ಪರಮಾಣು ಒಪ್ಪಂದದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಸಿಪಿಎಂ ಹೊಸ ಗಡುವನ್ನು ವಿಧಿಸಿರುವ ಹಿನ್ನೆಲೆಯಲ್ಲಿ ತಾನು ಚುನಾವಣೆಗೆ ಸಿದ್ಧವಿರುವುದಾಗಿ ಬಿಜೆಪಿ ಹೇಳಿಕೊಂಡಿದೆ.
ಆದರೆ ಅದೇ ಗಳಿಗೆಯಲ್ಲಿ "ಇಂತಹ ಬೆದರಿಕೆಯನ್ನು ವಾಮಪಕ್ಷಗಳು ಒಡ್ಡಿದ್ದು ಇದೇ ಮೊದಲಬಾರಿಯಲ್ಲ. ಹತ್ತಾರು ಬಾರಿ ಇಂತಹ ಬೆದರಿಕೆಯ ಅಸ್ತ್ರಗಳನ್ನು ಬಿಟ್ಟಿದ್ದಾರೆಂದು" ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ವರದಿಗಾರರಿಗೆ ತಿಳಿಸಿದರು.
ಯಾವಾಗ ಚುನಾವಣೆ ನಡೆದರೂ ಅದಕ್ಕೆ ಸಿದ್ಧರಾಗಿರುವುದಾಗಿ ಸಿಂಗ್ ಹೇಳಿದರು. ಗುಜರಾತ್ ಮುಖ್ಯಮಂತ್ರಿ ಮೋದಿ ಅವರಿಗೆ ಸಾವಿನ ವ್ಯಾಪಾರಿ ಎಂದು ಪ್ರತಿಕ್ರಿಯಿಸಿದ ಸೋನಿಯಾ ಅವರಿಗೆ ಚುನಾವಣೆ ಆಯೋಗ ನೋಟೀಸ್ ನೀಡಿದ್ದನ್ನು ಅವರು ಸ್ವಾಗತಿಸಿ ಚುನಾವಣೆ ಆಯೋಗ ಸರಿಯಾದ ಕೆಲಸವನ್ನೇ ಮಾಡಿದೆಯೆಂದು ಹೇಳಿದರು.
|