ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೇಂದ್ರದ ಮಲತಾಯಿ ಧೋರಣೆಗೆ ಟೀಕೆ
ರಾಜ್ಯಕ್ಕೆ ಕೇಂದ್ರ ಸರ್ಕಾರದ ಮಲತಾಯಿ ಧೋರಣೆ ಮತ್ತು ತಾರತಮ್ಯದ ನೀತಿಗಳ ವಿರುದ್ಧ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಲು ಪಂಜಾಬ್ ಸರ್ಕಾರ ನಿರ್ಧರಿಸಿದೆ. ಅಮೃತಸರದ ಕೈಗಾರಿಕೋದ್ಯಮಿಗಳ ಜತೆ ಸಂವಾದ ಕಾರ್ಯಕ್ರಮದ ನೇಪಥ್ಯದಲ್ಲಿ ರಾಜ್ಯ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ವಿಕ್ರಮ್ ಸಿಂಗ್ ಮಜಿಥಿಯ ಸೋಮವಾರ ಈ ವಿಷಯವನ್ನು ಪ್ರಕಟಿಸಿದರು.

ಕಳೆದ 5 ವರ್ಷಗಳಲ್ಲಿ ಪಂಜಾಬ್ ಆರ್ಥಿಕ ಸ್ಥಿತಿ ಕುಸಿದಿದ್ದು, ಕೃಷಿ ಕ್ಷೇತ್ರ ಶೇ.2 ಬೆಳವಣಿಗೆ ಸಾಧಿಸಿದೆ ಮತ್ತು ಉತ್ಪಾದನಾ ಕ್ಷೇತ್ರ ಶೇ.2.8 ಬೆಳವಣಿಗೆ ಸಾಧಿಸಿದೆ. ವಿದೇಶಿ ನೇರ ಹೂಡಿಕೆಯಲ್ಲಿ ಪಂಜಾಬ್ ಪಾಲು ಶೇ.1.25ರಷ್ಟಿದ್ದರೆ ನೆರೆಯ ಹರ್ಯಾಣ ಶೇ.5ರಷ್ಟಿರುವುದು ಕೇಂದ್ರದ ಆದ್ಯತಾ ನೀತಿಗೆ ಸಾಕ್ಷಿಯಾಗಿದೆ ಎಂದು ಅವರು ನುಡಿದರು.

ಸಂಪೂರ್ಣ ಪಂಜಾಬ್‌ಗೆ ಅಥವಾ ಕನಿಷ್ಟ ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರದ ನೆರೆಯಲ್ಲಿರುವ ಪ್ರದೇಶಗಳಿಗಾದರೂ ಸಹಾಯಧನ ನೀಡಬೇಕೆಂದು ಪಂಜಾಬ್ ಸರ್ಕಾರ ಒತ್ತಾಯಿಸುತ್ತಿದೆ ಎಂದು ಅವರು ನುಡಿದರು.
ಮತ್ತಷ್ಟು
ಆಡ್ವಾಣಿ ಪ್ರಧಾನಮಂತ್ರಿ ಅಭ್ಯರ್ಥಿ
ಸೇನೆಯ ಆಧುನೀಕರಣಕ್ಕೆ ಪ್ರಧಾನಿ ಭರವಸೆ
ಲಕ್ಷ್ಮಣರೇಖೆ ದಾಟದಂತೆ ಕೆಳಕೋರ್ಟ್‌ಗಳಿಗೆ ಎಚ್ಚರಿಕೆ
ರೈಲುಗಳ ಬಹಿಷ್ಕಾರಕ್ಕೆ ಪ್ರಯಾಣಿಕರ ನಿರ್ಧಾರ
ಮೋದಿ ವಿರುದ್ಧ ಅರ್ಜಿ ಬುಧವಾರ ವಿಚಾರಣೆ
ರೈಲು ಹಳಿತಪ್ಪಿ ಒಬ್ಬರ ಸಾವು, 70 ಜನರಿಗೆ ಗಾಯ