ಸರ್ಕಾರ ಭಾರತ-ಅಮೆರಿಕ ನಾಗರಿಕ ಪರಮಾಣು ಒಪ್ಪಂದ ಕುರಿತು ಐಎಇಎ ಜತೆ ಮಾತುಕತೆ ಸ್ಥಗಿತಗೊಳಿಸಬೇಕೆಂಬ ಸಿಪಿಎಂನ ಹರಿತವಲ್ಲದ ಮಾತನ್ನು ಕಾಂಗ್ರೆಸ್ ತಳ್ಳಿಹಾಕಿದೆ.
ಎಡಪಕ್ಷಗಳು ಮತ್ತು ಯುಪಿಎ ನಡುವೆ ಸಮನ್ವಯ ಸಮಿತಿ ಸಭೆಯಲ್ಲಿ ಮಾಡಿಕೊಂಡ ಒಪ್ಪಂದದ ಪ್ರಕಾರ ಐಎಇಎ ಜತೆ ಮಾತುಕತೆ ನಡೆಸಲಾಗುವುದು ಎಂದು ಪಕ್ಷದ ವಕ್ತಾರ ಅಭಿಷೇಕ್ ಸಿಂಘ್ವಿ ಹೇಳಿದರು.
ಐಎಇಎ ಜತೆ ಡಿಸೆಂಬರ್ ತಿಂಗಳು ಕಳೆದ ಬಳಿಕವೂ ಸರ್ಕಾರ ಮಾತುಕತೆ ಮುಂದುವರಿಸಿದರೆ ಮಧ್ಯಂತರ ಚುನಾವಣೆ ನಡೆಸುವುದಾಗಿ ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ಪ್ರತಿಕ್ರಿಯೆಗೆ ಅವರು ಉತ್ತರಿಸುತ್ತಿದ್ದರು.
|