ಆಧುನಿಕ ಜಗತ್ತಿನಲ್ಲಿ ಆಧುನಿಕ ಸೇನೆಯು ಜ್ಞಾನಾಧಾರಿತ ಶಕ್ತಿ ಎಂದು ಹೊಸದಾಗಿ ನೇಮಕಗೊಂಡ ಯೋಧರನ್ನು ಉದ್ದೇಶಿಸಿ ಪ್ರಧಾನಮಂತ್ರಿ ಮನಮೋಹನ ಸಿಂಗ್ ಸೋಮವಾರ ತಿಳಿಸಿದರು. "ನಿಮ್ಮ ಕಾರ್ಯನಿರ್ವಹಣೆಯಲ್ಲಿ ಹೆಚ್ಚು ದಕ್ಷತೆ ಮತ್ತು ಹೆಚ್ಚು ಆಧುನಿಕತೆ ಅಳವಡಿಸುವುದು ಇಂದಿನ ಸವಾಲಾಗಿದೆ. ಜ್ಞಾನಾಧಾರಿತ ಯುಗದಲ್ಲಿ ಪ್ರತಿಯೊಬ್ಬ ಸೈನಿಕ ಯೋಚಿಸುವ ಯಂತ್ರ" ಎಂದು ಅವರು ನುಡಿದರು.
ಸೈನಿಕರ ಸೇವಾ ಸ್ಥಿತಿಗತಿ ಸುಧಾರಣೆಗೆ ಎಲ್ಲ ರೀತಿಯ ಬಂಡವಾಳ ಹೂಡುವ ಭರವಸೆಯನ್ನು ಅವರು ನೀಡಿದರು. ಭಾರತೀಯ ಮಿಲಿಟರಿ ಅಕಾಡೆಮಿಯಿಂದ ತೇರ್ಗಡೆಯಾದ ಯುವ ಸೇನಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಅವರು ಸೇನಾ ಪಡೆಗೆ ಉತ್ತಮ ಶಿಕ್ಷಣ ಮತ್ತು ತರಬೇತಿ ಪಡೆದ ಸೈನಿಕರ ಅಗತ್ಯವಿದೆ ಎಂದು ತಿಳಿಸಿ ರಕ್ಷಣಾ ಸಿದ್ಧತೆಗೆ ವಿಜ್ಞಾನ, ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನವನ್ನು ಅಳವಡಿಸುವ ಮಹತ್ವವನ್ನು ಹೇಳಿದರು.
ನಮ್ಮ ಸರ್ಕಾರ ತಂತ್ರಜ್ಞಾನ ಆಧುನೀಕರಣಕ್ಕೆ ಸಂಪೂರ್ಣ ಬದ್ಧವಾಗಿದೆ. ಸೇನಾಪಡೆ ತರಬೇತಿ ಮತ್ತು ಸಾಮಗ್ರಿಗಳ ಪೂರೈಕೆಗೆ ಅಗತ್ಯವಾದ ಎಲ್ಲ ಬಂಡವಾಳ ಹೂಡುವುದಾಗಿ ಅವರು ನುಡಿದರು.
|