ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ತಪ್ಪಾಗಿ ಅರ್ಥೈಸಿದ ಪತ್ರಿಕೆಗಳು: ಬುದ್ಧದೇವ್
ಭಗವಾನ್ ರಾಮನ ಅಸ್ತಿತ್ವವೇ ಇಲ್ಲವೆಂದು ಹೇಳಿಕೆ ನೀಡಿ ವಿವಾದಕ್ಕೆ ಗುರಿಯಾಗಿದ್ದ ಪಶ್ಚಿಮಬಂಗಾಳದ ಮುಖ್ಯಮಂತ್ರಿ ಬುದ್ಧದೇವ್ ಭಟ್ಟಾಚಾರ್ಯ ತಮ್ಮ ಹೇಳಿಕೆಯನ್ನು ಮಾಧ್ಯಮಗಳು ತಪ್ಪಾಗಿ ಅರ್ಥೈಸಿವೆ ಎಂದು ಶನಿವಾರ ತಿಳಿಸಿದ್ದಾರೆ.

ರವೀಂದ್ರನಾಥ ಠಾಗೋರ್ ಅವರ ಭಾಷಾ ಓ ಛಾಂಡಾ ಎಂಬ ಗೀತೆಯಲ್ಲಿನ ಕೆಲವು ಸಾಲುಗಳನ್ನು ಉಲ್ಲೇಖಿಸಿ "ರಾಮನ ಜನ್ಮಸ್ಥಳವು ಕವಿಯ ಮನಸ್ಸಿನಲ್ಲಿದೆ.ಅದು ಅಯೋಧ್ಯೆಗಿಂತ ಹೆಚ್ಚು ವಾಸ್ತವವಾಗಿದೆ" ಎಂದು ಹೇಳಿದಾಗ ಮಾಧ್ಯಮದ ಕೆಲವು ಮಂದಿ ತಮ್ಮ ಹೇಳಿಕೆಯನ್ನು ತಿರುಚಿ ಬರೆದರೆಂದು ಬುದ್ಧದೇವ್ ನುಡಿದರು.

ಇತ್ತೀಚೆಗೆ ಕೊಲ್ಕತಾದಲ್ಲಿ ಬಾಬ್ರಿ ಮಸೀದಿಯ 15ನೇ ಕರಾಳದಿನಾಚರಣೆ ಅಂಗವಾಗಿ ನಡೆದ ಸಮಾರಂಭದಲ್ಲಿ "ರಾಮನು ಕವಿಯ ಕಲ್ಪನೆ. ರಾಮಸೇತು ವಿವಾದವೆಂದರೆ ಏನು? ರಾಮಸೇತು ಬಗ್ಗೆ ಅವರು ಪ್ರತಿಭಟನೆ ನಡೆಸುವುದೇಕೆ? ರಾಮಸೇತು ಸಮುದ್ರದಲ್ಲಿ ನಿಸರ್ಗದತ್ತವಾಗಿ ನಿರ್ಮಾಣವಾಗಿದೆ.

ಅದಕ್ಕೆ ಧಾರ್ಮಿಕ ಲೇಪ ಸೃಷ್ಟಿಸಲು ಅವರು ಯತ್ನಿಸುತ್ತಿದ್ದಾರೆ" ಎಂದು ಬುದ್ಧದೇವ್ ಹೇಳಿದ್ದಾರೆಂದು ಮಾಧ್ಯಮಗಳು ವರದಿ ಮಾಡಿದ್ದವು, ರಾಮಸೇತುವನ್ನು ಸಮಾಜದ ಒಡಕಿಗೆ ಒಂದು ಅಸ್ತ್ರವಾಗಿ ಬಿಜೆಪಿ ಉಪಯೋಗಿಸುತ್ತಿದೆಯೆಂದು ಭಟ್ಟಾಚಾರ್ಯ ಹೇಳಿದ್ದರು.
ಮತ್ತಷ್ಟು
ಗಂಗಾಸೇನೆ ಗಂಗಾನದಿ ರಕ್ಷಣೆಗೆ ಕಂಕಣಬದ್ಧ
ಯೋಧರಿಗೆ ಸ್ಥೂರ್ತಿ ಉಕ್ಕಿಸಿದ ದೇಶಾಭಿಮಾನ
ಅಡಾಮ್ಸ್ ಬ್ರಿಡ್ಜ್ ಮಾನವ ನಿರ್ಮಿತ
ಮೋದಿ ವಕೀಲರಿಂದ ಕಾಲಾವಕಾಶ ಕೋರಿಕೆ
ವಿಷಾನಿಲ ಸೇವಿಸಿ ನಾಲ್ವರ ಸಾವು
ಪ್ರಭಾಕರನ್ ಹತ್ಯೆಗೆ ರಾಜೀವ್ ನೀಡಿದ್ದ ಆದೇಶ