ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರ ಹಿತಾಸಕ್ತಿ ದೃಷ್ಟಿಯಿಂದ ಅಣುಬಂಧಕ್ಕೆ ವಿರೋಧ
PTI
ಯುಪಿಎ ಸರ್ಕಾರ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ನಿರ್ಧಾರ ಕೈಗೊಳ್ಳದಂತೆ ಖಾತರಿಗೆ ಭಾರತ-ಅಮೆರಿಕ ಪರಮಾಣು ಒಪ್ಪಂದವನ್ನು ವಿರೋಧಿಸುತ್ತಿರುವುದಾಗಿ ಸಿಪಿಎಂ ಸೋಮವಾರ ಸ್ಪಷ್ಟಪಡಿಸಿದೆ.

ಯುಪಿಎ ಸರ್ಕಾರಕ್ಕೆ ನಿರ್ಣಾಯಕ ಬಾಹ್ಯ ಬೆಂಬಲ ನೀಡಿದ್ದರೂ ಕೂಡ ಸಿಪಿಎಂ ಬಡವರ ಮತ್ತು ಕಾರ್ಮಿಕರ ಹಿತಾಸಕ್ತಿ ದೃಷ್ಟಿಯಿಂದ ಸರ್ಕಾರದಲ್ಲಿ ಪಾಲುದಾರಿಕೆ ಜತೆಗೆ ಪರಿಣಾಮಕಾರಿ ವಿರೋಧಪಕ್ಷವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಸಿಪಿಎಂ ಪ್ರಧಾನಕಾರ್ಯದರ್ಶಿ ಪ್ರಕಾಶ್ ಕಾರಟ್ ಹೇಳಿದರು. ರಾಷ್ಟ್ರದ ಹಿತಾಸಕ್ತಿ ವಿರುದ್ಧವಾಗಿ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳದಂತೆ ನಾವು ನೋಡಿಕೊಳ್ಳುತ್ತೇವೆ ಎಂದು ಪಕ್ಷದ ಅಭ್ಯರ್ಥಿ ಸಂಜಯ್ ಚೌಹಾನ್ ಪರವಾಗಿ ಚುನಾವಣಾ ರಾಲಿಯಲ್ಲಿ ಅವರು ನುಡಿದರು.

ಬಡವರ, ಕಾರ್ಮಿಕರ, ಸರ್ಕಾರಿ ನೌಕರರ ಮತ್ತು ಸಣ್ಣ ವ್ಯಾಪಾರಿಗಳ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ನಿರ್ಧಾರ ಕೈಗೊಳ್ಳಲು ಸರ್ಕಾರಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಾರಟ್ ಹೇಳಿದರು. ಅಮೆರಿಕದ ಜತೆ ಪರಮಾಣು ಒಪ್ಪಂದಕ್ಕೆ ಸಹಿ ಹಾಕದಿರುವಂತೆ ಮತ್ತು ಶಿಕ್ಷಣದಲ್ಲಿ ವಿದೇಶಿ ಹೂಡಿಕೆಗೆ ಅವಕಾಶ ನೀಡದಂತೆ ಕೇಂದ್ರ ಸರ್ಕಾರವನ್ನು ಸಿಪಿಎಂ ಒತ್ತಾಯಿಸಿರುವುದು ಇದೇ ಕಾರಣಕ್ಕೆ ಎಂದು ಅವರು ನುಡಿದರು.

2009ರಲ್ಲಿ ಅಧಿಕಾರಾವಧಿ ಮುಗಿಯುವ ತನಕ ರಾಷ್ಟ್ರದ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ನಿರ್ಧಾರ ಕೈಗೊಳ್ಳದಂತೆ ಸಿಪಿಎಂ ನೋಡಿಕೊಳ್ಳುತ್ತದೆ. ಅದಾದ ಬಳಿಕ ಪಕ್ಷವು ಭಿನ್ನ ಕಾರ್ಯತಂತ್ರ ಅನುಸರಿಸುತ್ತದೆ ಎಂದು ಅವರು ನುಡಿದರು. ಕೇಂದ್ರ ಸರ್ಕಾರದ ಶ್ರೀಮಂತ ಪರ ಆರ್ಥಿಕ ನೀತಿಗಳನ್ನು ಟೀಕಿಸಿದ ಅವರು ಶ್ರೀಮಂತರ ಆಸ್ತಿಗಳ ಮೇಲಿನ ತೆರಿಗೆ ರದ್ದು ಮಾಡಿದ ಕ್ರಮವನ್ನು ಖಂಡಿಸಿದರು.
ಮತ್ತಷ್ಟು
ಉ.ಭಾರತದಲ್ಲಿ ಹೆಪ್ಪುಗಟ್ಟಿದ ಚಳಿ
ಸಮಾಧಿಗಳ ನಡುವೆ ಹೊಟೆಲ್ ವ್ಯಾಪಾರ
ಆಯೋಗದ ನೋಟೀಸಿಗೆ ಕಾಂಗ್ರೆಸ್ ಇಂದು ಉತ್ತರ
ಇಂದು ಗುಜರಾತ್ ಚುನಾವಣೆ
ಚುನಾವಣೆಗೆ ಸಿದ್ಧ: ರಾಜನಾಥ್ ಸಿಂಗ್
ಕೇಂದ್ರದ ಮಲತಾಯಿ ಧೋರಣೆಗೆ ಟೀಕೆ