ಭಾರತದಲ್ಲಿ ಮರಣವು ಸಹ ಜೀವನದ ಒಂದು ಅಂಗವಾಗಿ ಪರಿಣಮಿಸಿದ್ದರೆ, ಅಹ್ಮದಾಬಾದ್‌ನ ಒಂದು ರೆಸ್ಟೊರೆಂಟ್‌ನಲ್ಲಿ ಮರಣ ಭೋಜನ ಕೂಟದ ಒಂದು ಭಾಗವಾಗಿದೆ. ಚಟುವಟಿಕೆಯಿಂದ ಕೂಡಿರುವ ನಗರದ ನ್ಯೂ ಲಕ್ಕಿ ರೆಸ್ಟೊರೆಂಟ್ ಸುವಾಸನೆಭರಿತ ಚಹಾ ಮತ್ತು ಬೆಣ್ಣೆಲೇಪಿತ ಬ್ರೆಡ್‌ಗೆ ಹೆಸರಾದಂತೆ ಮೇಜುಗಳ ನಡುವೆ ಗೋರಿಗಳಿರುವುದಕ್ಕೂ ಹೆಸರು ಪಡೆದಿದೆ.
ವೃದ್ಧರು ಸುದ್ದಿಪತ್ರಿಕೆ ತಿರುವಿ ಹಾಕುತ್ತಾ ರಾಜಕೀಯದ ಬಗ್ಗೆ ಲೋಕಾಭಿರಾಮವಾಗಿ ಈ ಸ್ಥಳದಲ್ಲಿ ಚರ್ಚೆ ಮಾಡುತ್ತಾರೆ. ಯುವ ದಂಪತಿಗಳು ಮೊಂಬತ್ತಿ ಬೆಳಕಿನಲ್ಲಿ ಭೋಜನ ಮಾಡುವುದು ಇದೇ ಜಾಗದಲ್ಲಿ. ಗೋರಿಗಳ ಮೇಲೆ ಹಚ್ಚಿದ ಮೊಂಬತ್ತಿಗಳಿಂದ ಸ್ಥಳಕ್ಕೆ ಕಳೆಕಟ್ಟುತ್ತದೆ.
ಶತಮಾನದ ಹಿಂದಿನ ಮುಸ್ಲಿಂ ಸಮಾಧಿ ಸ್ಥಳದ ಮೇಲೆ ಕೃಷ್ಣನ್ ಕುಟ್ಟಿ ನಾಯರ್ ಸರಿಸುಮಾರು 40 ವರ್ಷಗಳಿಂದ ಹೊಟೆಲಿನ ವ್ಯಾಪಾರ ನಡೆಸಿದ್ದಾರೆ. ಆದರೆ ನೆಲದಡಿಯಲ್ಲಿ ಚಿರನಿದ್ರೆಗೆ ಮುಳುಗಿದವರು ಯಾರೆಂಬ ಬಗ್ಗೆ ಅವರಿಗೆ ಅರಿವಿಲ್ಲ. ಸಣ್ಣ ಸಿಮೆಂಟ್ ಶವಪೆಟ್ಟಿಗೆಗಳಂತೆ ಗೋಚರಿಸುವ ಈ ಗೋರಿಗಳನ್ನು ಗ್ರಾಹಕರು ಮೆಚ್ಚಿದ್ದಾರೆ.
ಇಲ್ಲಿನ ವೇಟರ್‌ಗಳಿಗೆ ಈ ಜಾಗವು ಬಸ್ ಚಾಲಕನಿಗೆ ರೂಟ್ ತಿಳಿದಷ್ಟೇ ಕರಗತವಾಗಿದೆ. ಪ್ರತಿಯೊಂದು ಕೈಯಲ್ಲಿ ಚಹಕಪ್ ಹಿಡಿದು ಗೋರಿಗಳ ನಡುವೆ ಸೂಕ್ಷ್ಮವಾಗಿ ತೆರಳುವ ಕಲೆಯನ್ನು ಅವರು ಕರಗತ ಮಾಡಿಕೊಂಡಿದ್ದಾರೆ. ಈ ಗೋರಿಗಳು ಬಹುಶಃ 16ನೇ ಶತಮಾನದ ಸೂಫಿ ಸಂತನಿಗೆ ಸೇರಿದ್ದಿರಬಹುದೆಂದು ಅಹ್ಮದಾಬಾದ್ ನಿವೃತ್ತ ಪ್ರಾಧ್ಯಾಪಕ ಹೇಳುತ್ತಾರೆ.
|