ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಇಂದು ಗುಜರಾತ್ ಚುನಾವಣೆ
ಗುಜರಾತ್‌‌ನಲ್ಲಿ ಮಂಗಳವಾರ ನಡೆಯಲಿರುವ ಪ್ರಥಮ ಹಂತದ ವಿಧಾನಸಭಾ ಚುನಾವಣೆಯಲ್ಲಿ, ಹಾಲಿ ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವಾರು ನಾಯಕರುಗಳ ಭವಿಷ್ಯ ನಿರ್ಧಾರವಾಗಲಿದೆ.

ಆಡಳಿತರೂಢ ಭಾರತೀಯ ಜನತಾ ಪಕ್ಷ ಹಾಗೂ ಕಾಂಗ್ರೆಸ್ ವಾಗ್ದಾಳಿಗಳ ಮೂಲಕ ಚುನಾವಣಾ ಪ್ರಚಾರ ಕಳೆದ ಹಲವಾರು ದಿನಗಳಿಂದ ತಾರಕಕ್ಕೇರಿ, ಹತ್ತು ಹಲವು ವಿವಾದಗಳನ್ನು ಸಹ ಸೃಷ್ಟಿಸಿತ್ತು.

ಅಧಿಕಾರದ ಗದ್ದುಗೆ ಏರುವಲ್ಲಿ ಶತಾಯ-ಗತಾಯ ಪ್ರಯತ್ನಕ್ಕೆ ಇಳಿದಿರುವ ಮೋದಿ ಈ ಬಾರಿಯೂ ಹಲವು ತಂತ್ರಗಳವನ್ನು ಬಳಸಿ ಭರ್ಜರಿ ಪ್ರಚಾರ ಮಾಡಿದ್ದರೆ, ಬಿಜೆಪಿ ಬಂಡಾಯ ನಾಯಕರು, ಬಿಎಸ್ಪಿ, ಪಕ್ಷೇತರರ ಗುಂಪು ಮೋದಿ ಆಡಳಿತದ ವಿರುದ್ಧ ಹರಿಹಾಯ್ದಿದ್ದವು.

ಒಟ್ಟು 182 ಸದಸ್ಯ ಬಲವನ್ನು ಹೊಂದಿರುವ ವಿಧಾನಸಭೆಗೆ, ಇಂದು ಮೊದಲ ಹಂತದಲ್ಲಿ ಡಿಸೆಂಬರ್ 11 ರಂದು 87 ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ನಡೆಯಲಿದ್ದು, ಉಳಿದ ಕ್ಷೇತ್ರಗಳಲ್ಲಿ ಡಿಸೆಂಬರ್ 16 ರಂದು ಚುನಾವಣೆ ನಡೆಯಲಿದೆ.

ಇಂದು ನಡೆಯವಲಿರುವ ಈ ದಕ್ಷಿಣ ಗುಜರಾತ್, ಸೌರಾಷ್ಟ್ರ ಹಾಗೂ ಕಚ್ ಪ್ರಾಂತ್ಯದ 87 ವಿಧಾನಸಭಾ ಕ್ಷೇತ್ರಗಳಲ್ಲಿ 53 ಮಹಿಳಾ ಅಭ್ಯರ್ಥಿಗಳು ಸೇರಿದಂತೆ ವಿವಿಧ ಪಕ್ಷಗಳ ಒಟ್ಟು 669 ಅಭ್ಯರ್ಥಿಗಳು ಕಣದಲ್ಲಿದ್ದು, 1,78,77,771 ಮಂದಿ ಮತದಾರರು, ಈ ಅಭ್ಯರ್ಥಿಗಳ ಭವಿಷ್ಯ ನಿರ್ಧರಿಸಲಿದ್ದಾರೆ.

2002ರಲ್ಲಿ ಈ ವ್ಯಾಪ್ತಿಯಲ್ಲಿ ಬಿಜೆಪಿ 39 ಕ್ಷೇತ್ರಗಳಲ್ಲಿ ಜಯ ಸಾಧಿಸಿದ್ದರೆ, ಕಾಂಗ್ರೆಸ್ 18 ಸ್ಥಾನವನ್ನಷ್ಟೆ ಪಡೆದುಕೊಂಡಿತ್ತು. ಒಂದು ಕ್ಷೇತ್ರ ಪಕ್ಷೇತರರ ಪಾಲಾಗಿತ್ತು. ಎರಡೂ ಹಂತದ ಚುನಾವಣೆಯಲ್ಲಿ ಚಲಾವಣೆಯಾದ ಮತಗಳ ಎಣಿಕೆ ಕಾರ್ಯ ಡಿಸೆಂಬರ್ 23ರಂದು ನಡೆಯಲಿದೆ.
ಮತ್ತಷ್ಟು
ಚುನಾವಣೆಗೆ ಸಿದ್ಧ: ರಾಜನಾಥ್ ಸಿಂಗ್
ಕೇಂದ್ರದ ಮಲತಾಯಿ ಧೋರಣೆಗೆ ಟೀಕೆ
ಆಡ್ವಾಣಿ ಪ್ರಧಾನಮಂತ್ರಿ ಅಭ್ಯರ್ಥಿ
ಸೇನೆಯ ಆಧುನೀಕರಣಕ್ಕೆ ಪ್ರಧಾನಿ ಭರವಸೆ
ಲಕ್ಷ್ಮಣರೇಖೆ ದಾಟದಂತೆ ಕೆಳಕೋರ್ಟ್‌ಗಳಿಗೆ ಎಚ್ಚರಿಕೆ
ರೈಲುಗಳ ಬಹಿಷ್ಕಾರಕ್ಕೆ ಪ್ರಯಾಣಿಕರ ನಿರ್ಧಾರ