ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚುನಾವಣೋತ್ತರ ಸಮೀಕ್ಷೆ: ಬಿಜೆಪಿಗೆ ನಷ್ಟ, ಕಾಂಗ್ರೆಸ್ ಲಾಭ
ಆರ್ಥಿಕವಾಗಿ ಪುರೋಗಾಮಿ ರಾಜ್ಯ ಎಂಬ ಕುರಿತು ಚರ್ಚೆಯಾಗಬೇಕಿದ್ದ, ಆದರೆ ಆರೋಪ-ಪ್ರತ್ಯಾರೋಪಗಳ ಕಣವಾಗಿ ಪರಿವರ್ತನೆಗೊಂಡ ಗುಜರಾತ್ ಮೊದಲ ಹಂತದ ಚುನಾವಣೆ ಮಂಗಳವಾರ ಪೂರ್ಣಗೊಂಡಿದ್ದು, ಮತದಾನೋತ್ತರ ಸಮೀಕ್ಷೆ ಪ್ರಕಾರ, 1995ರಿಂದಲೂ ರಾಜ್ಯದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಮತ್ತು ಕಾಂಗ್ರೆಸ್ ಮಧ್ಯೆ ತುರುಸಿನ ಮೇಲಾಟ ಕಂಡುಬಂದಿದೆ.

ದೇಶದ ಎರಡು ಪ್ರಧಾನ ರಾಜಕೀಯ ಪಕ್ಷಗಳ ಪ್ರತಿಷ್ಠಾ ಕಣವಾಗಿ ಮಾರ್ಪಟ್ಟಿರುವ ಗುಜರಾತಿನ ಮೊದಲ ಹಂತದ ಚುನಾವಣೆಯಲ್ಲಿ 87 ಕ್ಷೇತ್ರಗಳಲ್ಲಿ ಮತದಾನ ನಡೆದಿದ್ದು, ಇವುಗಳಲ್ಲಿ ಬಿಜೆಪಿಯು ತನ್ನ ಮುಷ್ಟಿಯೊಳಗಿರುವ 54ರಲ್ಲಿ 14 ಸ್ಥಾನಗಳನ್ನು ಕಳೆದುಕೊಳ್ಳಲಿದೆ ಎಂದು ಎನ್‌ಡಿಟಿವಿ ಸಮೀಕ್ಷೆ ತಿಳಿಸಿದರೆ, ಸ್ಟಾರ್ ನ್ಯೂಸ್ ಸಮೀಕ್ಷೆ ಪ್ರಕಾರ ಬಿಜೆಪಿ 6 ಸ್ಥಾನಗಳನ್ನು ಕಳೆದುಕೊಳ್ಳಲಿದೆ.

ಅದೇ ರೀತಿ, ಒಂದು ಸಮೀಕ್ಷೆಯು ಕಾಂಗ್ರೆಸ್ 13 ಸ್ಥಾನಗಳನ್ನು ಹೆಚ್ಚಿಸಿಕೊಳ್ಳಲಿದೆ ಎಂದು ಹೇಳಿದ್ದರೆ, ಮತ್ತೊಂದು ಸಮೀಕ್ಷೆಯ ಪ್ರಕಾರ ಕಾಂಗ್ರೆಸ್‌ಗೆ ಲಾಭವಾಗಲಿರುವ ಸೀಟುಗಳ ಸಂಖ್ಯೆ 7. ಚುನಾವಣೆಗೆ ಮೊದಲು ಈ 87ರಲ್ಲಿ ಕಾಂಗ್ರೆಸ್ ಪಕ್ಷವು 30 ಸ್ಥಾನಗಳನ್ನು ಹೊಂದಿತ್ತು.

ಉಳಿದ 95 ಕ್ಷೇತ್ರಗಳಿಗೆ ಚುನಾವಣೆಯು ಡಿಸೆಂಬರ್ 16ರಂದು ನಡೆಯಲಿದ್ದು, ಡಿ.23ರಂದು ಫಲಿತಾಂಶ ಹೊರಬೀಳಲಿದೆ.

ಉಳಿದ 95 ಕ್ಷೇತ್ರಗಳು ಬಿಜೆಪಿಯ ಭದ್ರಕೋಟೆಗಳಾಗಿರುವುದರಿಂದ, ಎರಡನೇ ಸುತ್ತಿನ ಮತದಾನವು ಬಿಜೆಪಿಗೆ ಅತ್ಯಂತ ಮಹತ್ವದ್ದಾಗಿರುತ್ತದೆ ಎಂದು ಚುನಾವಣಾ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಮತ್ತಷ್ಟು
ಗುಜರಾತ್ ಮತದಾನ ಶಾಂತಿಯುತ
8 ತರಗತಿ ವಿದ್ಯಾರ್ಥಿ ಸಹಪಾಠಿಯಿಂದ ಹತ್ಯೆ
ರಾಷ್ಟ್ರ ಹಿತಾಸಕ್ತಿ ದೃಷ್ಟಿಯಿಂದ ಅಣುಬಂಧಕ್ಕೆ ವಿರೋಧ
ಉ.ಭಾರತದಲ್ಲಿ ಹೆಪ್ಪುಗಟ್ಟಿದ ಚಳಿ
ಸಮಾಧಿಗಳ ನಡುವೆ ಹೊಟೆಲ್ ವ್ಯಾಪಾರ
ಆಯೋಗದ ನೋಟೀಸಿಗೆ ಕಾಂಗ್ರೆಸ್ ಇಂದು ಉತ್ತರ