ಸೊಹ್ರಾಬುದ್ದೀನ್ ಶೇಖ್ ಎನ್‌ಕೌಂಟರ್ ಕುರಿತು ಎದ್ದಿರುವ ವಿವಾದಗಳ ನಡುವೆ, ತಮಗೆ ಬೆದರಿಕೆಯ ಕರೆಗಳು ಬರುತ್ತಿದ್ದು, ತಮಗೆ ಒದಗಿಸಿರುವ ಭದ್ರತೆ ಸಮರ್ಪಕವಾಗಿಲ್ಲ ಎಂದು ಸೊಹ್ರಾಬುದ್ದೀನ್ ಸೋದರ ರುಬಾಬುದ್ದೀನ್ ಭಾನುವಾರ ದೂರಿದ್ದಾರೆ.
ಸೊಹ್ರಾಬುದ್ದೀನ್ ಬಗ್ಗೆ ಮುಖ್ಯಮಂತ್ರಿ ನರೇಂದ್ರ ಮೋದಿ ನೀಡಿದ ಪ್ರತಿಕ್ರಿಯೆ ಕುರಿತು ಅವರ ವಿರುದ್ಧ ಪ್ರಕರಣ ದಾಖಲಿಸುವಂತೆ ರುಬಾಬುದ್ದೀನ್ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದು, ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬರುತ್ತಿರುವ ಬೆದರಿಕೆ ಕರೆಗಳ ಬಗ್ಗೆ ರಾಜ್ಯಪೊಲೀಸರಿಗೆ ಮಾಹಿತಿ ನೀಡಿರುವುದಾಗಿ ನುಡಿದರು.
ಕೆಲವು ಅಜ್ಞಾತ ದೂರವಾಣಿ ಸಂಖ್ಯೆಗಳಿಂದ ನನಗೆ ಬೆದರಿಕೆ ಕರೆಗಳು ಬರುತ್ತಿವೆ. ಕೇಸ್ ವಾಪಸು ತೆಗೆದುಕೊಳ್ಳದಿದ್ದರೆ ನನ್ನನ್ನು ಮತ್ತು ಕುಟುಂಬವನ್ನು ಮುಗಿಸುವುದಾಗಿ ಕರೆ ಮಾಡಿದವರು ಬೆದರಿಕೆ ಹಾಕಿದ್ದಾರೆಂದು ಅವರು ತಿಳಿಸಿದ್ದಾರೆ."
ಒಂದು ಕರೆ ಕೊಲ್ಕತಾದಿಂದ ಇತ್ತೀಚೆಗೆ ಬಂದಿತ್ತು, ಈ ಬಗ್ಗೆ ಪೊಲೀಸರಿಗೆ ಮತ್ತು ಐಬಿ ಅಧಿಕಾರಿಗಳಿಗೆ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಧ್ಯಪ್ರದೇಶದಲ್ಲಿ ವಾಸಿಸುವ ರಬಾಬುದ್ದೀನ್ ಸಮಾರಂಭವೊಂದರ ನಿಮಿತ್ತ ಇಲ್ಲಿಗೆ ಆಗಮಿಸಿದಾಗ ಹೇಳಿದರು.
|