ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ ಕುರಿತೇ "ಸಾವಿನ ವ್ಯಾಪಾರಿ" ಪ್ರತಿಕ್ರಿಯೆ
ಸೋನಿಯಾ ಗಾಂಧಿ ಅವರ "ಸಾವಿನ ವ್ಯಾಪಾರಿ" ಪ್ರತಿಕ್ರಿಯೆ ನರೇಂದ್ರ ಮೋದಿ ಕುರಿತದ್ದಲ್ಲ ಎಂದು ಹೇಳಿದ್ದ ಕಾಂಗ್ರೆಸ್ ಈಗ ಧ್ವನಿ ಬದಲಿಸಿ ಗುಜರಾತ್ ಮುಖ್ಯಮಂತ್ರಿಯನ್ನು ಕುರಿತೇ ಹೇಳಿದ್ದೆಂದು ಖಡಾಖಂಡಿತವಾಗಿ ಹೇಳಿದೆ. ಕಪಿಲ್ ಸಿಬಾಲ್ ಅವರ ರಕ್ಷಣಾತ್ಮಕ ಹೇಳಿಕೆಯನ್ನು ಅಲ್ಲಗಳೆದ ಎಐಸಿಸಿ ವಕ್ತಾರ ಅಭಿಷೇಕ್ ಸಿಂಗ್ವಿ, ಸಾವಿನ ವ್ಯಾಪಾರಿ ಪದ ಪ್ರಯೋಗ ಮೋದಿಯನ್ನು ಗುರಿಯಾಗಿಸಿ ಹೇಳಿದ್ದೆಂದು ತಿಳಿಸಿದ್ದಾರೆ.

ಸೋನಿಯ ಅವರ ಹೇಳಿಕೆ ಮೋದಿಯನ್ನು ಉಲ್ಲೇಖಿಸಿದ್ದಲ್ಲ ಎಂಬ ಸಿಬಾಲ್ ಹೇಳಿಕೆ ಮತ್ತು ಸಿಂಘ್ವಿ ಹೇಳಿಕೆ ತದ್ವಿರುದ್ಧವಾಗಿದೆ. "ಸೋನಿಯಾ ಹೇಳಿಕೆ ನೀಡಿದ್ದು ಸ್ಪಟಿಕದಷ್ಟು ಸ್ಪಷ್ಟವಾಗಿದೆ. ನರೇಂದ್ರ ಮೋದಿಯ ನಡವಳಿಕೆ, ಅವರ ಮಾತಿನ ಧಾಟಿ ಮತ್ತು ಲೋಪಗಳನ್ನು ಗಮನಿಸಿ ಸೋನಿಯಾ ತದ್ವಿರುದ್ಧ ಹೇಳಿಕೆ ನೀಡಿದ್ದಾರೆ.

ಅವರು ಮೋದಿಯನ್ನು ವರ್ಣಿಸಿದ ರೀತಿಗೆ ನಮ್ಮ ಬೆಂಬಲವಿದೆ" ಎಂದು ಸಿಂಘ್ವಿ ನುಡಿದು ಕ್ಷಮಾಪಣೆ ಧೋರಣೆ ತಾಳುವ ಪ್ರಶ್ನೆಯೇ ಇಲ್ಲವೆಂದು ಹೇಳಿದರು. ಸೋನಿಯಾ ತಮ್ಮ ಭಾಷಣದ ಬಗ್ಗೆ ಚುನಾವಣೆ ಆಯೋಗಕ್ಕೆ ಸ್ಪಷ್ಟನೆ ನೀಡುತ್ತಾರೆಯೇ ಎಂಬ ಪ್ರಶ್ನೆಗೆ ಅವರು ಸ್ಪಷ್ಟನೆ ನೀಡುವುದೇನೂ ಇಲ್ಲ. ಎಲ್ಲವನ್ನೂ ಕ್ಯಾಮೆರಾ ಸೆರೆಹಿಡಿದಿದೆ ಎಂದು ಸಿಂಘ್ವಿ ಹೇಳಿದರು.
ಮತ್ತಷ್ಟು
ಸೋನಿಯಾ ವಿರುದ್ಧ ಕ್ರಮಕ್ಕೆ ಆಗ್ರಹ
ತಪ್ಪಾಗಿ ಅರ್ಥೈಸಿದ ಪತ್ರಿಕೆಗಳು: ಬುದ್ಧದೇವ್
ಗಂಗಾಸೇನೆ ಗಂಗಾನದಿ ರಕ್ಷಣೆಗೆ ಕಂಕಣಬದ್ಧ
ಯೋಧರಿಗೆ ಸ್ಥೂರ್ತಿ ಉಕ್ಕಿಸಿದ ದೇಶಾಭಿಮಾನ
ಅಡಾಮ್ಸ್ ಬ್ರಿಡ್ಜ್ ಮಾನವ ನಿರ್ಮಿತ
ಮೋದಿ ವಕೀಲರಿಂದ ಕಾಲಾವಕಾಶ ಕೋರಿಕೆ