ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
8 ತರಗತಿ ವಿದ್ಯಾರ್ಥಿ ಸಹಪಾಠಿಯಿಂದ ಹತ್ಯೆ
ಗುರ್‌ಗಾವ್ ಬೋರ್ಡಿಂಗ್ ಶಾಲೆಯ 8ನೇ ತರಗತಿ ವಿದ್ಯಾರ್ಥಿಯೊಬ್ಬ ಶಾಲೆಯ ಆವರಣದಲ್ಲೇ ತನ್ನ ಸಹಪಾಠಿ ವಿದ್ಯಾರ್ಥಿಯನ್ನು ಗುಂಡಿಟ್ಟು ಹತ್ಯೆ ಮಾಡಿದ ಆಘಾತಕಾರಿ ಘಟನೆ ವರದಿಯಾಗಿದೆ. ಶಾಲಾ ಬಾಲಕರಲ್ಲೂ ಕೂಡ ಹಿಂಸಾಪ್ರವೃತ್ತಿ ಗೋಚರಿಸಿರುವುದು ಈಗ ಪೋಷಕರ ಆತಂಕಕ್ಕೆ ಕಾರಣವಾಗಿದೆ.

ಗುರ್‌ಗಾಂವ್ ಸೆಕ್ಟರ್ 45ರ ಯೂರೊ ಅಂತಾರಾಷ್ಟ್ರೀಯ ಶಾಲೆಯ ವಿದ್ಯಾರ್ಥಿ ಅಭಿಷೇಕ್ ತ್ಯಾಗಿ ಎಂದು ಸತ್ತ ಬಾಲಕನನ್ನು ಗುರುತಿಸಲಾಗಿದ್ದು, ನಗರ ಮೂಲದ ಆಸ್ತಿ ವಹಿವಾಟುದಾರರ ಪುತ್ರನೆಂದು ತಿಳಿದುಬಂದಿದೆ.

ತ್ಯಾಗಿ ಮತ್ತು ಅವನ ಇಬ್ಬರು ಸಹಪಾಠಿಗಳಾದ ವಿಕಾಸ್ ಮತ್ತು ಆಕಾಶ್ ನಡುವೆ ವೈರವೇ ಈ ಹತ್ಯೆಗೆ ಕಾರಣವೆಂದು ಪೊಲೀಸರು ತಿಳಿಸಿದ್ದಾರೆ. ಮೂವರು ವಿದ್ಯಾರ್ಥಿಗಳ ನಡುವೆ ಶಾಲೆಯ ಆವರಣದಲ್ಲಿ ಹೊಡೆದಾಟ ಉಂಟಾದ ಬಳಿಕ ಆಕಾಶ ಅತೀ ಸಮೀಪದಿಂದಲೇ ತ್ಯಾಗಿಗೆ 5 ಗುಂಡುಗಳನ್ನು ಹಾರಿಸಿದನೆಂದು ವರದಿಯಾಗಿದೆ.

ನಾಲ್ಕು ಗುಂಡುಗಳಲ್ಲಿ ಒಂದು ಗುಂಡು ಹಿಂಭಾಗಕ್ಕೆ ಮತ್ತು ಇನ್ನೆರಡು ಗುಂಡುಗಳು ಎದೆಯೊಳಗೆ ತೂರಿದ್ದರಿಂದ ತ್ಯಾಗಿ ಆಸ್ಪತ್ರೆಗೆ ಹೋಗುವ ಮಾರ್ಗದಲ್ಲೇ ಸತ್ತನೆಂದು ಹೇಳಲಾಗಿದೆ. ಆಕಾಶ್ ಮತ್ತು ವಿಕಾಸ್ ಇಬ್ಬರನ್ನೂ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ತ್ಯಾಗಿ ಆಕಾಶ್‌ಗೆ ಬಹಳ ಕಾಲದಿಂದ ಕಿರುಕುಳ ನೀಡುತ್ತಿದ್ದನೆಂದು ವಿಕಾಸ್ ಪೊಲೀಸರಿಗೆ ದೂರಿದ್ದಾನೆ.

ಆಕಾಶ್ ತಂದೆ ಕೂಡ ಆಸ್ತಿವಹಿವಾಟುದಾರರಾಗಿದ್ದು, ಪಿಸ್ತೂಲು ಅವರಿಗೆ ಸೇರಿದ್ದೆಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಯ ತಂದೆಯನ್ನು ಕೂಡ ಬಂಧಿಸುವ ಸಾಧ್ಯತೆಯಿದೆಯೆಂದು ಅವರು ತಿಳಿಸಿದ್ದು, ಆಕಾಶ್ ತಂದೆಯ ಪಿಸ್ತೂಲನ್ನು ಹೇಗೆ ಶಾಲೆಗೆ ತಂದನೆಂದು ತನಿಖೆ ನಡೆಸುತ್ತಿರುವುದಾಗಿ ಹೇಳಿದರು.
ಮತ್ತಷ್ಟು
ರಾಷ್ಟ್ರ ಹಿತಾಸಕ್ತಿ ದೃಷ್ಟಿಯಿಂದ ಅಣುಬಂಧಕ್ಕೆ ವಿರೋಧ
ಉ.ಭಾರತದಲ್ಲಿ ಹೆಪ್ಪುಗಟ್ಟಿದ ಚಳಿ
ಸಮಾಧಿಗಳ ನಡುವೆ ಹೊಟೆಲ್ ವ್ಯಾಪಾರ
ಆಯೋಗದ ನೋಟೀಸಿಗೆ ಕಾಂಗ್ರೆಸ್ ಇಂದು ಉತ್ತರ
ಇಂದು ಗುಜರಾತ್ ಚುನಾವಣೆ
ಚುನಾವಣೆಗೆ ಸಿದ್ಧ: ರಾಜನಾಥ್ ಸಿಂಗ್