ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮೋದಿ ವಿರುದ್ಧ ಅರ್ಜಿ ಬುಧವಾರ ವಿಚಾರಣೆ
PTI
ಸುಪ್ರೀಂಕೋರ್ಟ್ ಸೋಮವಾರ ಗುಜರಾತಿನ ಮುಖ್ಯಮಂತ್ರಿ ನರೇಂದ್ರ ಮೋದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂಬ ಎರಡು ಪ್ರತ್ಯೇಕ ಅರ್ಜಿಗಳನ್ನು ಕುರಿತು ವಿಚಾರಣೆಯನ್ನು ಬುಧವಾರಕ್ಕೆ ಮುಂದೂಡಿದೆ.. ಸೊಹ್ರಾಬುದ್ದೀನ್ ಶೇಖ್ ಅವರನ್ನು ನಕಲಿ ಎನ್‌ಕೌಂಟರ್‌ನಲ್ಲಿ ಹತ್ಯೆ ಮಾಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆಂದು ಆರೋಪಿಸಿ ಮೋದಿ ವಿರುದ್ಧ ಈ ಅರ್ಜಿಗಳನ್ನು ಸಲ್ಲಿಸಲಾಗಿದೆ.

ನ್ಯಾಯಮೂರ್ತಿ ತರುಣ್ ಚಟರ್ಜಿ ನೇತೃತ್ವದ ಪೀಠವು ಈ ಅರ್ಜಿಗಳನ್ನು ಬುಧವಾರ ವಿಚಾರಣೆಗೆ ಎತ್ತಿಕೊಳ್ಳಲಿದೆ. ಸೊಹ್ರಾಬುದ್ದೀನ್ ಸೋದರನ ಪರವಾಗಿ ಹಿರಿಯ ವಕೀಲ ದುಷ್ಯಂತ ದೇವ್ ಒಂದು ಅರ್ಜಿಯನ್ನು ಸಲ್ಲಿಸಿದ್ದರೆ ಪ್ರಶಾಂತ್ ಭೂಷಣ್ ಅವರು ಎರಡನೇ ಅರ್ಜಿಯನ್ನು ಜಾವೇದ್ ಅಕ್ತರ್ ಪರವಾಗಿ ಸಲ್ಲಿಸಿದ್ದಾರೆ.

ಸೊಹ್ರಾಬುದ್ದೀನ್ ನಕಲಿ ಎನ್‌ಕೌಂಟರ್ ಬಗ್ಗೆ ಮೋದಿ ಸಮರ್ಥನೆ ಕುರಿತು ವಿಚಾರಣೆ ನಡೆಸಬೇಕೆಂದುಎರಡೂ ಅರ್ಜಿಗಳಲ್ಲಿ ಕೋರಲಾಗಿದೆ. ಸೊಹ್ರಾಬುದ್ದೀನ್ ಬಗ್ಗೆ ಪ್ರತಿಕ್ರಿಯೆ ನೀಡಿದ ಮೋದಿ ವಿರುದ್ಧ ಕೇಸು ದಾಖಲು ಮಾಡುವಂತೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿರುವ ರುಬಾಬುದ್ದೀನ್ ತಮಗೆ ಮತ್ತು ತಮ್ಮ ಕುಟುಂಬಕ್ಕೆ ಬಂದಿರುವ ಬೆದರಿಕೆಗಳ ಬಗ್ಗೆ ಪೊಲೀಸರಿಗೆ ದೂರು ನೀಡಿರುವುದಾಗಿ ತಿಳಿಸಿದ್ದಾರೆ.

ಏತನ್ಮಧ್ಯೆ, ಚುನಾವಣೆ ಆಯೋಗದ ನೋಟೀಸಿಗೆ ಪ್ರತಿಕ್ರಿಯಿಸಿದ ಮೋದಿಗೆ ಉತ್ತರ ನೀಡುವ ನಿರ್ಧಾರವನ್ನು ಮುಂದೂಡಿದೆ. ಮೋದಿಯ ಭಾಷಣದಲ್ಲಿ ಸೊಹ್ರಾಬುದ್ದೀನ್ ಎನ್‌ಕೌಂಟರ್ ಹತ್ಯೆಯನ್ನು ಸಮರ್ಥಿಸಿಕೊಂಡಿದ್ದು, ಹಿಂಸೆಗೆ ಪ್ರಚೋದನೆ ನೀಡಿದಂತೆ ಮತ್ತು ರಾಜಕೀಯ ಲಾಭಕ್ಕಾಗಿ ಧರ್ಮವನ್ನು ದುರುಪಯೋಗ ಮಾಡಿದಂತಾಗುತ್ತದೆ ಎಂದು ನೋಟೀಸಿನಲ್ಲಿ ತಿಳಿಸಲಾಗಿತ್ತು.

ಮೋದಿ ತಮ್ಮ ಪ್ರತಿಕ್ರಿಯೆಯಲ್ಲಿ ಚುನಾವಣೆ ನೀತಿ ಸಂಹಿತೆಯನ್ನು ತಾವು ಉಲ್ಲಂಘಿಸಿದ್ದೇವೆಂಬ ವಿಷಯವನ್ನು ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ಚುನಾವಣೆ ಆಯೋಗ ನೀಡಿದ ನೋಟೀಸು ಪರಿಶೀಲನೆ ಮಾಡಿರದ ಸುಳ್ಳು ವರದಿಗಳ ಆಧಾರದ ಮೇಲಿದೆಯೆಂದು ಮೋದಿ ದೂರಿದ್ದಾರೆ.
ಮತ್ತಷ್ಟು
ರೈಲು ಹಳಿತಪ್ಪಿ ಒಬ್ಬರ ಸಾವು, 70 ಜನರಿಗೆ ಗಾಯ
ಗುಜರಾತ್ ಚುನಾವಣಾ ಪ್ರಚಾರ ಅಂತ್ಯ
ಕಾರಟ್ ಬೆದರಿಕೆಗೆ ಜಗ್ಗದ ಕಾಂಗ್ರೆಸ್
ಸೊಹ್ರಾಬುದ್ದೀನ್ ಸೋದರನಿಗೆ ಬೆದರಿಕೆ ಕರೆ
ಅಭಿವೃದ್ಧಿ ಕಾಣದ ಗೋಧ್ರಾ ಮುಸ್ಲಿಮರು
ತಸ್ಲೀಮಾ ಶರಣಾಗತಿ: ಬುದ್ಧಿಜೀವಿಗಳು ವಿಷಾದ