ಉತ್ತರಭಾರತದಲ್ಲಿ ಮೈಕೊರೆಯುವ ಚಳಿಯಿಂದ ಜನರು ನಡುಗುತ್ತಿದ್ದು, ಜಮ್ಮು ಕಾಶ್ಮೀರ ಮತ್ತು ಹಿಮಾಚಲ ಪ್ರದೇಶದ ಕೆಲವು ಪ್ರದೇಶಗಳಲ್ಲಿ ಶೂನ್ಯ ಉಷ್ಣಾಂಶ ದಾಖಲಾಗಿದೆ. ಈ ಪ್ರದೇಶದಲ್ಲಿ ಐವರು ಸತ್ತಿರುವ ವರದಿಯಾಗಿದೆ. ಉತ್ತರಪ್ರದೇಶದ ಜಾನ್‌ಪುರ ಮತ್ತು ಮುಜಾಫರ್‌ನಗರ್‌ನಲ್ಲಿ ಶೀತಗಾಳಿಯಿಂದ ಮೂವರು ವ್ಯಕ್ತಿಗಳು ಸತ್ತಿದ್ದಾರೆ. ಜಮ್ಮು ಮತ್ತು ಹೋಶಿಯಾರ್‌ಪುರದ ಪಂಜಾಬ್‌ನಲ್ಲಿ ತಲಾ ಒಬ್ಬರು ಮೃತಪಟ್ಟಿರುವ ವರದಿಯಾಗಿದೆ.
ಹಿಮಾಚಲಪ್ರದೇಶದ ಶಿಮ್ಲಾ ಈ ಋತುಮಾನದ ಪ್ರಥಮ ಹಿಮಪಾತಕ್ಕೆ ಸಾಕ್ಷಿಯಾಯಿತು.ಅಲ್ಲಿನ ಉಷ್ಣಾಂಶ 0.7 ಡಿಗ್ರಿ ಸೆಲ್ಸಿಯಸ್‌ಗೆ ಇಳಿಮುಖವಾಗಿದೆ. ಕಾಲ್ಪಾದಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 4.1 ಡಿಗ್ರಿ ದಾಖಲಾಗಿದೆ.
ಜಮ್ಮು ಕಾಶ್ಮೀರದ ಎತ್ತರದ ಪ್ರದೇಶಗಲ್ಲಿ ಹಿಮಪಾತವಾಗಿದ್ದರೆ, ಕಾರ್ಗಿಲ್ ವಲಯದಲ್ಲಿ ಕನಿಷ್ಠ ಉಷ್ಣಾಂಶ ಮೈನಸ್ 7 ಡಿಗ್ರಿಗೆ ಇಳಿದಿದೆ. ಮೌಂಟ್ ಅಬು ರಾಜಸ್ತಾನದಲ್ಲಿ ಅತೀ ಶೀತಪ್ರದೇಶವಾಗಿದ್ದು, ಅಲ್ಲಿ ಉಷ್ಣಾಂಶ 3 ಡಿಗ್ರಿಗೆ ಇಳಿದಿದೆ. ರಾಷ್ಟ್ರೀಯ ರಾಜಧಾನಿಯಲ್ಲಿ ದಟ್ಟವಾದ ಮಂಜು ಆವರಿಸಿದ್ದು, ಕನಿಷ್ಠ ಉಷ್ಣಾಂಶ 8.8 ಡಿಗ್ರಿ ದಾಖಲಾಗಿದೆ. ಆದರೆ ವಿಮಾನಗಳು ವೇಳಾಪಟ್ಟಿಯಂತೆ ಸಂಚರಿಸಿದವು.
|