ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್ ಮತದಾನ ಶಾಂತಿಯುತ
ಅತ್ಯಂತ ಬಿರುಸಿನ ಪ್ರಚಾರ ಕಂಡ ಗುಜರಾತಿನ ವಿಧಾನಸಭೆಗೆ ಮಂಗಳವಾರ ನಡೆದ ಮೊದಲ ಹಂತದ ಮತದಾನದಲ್ಲಿ ಶೇ.60 ರಷ್ಟು ಮತದಾರರು ಮತ ಚಲಾಯಿಸಿದರು. ಯಾವುದೇ ಹಿಂಸಾಚಾರದ ಘಟನೆಗಳು ಅಥವಾ ಅಡ್ಡಿಆತಂಕಗಳಿಲ್ಲದೇ ಮತದಾನವು ಶಾಂತಿಯುತವಾಗಿ ಮುಗಿಯಿತೆಂದು ವರದಿಯಾಗಿದೆ.

ಸುಮಾರು 1,78,77,771 ಮತದಾರರು 53 ಮಹಿಳಾ ಅಭ್ಯರ್ಥಿಗಳು ಸೇರಿದಂತೆ 669 ಅಭ್ಯರ್ಥಿಗಳ ಭವಿಷ್ಯವನ್ನು ಈ ಮತದಾನದ ಮೂಲಕ ನಿರ್ಧರಿಸಲಿದ್ದಾರೆ. ಚುನಾವಣೆ ಆಯೋಗವು 19,924 ಮತಗಟ್ಟೆಗಳನ್ನು ಸ್ಥಾಪಿಸಿದ್ದು, ಅನೇಕ ಎಲೆಕ್ಟ್ರಾನಿಕ್ ಮತಯಂತ್ರಗಳನ್ನು ಬಳಸಲಾಗಿದೆ.

ರಾಜ್ಯ ವಿತ್ತ ಸಚಿವ ವಾಜುಭಾಯಿ ವಾಲಾ ರಾಜ್‌ಕೋಟ್-2 ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಮತ ಚಲಾಯಿಸಿದವರಲ್ಲಿ ಪ್ರಪ್ರಥಮರೆನಿಸಿದ್ದಾರೆ. ಗುಜರಾತ್ ಪ್ರತಿಪಕ್ಷದ ನಾಯಕ ಅರ್ಜುನ್ ಮೋಡ್ವಾಡಿಯ, ಕಾಂಗ್ರೆಸ್ ಟಿಕೆಟ್ ಪಡೆದು ಸ್ಪರ್ಧಿಸುತ್ತಿರುವ ಬಿಜೆಪಿಯ ಬಂಡಾಯ ಅಭ್ಯರ್ಥಿ ಧೀರೂಬಾಯಿ ಗಜೇರಾ ಮುಂತಾದವರ ಭವಿಷ್ಯ ಈಗ ಮೊಹರಾದ ಮತಪೆಟ್ಟಿಗೆಯಲ್ಲಿ ಅಡಗಿದೆ.

ಆಡಳಿತರೂಢ ಬಿಜೆಪಿ ಮತ್ತು ಕಾಂಗ್ರಸ್-ಎನ್‌ಸಿಪಿ ಮೈತ್ರಿಕೂಟದ ನಡುವೆ ನೇರಸ್ಪರ್ಧೆ ಏರ್ಪಟ್ಟಿದ್ದು, ಬಾಲುಬಾಯಿ ತಂತಿ, ಬೇಚಾರ್ ಬದಾನಿ ಮತ್ತು ಬಾವ್ಕು ಉಂಡಾಡ್ ಕಾಂಗ್ರೆಸ್ ಟಿಕೆಟ್‌ನಲ್ಲಿ ಸ್ಪರ್ಧಿಸುತ್ತಿರುವ ಬಿಜೆಪಿಯ ಇನ್ನಿತರ ಬಂಡಾಯ ಅಭ್ಯರ್ಥಿಗಳು.
ಮತ್ತಷ್ಟು
8 ತರಗತಿ ವಿದ್ಯಾರ್ಥಿ ಸಹಪಾಠಿಯಿಂದ ಹತ್ಯೆ
ರಾಷ್ಟ್ರ ಹಿತಾಸಕ್ತಿ ದೃಷ್ಟಿಯಿಂದ ಅಣುಬಂಧಕ್ಕೆ ವಿರೋಧ
ಉ.ಭಾರತದಲ್ಲಿ ಹೆಪ್ಪುಗಟ್ಟಿದ ಚಳಿ
ಸಮಾಧಿಗಳ ನಡುವೆ ಹೊಟೆಲ್ ವ್ಯಾಪಾರ
ಆಯೋಗದ ನೋಟೀಸಿಗೆ ಕಾಂಗ್ರೆಸ್ ಇಂದು ಉತ್ತರ
ಇಂದು ಗುಜರಾತ್ ಚುನಾವಣೆ