ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರೈಲುಗಳ ಬಹಿಷ್ಕಾರಕ್ಕೆ ಪ್ರಯಾಣಿಕರ ನಿರ್ಧಾರ
ಒಂದು ನಿರ್ದಿಷ್ಟ ಮಾರ್ಗದಲ್ಲಿ ಅಸಮರ್ಪಕ ರೈಲು ಸಂಚಾರದ ವಿರುದ್ಧ ಪ್ರತಿಭಟನೆ ನಡೆಸುವ ಸಲುವಾಗಿ ಪಶ್ಚಿಮ ರೈಲ್ವೆಯ ಸಬರ್ಬನ್ ಮಾರ್ಗದಲ್ಲಿ ರೈಲುಗಳಿಗೆ ಬಹಿಷ್ಕಾರ ಹಾಕಲು ನೂರಾರು ಪ್ರಯಾಣಿಕರು ಸೋಮವಾರ ನಿರ್ಧರಿಸಿದರು. ಸೋಮವಾರ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6ಗಂಟೆಯವರೆಗೆ ಪ್ರವಾಸಿ ಅಧಿಕಾರ್ ಆಂದೋಳನ ಸಮಿತಿ ಈ ಬಹಿಷ್ಕಾರಕ್ಕೆ ಕರೆ ನೀಡಿದೆ.

ದಕ್ಷಿಣ ಮುಂಬೈನ ಚರ್ಚ್‌ಗೇಟ್ ಮತ್ತು ಸಬರ್ಬನ್ ವಿರಾರ್ ನಡುವೆ ಇನ್ನಷ್ಟು ರೈಲುಗಳನ್ನು ಓಡಿಸುವಂತೆ ಈ ಸಮಿತಿ ಒತ್ತಾಯಿಸಿ ಪ್ರತಿಭಟನೆ ನಡೆಸುತ್ತಿದೆ.ಪ್ರತಿಭಟನೆ ಶಾಂತಿಯುತವಾಗಿ ನಡೆಯಲಿದ್ದು, ರೈಲುಗಳಿಗೆ ತಡೆಯೊಡ್ಡುವ ಅಥವಾ ಪ್ರಯಾಣಕ್ಕೆ ತಡೆಯೊಡ್ಡುವುದಿಲ್ಲ ಎಂದು ಪಾಸ್ ಸಂಚಾಲಕ ಶೈಲೇಂದ್ರ ಕಾಂಬ್ಲೆ ತಿಳಿಸಿದರು.

ಪ್ರಯಾಣಿಕರು ಎದುರಿಸುತ್ತಿರುವ ಅಮಾನವೀಯ ಸ್ಥಿತಿಗತಿಗಳ ವಿರುದ್ಧ ಪ್ರತಿಭಟಿಸಲು ಮೀರಾ ರಸ್ತೆ ಮತ್ತು ವಿರಾರ್ ನಿಲ್ದಾಣಗಳ ನಡುವೆ ಘೋಷಣೆ ಕೂಗುವುದು ಮತ್ತು ಪಿಕೆಟಿಂಗ್ ನಡೆಸುವ ಮೂಲಕ ಈ ಸಂಘಟನೆ ಪ್ರತಿಭಟನೆ ನಡೆಸಲಿದೆ ಎಂದು ಅವರು ನುಡಿದರು.
ಮತ್ತಷ್ಟು
ಮೋದಿ ವಿರುದ್ಧ ಅರ್ಜಿ ಬುಧವಾರ ವಿಚಾರಣೆ
ರೈಲು ಹಳಿತಪ್ಪಿ ಒಬ್ಬರ ಸಾವು, 70 ಜನರಿಗೆ ಗಾಯ
ಗುಜರಾತ್ ಚುನಾವಣಾ ಪ್ರಚಾರ ಅಂತ್ಯ
ಕಾರಟ್ ಬೆದರಿಕೆಗೆ ಜಗ್ಗದ ಕಾಂಗ್ರೆಸ್
ಸೊಹ್ರಾಬುದ್ದೀನ್ ಸೋದರನಿಗೆ ಬೆದರಿಕೆ ಕರೆ
ಅಭಿವೃದ್ಧಿ ಕಾಣದ ಗೋಧ್ರಾ ಮುಸ್ಲಿಮರು