.ಕೆ. ಮಿಶ್ರಾ ಹೇಳುತ್ತಾರೆ.
ಮೊಹಮ್ಮದ್ ಗಿಯಾಸುದ್ದೀನ್ ಎಂಬ ಇನ್ನೊಬ್ಬ ಯೋಧ , ಇಂತಹ ಕಠಿಣ ಹವಾಮಾನದಲ್ಲಿ ಕರ್ತವ್ಯಬದ್ಧರಾಗಿರುವುದು ಸವಾಲಿನ ಕೆಲಸ. ಸರ್ಕಾರ ನಮಗೆ ಬೆಚ್ಚಗಿನ ಉಡುಪುಗಳನ್ನು ಕೊಟ್ಟಿದೆ. ನಾವು ಸರ್ಕಾರದ ಸೇವಕರಾಗಿ ನಮ್ಮ ಕರ್ತವ್ಯವನ್ನು ಮಾಡುತ್ತೇವೆ ಎಂದು ವಿಧೇಯರಾಗಿ ನುಡಿಯುತ್ತಾರೆ.
ಸೇವೆಗೆ ಮುಡಿಪಾಗಿರುವ ಅವರ ಕರ್ತವ್ಯಪ್ರಜ್ಞೆಯನ್ನು ಶ್ಲಾಘಿಸಿರುವ ಮೀಸಲು ಪಡೆಯ ಉಪ ಇನ್ಸ್‌ಪೆಕ್ಟರ್ ಜನರಲ್ ನಥಾನಿಯಲ್, ಭದ್ರತಾ ಪಡೆಗಳು ಒಂದೊಮ್ಮೆ ಕಾರ್ಯಾಚರಣೆಗೆ ಇಳಿದರೆ ಸಂಪೂರ್ಣ ಗಮನ ಕರ್ತವ್ಯದ ಮೇಲಿದ್ದು ಕಠಿಣ ಹವಾಮಾನಕ್ಕೆ ಜಗ್ಗುವುದಿಲ್ಲ ಎಂದು ಹೇಳಿದ್ದಾರೆ.
ಇತ್ತೀಚೆಗೆ ಕಣಿವೆಯಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 4.8 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದೆ. ಹವಾಮಾನ ಇಲಾಖೆಯು ಉಷ್ಣಾಂಶದಲ್ಲಿ ಇನ್ನಷ್ಟು ಕುಸಿತ ಉಂಟಾಗುವ ಬಗ್ಗೆ ಮುನ್ಸೂಚನೆ ನೀಡಿದ್ದಾರೆ.
|