ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಸಮರ್ಥ ಪ್ರಧಾನಿಯ ಹತಾಶೆ: ಬಿಜೆಪಿ ಪ್ರತಿ ವಾಗ್ದಾಳಿ
ಪಕ್ಷದ ಪ್ರಧಾನಿ ಅಭ್ಯರ್ಥಿಯಾಗಿ ಎಲ್.ಕೆ.ಆಡ್ವಾಣಿ ಅವರ ಉಮೇದುವಾರಿಕೆಯನ್ನು ಟೀಕಿಸಿರುವ ಪ್ರಧಾನಿ ಮನಮೋಹನ್ ಸಿಂಗ್ ವಿರುದ್ಧ ವಾಗ್ದಾಳಿ ನಡೆಸಿದ ಬಿಜೆಪಿ, ಈ ಪ್ರತಿಕ್ರಿಯೆಗಳು ಪ್ರಧಾನಿಯವರ ಹತಾಶೆ ಮತ್ತು ನಿರಾಶೆಯ ಪ್ರತೀಕ ಎಂದು ಹೇಳಿದೆ.

ಕೇಂದ್ರ ಸರಕಾರವನ್ನು ಉರುಳಿಸಲು ಎಡಪಕ್ಷಗಳು ಬೆದರಿಕೆ ಹಾಕುತ್ತಲೇ ಇದ್ದು, ಸಿಂಗ್ ಆತ್ಮವಿಶ್ವಾಸವಿಲ್ಲದ, ವಿಫಲ ಪ್ರಧಾನಿ ಮತ್ತು ಸರಕಾರ ಚಲಾಯಿಸಲು ಅಸಮರ್ಥವಾಗಿದ್ದಾರೆ ಎಂದೂ ಬಿಜೆಪಿ ಕಟುವಾಗಿ ಟೀಕಿಸಿದೆ.

ತಮ್ಮದೇ ಮನಸ್ಥಿತಿಯನ್ನು ಪರಿಗಣಿಸಿಯೇ ಅವರು ಈ ರೀತಿ ಹೇಳಿಕೆ ನೀಡುತ್ತಿದ್ದು, ಹತಾಶರಾಗಿದ್ದಾರೆ ಎಂದು ಬಿಜೆಪಿ ಉಪಾಧ್ಯಕ್ಷ ಎಂ.ವೆಂಕಯ್ಯ ನಾಯ್ಡು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರಿಂದ "ಅಪಾಯ" ಎದುರಾಗುತ್ತದೆ ಎಂಬ ಭೀತಿಯಿಂದಾಗಿಯೇ ಆಡ್ವಾಣಿಯವರನ್ನು ಪ್ರಧಾನಿ ಅಭ್ಯರ್ಥಿಯೆಂದು ಬಿಜೆಪಿ ಬಿಂಬಿಸಿದೆ ಎಂದು ವಡೋದರಾದಲ್ಲಿ ಸುದ್ದಿಗೋಷ್ಠಿಯೊಂದರಲ್ಲಿ ಪ್ರಧಾನಿ ಹೇಳಿದ್ದರು.

ಪ್ರಧಾನಿಯೊಬ್ಬರಿಂದ ನಾವು ಇಂಥ ಹೇಳಿಕೆಗಳನ್ನು ನಿರೀಕ್ಷಿಸಿರಲಿಲ್ಲ. ಪ್ರಧಾನಿಯವರು ನಿರ್ದೇಶನವನ್ನಾಗಲೀ, ಆದೇಶವನ್ನಾಗಲೀ ನೀಡುವ ಸ್ಥಿತಿಯಲ್ಲಿಲ್ಲ ಮತ್ತು ಕಾಂಗ್ರೆಸ್‌ನಲ್ಲಿ ಆಡ್ವಾಣಿ ಸ್ಥಾನಮಾನಕ್ಕೆ ಸರಿಹೊಂದುವ ಯಾವುದೇ ನಾಯಕರಿಲ್ಲದಿರುವುದರಿಂದಾಗಿ, ಆಡ್ವಾಣಿ ಹೆಸರು ಬಂದ ತಕ್ಷಣ ಅವರು ಹತಾಶಗೊಂಡಿದ್ದಾರೆ ಎಂದು ನಾಯ್ಡು ಹೇಳಿದರು.

ಮುಖ್ಯಮಂತ್ರಿ ಮೋದಿ ಬಗ್ಗೆ ಕೇಳಿದ ಪ್ರಶ್ನೆಯೊಂದಕ್ಕೆ ಉತ್ತರಿಸಿದ ನಾಯ್ಡು, ಗುಜರಾತಿನಲ್ಲಿ ಪ್ರತಿಯೊಬ್ಬರೂ ಮೋದಿ ನಾಯಕತ್ವವನ್ನೇ ಒಪ್ಪಿಕೊಂಡಿದ್ದಾರೆ. ಗುಜರಾತ್ ಅವರ ಕಾರ್ಯಕ್ಷೇತ್ರ ಎಂದರಲ್ಲದೆ, ಮೋದಿಯನ್ನು ಪ್ರಧಾನಿ ಅಭ್ಯರ್ಥಿ ಎಂದು ಬಿಂಬಿಸುವ ಯಾವುದೇ ಪ್ರಸ್ತಾಪವಿರಲಿಲ್ಲ ಎಂದೂ ಹೇಳಿದರು. ಮೋದಿ ಅವರು ಗುಜರಾತಿನಲ್ಲಿ ಪಕ್ಷವನ್ನು ಮುನ್ನಡೆಸಬೇಕು ಎಂದು ಬಿಜೆಪಿ ನಿರ್ಧರಿಸಿದೆ. ಅಲ್ಲಿಯೇ ಇದ್ದು ಅಭಿವೃದ್ಧಿ ಕೈಗೊಳ್ಳಲು ಸ್ವತಃ ಮೋದಿಯವರೇ ಇಚ್ಛಿಸಿದ್ದಾರೆ. ಐದು ಕೋಟಿ ಗುಜರಾತಿಗಳ ಅಭಿವೃದ್ಧಿಯೇ ಮೋದಿಯವರ ಗುರಿ ಎಂದು ನಾಯ್ಡು ನುಡಿದರು.
ಮತ್ತಷ್ಟು
ಚುನಾವಣೋತ್ತರ ಸಮೀಕ್ಷೆ: ಬಿಜೆಪಿಗೆ ನಷ್ಟ, ಕಾಂಗ್ರೆಸ್ ಲಾಭ
ಗುಜರಾತ್ ಮತದಾನ ಶಾಂತಿಯುತ
8 ತರಗತಿ ವಿದ್ಯಾರ್ಥಿ ಸಹಪಾಠಿಯಿಂದ ಹತ್ಯೆ
ರಾಷ್ಟ್ರ ಹಿತಾಸಕ್ತಿ ದೃಷ್ಟಿಯಿಂದ ಅಣುಬಂಧಕ್ಕೆ ವಿರೋಧ
ಉ.ಭಾರತದಲ್ಲಿ ಹೆಪ್ಪುಗಟ್ಟಿದ ಚಳಿ
ಸಮಾಧಿಗಳ ನಡುವೆ ಹೊಟೆಲ್ ವ್ಯಾಪಾರ