ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್ ಚುನಾವಣಾ ಪ್ರಚಾರ ಅಂತ್ಯ
ಆಡಳಿತಾರೂಢ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ನಡುವೆ ವಾಕ್ ಸಮರವನ್ನು ಕಂಡ ಗುಜರಾತ್ ಚುನಾವಣೆಯ ಮೊದಲನೇ ಹಂತದ ಚುನಾವಣಾ ಪ್ರಚಾರವು ಭಾನುವಾರ ಅಂತ್ಯಗೊಂಡಿದೆ.

182 ಸದಸ್ಯರನ್ನೊಳಗೊಂಡ ರಾಜ್ಯ ಅಸೆಂಬ್ಲಿಯ 87 ಸ್ಥಾನಗಳಿಗೆ ಡಿಸೆಂಬರ್ 11ರಂದು ಚುನಾವಣೆ ನಡೆಯಲಿದೆ. ಉಳಿದ ಸ್ಥಾನಗಳ ಮತದಾನವು ಡಿಸೆಂಬರ್ 16ರಂದು ನಡೆಯಲಿದೆ.

ಗುಜರಾತಿನಲ್ಲಿ ಹಿಂದೂ ಭಯೋತ್ಪಾದನೆಯಿತ್ತು ಎಂಬ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಡಿಗ್ವಿಜಯ್ ಸಿಂಗ್ ಅವರ ಟೀಕೆ ಹಾಗೂ ಸೋನಿಯಾಗಾಂಧಿಯವರ ಸಾವಿನ ವ್ಯಾಪಾರಿ ಎಂಬ ಹೇಳಿಕೆಗಳು ರಾಜ್ಯರಾಜಕೀಯ ವಾತಾವರಣದಲ್ಲಿ ವಿವಾದ ಹುಟ್ಟು ಹಾಕಿತ್ತು.

ಚುನಾವಣಾ ಆಯೋಗದಿಂದ ನೋಟೀಸು ಪಡೆಯಲು ಕಾರಣವಾದ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ಹೇಳಿಕೆಗಳು ಚರ್ಚೆಯ ಮುಖ್ಯ ವಿಷಯವಾಗಿದೆ.

ದಕ್ಷಿಣ ಗುಜರಾತ್, ಸೌರಾಷ್ಟ್ರ ಮತ್ತು ಕುಚ್ ಪ್ರದೇಶಗಳಲ್ಲಿ 87 ಅಸೆಂಬ್ಲಿ ಸ್ಥಾನಗಳಿಗಾಗಿ 53 ಮಹಿಳೆಯರು ಸೇರಿದಂತೆ ಸ್ಪರ್ಧಿಸುತ್ತಿರುವ 669 ಅಭ್ಯರ್ಥಿಗಳ ಭವಿಷ್ಯವನ್ನು ಸುಮಾರು 1,78,77,771 ಮತದಾರರು ನಿರ್ಧರಿಸಲಿದ್ದಾರೆ.
ಮತ್ತಷ್ಟು
ಕಾರಟ್ ಬೆದರಿಕೆಗೆ ಜಗ್ಗದ ಕಾಂಗ್ರೆಸ್
ಸೊಹ್ರಾಬುದ್ದೀನ್ ಸೋದರನಿಗೆ ಬೆದರಿಕೆ ಕರೆ
ಅಭಿವೃದ್ಧಿ ಕಾಣದ ಗೋಧ್ರಾ ಮುಸ್ಲಿಮರು
ತಸ್ಲೀಮಾ ಶರಣಾಗತಿ: ಬುದ್ಧಿಜೀವಿಗಳು ವಿಷಾದ
ಮೋದಿ ಕುರಿತೇ "ಸಾವಿನ ವ್ಯಾಪಾರಿ" ಪ್ರತಿಕ್ರಿಯೆ
ಸೋನಿಯಾ ವಿರುದ್ಧ ಕ್ರಮಕ್ಕೆ ಆಗ್ರಹ